ಮುಂಬೈ: ಬೆಳಿಗ್ಗೆ ಏಳಲು ಹಲವರಿಗೆ ಅಲಾರಂ ಅವಶ್ಯಕತೆ ಇರುತ್ತದೆ. ಆದರೆ ಪಾಂಡ್ಯ ಬ್ರದರ್ಸ್ ತಮಗೆ ಅಲಾರಂ ಗಡಿಯಾರಗಳ ಅವಶ್ಯಕತೆ ಇಲ್ಲ ಎಂಬುದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಕೊರೊನಾ ಭೀತಿಯಿಂದ ಕಳೆದ ಮೂರು ತಿಂಗಳಿನಿಂದ ಯಾವುದೇ ಮಾದರಿಯ ಕ್ರಿಕೆಟ್ ನಡೆಯುತ್ತಿಲ್ಲ. ಹೀಗಾಗಿ ಕ್ರಿಕೆಟಿಗರು ಜಿಮ್, ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ತಮ್ಮ ಕುಟುಂಬದವರ ಜೊತೆಗಿನ ಸಂತಸದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ.
-
Who needs an alarm clock when you have Aston around 😂🐶⏰ pic.twitter.com/KD893VVS9i
— Krunal Pandya (@krunalpandya24) June 10, 2020 " class="align-text-top noRightClick twitterSection" data="
">Who needs an alarm clock when you have Aston around 😂🐶⏰ pic.twitter.com/KD893VVS9i
— Krunal Pandya (@krunalpandya24) June 10, 2020Who needs an alarm clock when you have Aston around 😂🐶⏰ pic.twitter.com/KD893VVS9i
— Krunal Pandya (@krunalpandya24) June 10, 2020
ಭಾರತ ತಂಡ ಹಾಗೂ ಮುಂಬೈ ತಂಡದ ಆಲ್ರೌಂಡರ್ ಕೃನಾಲ್ ಪಾಂಡ್ಯ ಒಂದು ವಿಡಿಯೋ ಶೇರ್ ಮಾಡಿದ್ದು, ಇದರಲ್ಲಿ ತಮ್ಮ ಪ್ರೀತಿಯ ಸಾಕು ನಾಯಿಯೊಂದು ಮಲಗಿದ್ದ ಕೃನಾಲ್ರನ್ನು ಏಳಿಸುತ್ತಿದೆ.
‘ನಿಮ್ಮ ಸುತ್ತ ಆಸ್ಟನ್(ನಾಯಿಗಳು)ಗಳಿದ್ದಾಗ ಅಲಾರಂ ಗಡಿಯಾರಗಳ ಅವಶ್ಯಕತೆ ಇರುವುದಿಲ್ಲ ಎಂದು ಬರೆದುಕೊಂಡು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕೃನಾಲ್ ಭಾರತ ತಂಡದ ಪರ 18 ಟಿ-20 ಪಂದ್ಯಗಳನ್ನಾಡಿದ್ದಾರೆ. 121 ರನ್ ಹಾಗೂ 14 ವಿಕೆಟ್ ಪಡೆದಿದ್ದಾರೆ.