ETV Bharat / sports

ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್: ಕಾರಣ ತಿಳಿಸಿದ ಜಹೀರ್ ಖಾನ್ - ಇಂಡಿಯನ್ ಪ್ರೀಮಿಯರ್ ಲೀಗ್

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ 2 ವಿಕೆಟ್​ಗಳ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಮುಂಬೈಗೆ ಹೆಚ್ಚುವರಿ ಬೌಲರ್​ನ ಕೊರತೆ ಕಂಡು ಬಂದಿತ್ತು. ಹಾರ್ದಿಕ್ ತಂಡದಲ್ಲಿದ್ದರೂ ಬೌಲಿಂಗ್ ಏಕೆ ನೀಡಲಿಲ್ಲ ಎನ್ನುವ ಗೊಂದಲ ನಿರ್ಮಾಣವಾಗಿತ್ತು.

ಮುಂಬೈ ಇಂಡಿಯನ್ಸ್
ಹಾರ್ದಿಕ್ ಪಾಂಡ್ಯ
author img

By

Published : Apr 12, 2021, 5:29 PM IST

ಚೆನ್ನೈ: ಹಾರ್ದಿಕ್ ಪಾಂಡ್ಯ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಭುಜದ ನೋವು ಕಾಣಿಸಿಕೊಳ್ಳಬಹುದೆಂದು ಬೌಲಿಂಗ್ ಮಾಡಿರಲಿಲ್ಲ. ಆದರೆ, ಭಾರತದ ಆಲ್​ರೌಂಡರ್​ ಶೀಘ್ರದಲ್ಲೇ ಚೆಂಡಿನಲ್ಲೂ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್​ನ ಕಾರ್ಯಾಚರಣೆಗಳ ನಿರ್ದೇಶಕ ಜಹೀರ್ ಖಾನ್ ತಿಳಿಸಿದ್ದಾರೆ.

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ 2 ವಿಕೆಟ್​ಗಳ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಮುಂಬೈಗೆ ಹೆಚ್ಚುವರಿ ಬೌಲರ್​ನ ಕೊರತೆ ಕಂಡು ಬಂದಿತ್ತು. ಹಾರ್ದಿಕ್ ತಂಡದಲ್ಲಿದ್ದರೂ ಬೌಲಿಂಗ್ ಏಕೆ ನೀಡಲಿಲ್ಲ ಎನ್ನುವ ಗೊಂದಲ ನಿರ್ಮಾಣವಾಗಿತ್ತು.

ಹಾರ್ದಿಕ್ ಪಾಂಡ್ಯ, ಸದಾ ಹೆಚ್ಚು ಮೌಲ್ಯ ಹೊಂದಿರುವ ಒಂದು ಪರಿಪೂರ್ಣ ಪ್ಯಾಕೇಜ್, ಎಲ್ಲರಿಗೂ ಗೊತ್ತಿದೆ. ಹಿಂದಿನ ಪಂದ್ಯದಲ್ಲಿ ಅವರು ಕೆಲಸದ ಹೊರೆಯ ಸಂಬಂಧವಾಗಿ ಬೌಲಿಂಗ್ ಮಾಡಿರಲಿಲ್ಲ, ಅವರು ಇಂಗ್ಲೆಂಡ್​ ಸರಣಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಕೊನೆಯ ಏಕದಿನ ಪಂದ್ಯದಲ್ಲಿ ಅವರು 9 ಓವರ್​ ಬೌಲಿಂಗ್ ಮಾಡಿದ್ದರು. ಅದಕ್ಕಾಗಿ ಫಿಸಿಯೋರೊಂದಿಗೆ ಸಮಾಲೋಚನೆ ನಡೆಸಿ ನಾವು ಅವರಿಗೆ ವಿಶ್ರಾಂತಿ ನೀಡುವ ನಿರ್ಧಾರ ತೆಗೆದುಕೊಂಡಿದ್ದೆವು" ಎಂದು ತಿಳಿಸಿದ್ದಾರೆ.

ಅವರಿಗೆ ಸ್ವಲ್ಪ ಭುಜದ ತೊಂದರೆಯಿತ್ತು. ಆದರೆ, ಇದರ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಆದಷ್ಟು ಬೇಗ ನೀವು ಅವರು ಬೌಲಿಂಗ್ ಮಾಡುವುದನ್ನು ನೋಡಬಹುದು. ಅವರು ಬ್ಯಾಟಿಂಗ್ ನಲ್ಲಿ ತಂಡಕ್ಕೆ ನೆರವಾಗುವ ರೀತಿಯಲ್ಲೇ ಬೌಲಿಂಗ್​ನಲ್ಲೂ ತಂಡಕ್ಕೆ ಗೆಲುವು ತಂದುಕೊಡಬಲ್ಲರೂ ಎಂಬ ವಿಶ್ವಾಸ ನಮಗಿದೆ ಎಂದು ಜಹೀರ್ ಹೇಳಿದ್ದಾರೆ.

ಪಾಂಡ್ಯ ಜೊತೆಗೆ ವೆಸ್ಟ್​ ಇಂಡೀಸ್​ ಆಲ್​ರೌಂಡರ್​ ಕೀರನ್ ಪೊಲಾರ್ಡ್​ ಕೂಡ ನಮ್ಮ 6ನೇ ಬೌಲಿಂಗ್​ಗೆ ಮತ್ತೊಂದು ಆಯ್ಕೆಯಾಗಿದ್ದಾರೆ. ಈ ವಿಭಾಗದಲ್ಲಿ ನಮಗೆ ಹೆಚ್ಚಿನ ಸಮಸ್ಯೆಯಿಲ್ಲ. ಆದರೆ, ಅದನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಅದಕ್ಕೆ ಹೊಂದಿಕೊಳ್ಳುವ ಅಗತ್ಯವಿದೆ ಎಂದು ಜಹೀರ್ ಹೇಳಿದ್ದಾರೆ.

ಇದನ್ನು ಓದಿ: ಐಪಿಎಲ್​ನಲ್ಲೂ ನನ್ನ ಡೊಮೆಸ್ಟಿಕ್ ಫಾರ್ಮ್​​ ಮುಂದುರಿಸುತ್ತೇನೆ: ದೇವದತ್​ ಪಡಿಕ್ಕಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.