ETV Bharat / sports

ಡಿ.ವೈ.ಪಾಟೀಲ್​​ ಟಿ-20 ಟೂರ್ನಿಯಲ್ಲಿ ಆಡಲಿದ್ದಾರೆ ಪಾಂಡ್ಯ, ಧವನ್, ಭುವಿ

5 ತಿಂಗಳ ಹಿಂದೆ 26 ವರ್ಷದ ಹಾರ್ದಿಕ್ ಪಾಂಡ್ಯ​ ಲೋಯರ್​ ಬ್ಯಾಕ್ ಸರ್ಜರಿಗೆ ಒಳಗಾಗಿದ್ದರು. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರೂ ಫಿಟ್ನೆಸ್​​ ಸಾಬೀತುಪಡಿಸುವಲ್ಲಿ ವಿಫಲವಾದ್ದರಿಂದ ಅವರು ನ್ಯೂಜಿಲ್ಯಾಂಡ್​ ಸರಣಿಯಿಂದ ಹೊರ ಬಿದ್ದಿದ್ದರು.

Hardik Pandya
Hardik Pandya
author img

By

Published : Feb 25, 2020, 4:32 PM IST

ಮುಂಬೈ: ಗಾಯದಿಂದ ಚೇತರಿಸಿಕೊಂಡಿರುವ ಭಾರತದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ರಾಷ್ಟ್ರೀಯ ತಂಡಕ್ಕೆ ವಾಪಸಾಗುವ ಮುಂಚೆ ಡಿ.ವೈ.ಪಾಟೀಲ್​ ಟಿ-20 ಟೂರ್ನಮೆಂಟ್​ನಲ್ಲಿ ಪಾಲ್ಗೊಳ್ಳಲಿದ್ದಾರೆ.

5 ತಿಂಗಳ ಹಿಂದೆ 26 ವರ್ಷದ ಪಾಂಡ್ಯ ಲೋಯರ್​ ಬ್ಯಾಕ್ ಸರ್ಜರಿಗೆ ಒಳಗಾಗಿದ್ದರು. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರೂ ಫಿಟ್ನೆಸ್​​ ಸಾಬೀತುಪಡಿಸುವಲ್ಲಿ ವಿಫಲವಾದ್ದರಿಂದ ಅವರು ನ್ಯೂಜಿಲ್ಯಾಂಡ್​ ಸರಣಿಯಿಂದ ಹೊರ ಬಿದ್ದಿದ್ದರು.

ಇದೀಗ ನ್ಯಾಷನಲ್​ ಕ್ರಿಕೆಟ್​ ಆಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ತರಬೇತಿ ಪಡೆಯುತ್ತಿರುವ ಪಾಂಡ್ಯ ಸೋಮವಾರದಿಂದ ಆರಂಭವಾಗಿರುವ ಡಿ.ವೈ.ಪಾಟೀಲ್​ ಟಿ-20 ಟೂರ್ನಿಯಲ್ಲಿ ಆಡಲಿದ್ದಾರೆ.

D.Y. Patil T20
ಭುವನೇಶ್ವರ್​-ಶಿಖರ್ ಧವನ್​

ಗಾಯದಿಂದ ಚೇತರಿಸಿಕೊಂಡಿರುವ ಹಾರ್ದಿಕ್​ ಪಾಂಡ್ಯ ಜೊತೆಗೆ ಭುವನೇಶ್ವರ್​ ಕುಮಾರ್​ ಹಾಗೂ ಶಿಖರ್ ​ಧವನ್​ ರಿಲಯನ್ಸ್​ 1 ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಡಿ.ವೈ.ಪಾಟೀಲ್​ ಸ್ಪೋರ್ಟ್ಸ್​ ಅಕಾಡೆಮಿ ಮತ್ತು ಮುಂಬೈ ಕ್ರಿಕೆಟ್ ಅಸೋಸಿಯೇಷನ್​ನ ಅಧ್ಯಕ್ಷ ಡಾ. ವಿಜಯ್​ ಪಾಟೀಲ್​ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದ ಶಿಖರ್​ ಧವನ್​ ಹಾಗೂ ಹಾರ್ನಿಯಾ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಭುವನೇಶ್ವರ್​ ಕುಮಾರ್​ ಕೂಡ ಈ ಟೂರ್ನಿಯಲ್ಲಿ ಪಾಳ್ಗೊಂಡು ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳುವ ಯತ್ನದಲ್ಲಿದ್ದಾರೆ.

ಇವರ ಜೊತೆಗೆ ಭಾರತದ ಆಟಗಾರರಾದ ಮನೀಷ್​ ಪಾಂಡೆ, ಶ್ರೇಯಸ್​ ಅಯ್ಯರ್​, ಶಿವಂ ದುಬೆ, ಸಂಜು ಸಾಮ್ಸನ್​ ಮತ್ತು ದೇಶಿ ಕ್ರಿಕೆಟ್​ ಪ್ರತಿಭೆಗಳಾದ ಸೂರ್ಯಕುಮಾರ್ ಯಾದವ್​, ರಾಹುಲ್​ ತ್ರಿಪಾಠಿ ಮತ್ತು ಆಂಡರ್​ 19 ಸ್ಟಾರ್​ ದಿವ್ಯಾನ್ಶ್ ಸಕ್ಷೇನಾ ಬಿಪಿಸಿಎಲ್ ತಂಡದಲ್ಲಿ ಆಡಲಿದ್ದಾರೆ.

ದಿನೇಶ್ ಕಾರ್ತಿಕ್​, ಮಂದೀಪ್​ ಸಿಂಗ್​, ರಾಹುಲ್​ ತೆವಾಟಿಯಾ, ವರುಣ್ ಚಕ್ರವರ್ತಿ, ರಿತುರಾಜ್​ ಗಾಯಕವಾಡ್​ ಕೂಡಾ ಡಿ.ವೈ.ಪಾಟೀಲ್​ ಎ ತಂಡದಲ್ಲಿ ಆಡಲಿದ್ದಾರೆ. ಯುವ ವೇಗಿ, ಕಮಲೇಶ್​ ನಾಗರಕೋಟಿ, ವರುಣ್​ ಆ್ಯರೋನ್​, ಮನನ್ ವೊಹ್ರಾ ಡಿ.ವೈ.ಪಾಟೀಲ್​ ಬಿ ತಂಡದಲ್ಲಿ ಆಡಲಿದ್ದಾರೆ.

ಈ ಟೂರ್ನಿಯಲ್ಲಿ ಸಿಎಜೆ, ಇಂಕಮ್ ಟ್ಯಾಕ್ಸ್​, ಐಒಸಿ, ಬ್ಯಾಂಕ್​ ಆಫ್​ ಬರೋಡಾ ಮತ್ತು ಆರ್​ಬಿಐ ಸೇರಿದಂತೆ 16 ತಂಡಗಳು ಭಾಗವಹಿಸಲಿವೆ. ಫೈನಲ್​ ಪಂದ್ಯ ಮಾರ್ಚ್​ 6ರಂದು ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.