ಮುಂಬೈ: ಭಾರತಕ್ಕೆ ಎರೆಡೆರಡು ವಿಶ್ವಕಪ್ ತಂದುಕೊಟ್ಟ ಯುವರಾಜ್ ಸಿಂಗ್ 2020ರ ಐಪಿಎಲ್ನಲ್ಲಾಡಲು ಬಿಸಿಸಿಐ ನಿಯಮದ ಪ್ರಕಾರ ಅನರ್ಹರಾಗಿದ್ದಾರೆ.
ಬಿಸಿಸಿಐ ನಿಯಮದ ಪ್ರಕಾರ ಯಾವೊಬ್ಬ ಭಾರತೀಯ ಕ್ರಿಕೆಟಿಗ ವಿದೇಶಿ ಲೀಗ್ಗಳಲ್ಲಿ ಆಡಲು ಬಯಸುತ್ತಾನೊ ಆತ ಬಿಸಿಸಿಐ ಅನುಧಾನಿತ ಯಾವುದೇ ಟೂರ್ನಿಗಳಲ್ಲಿ ಆಡುವಂತಿಲ್ಲ. ಈಗಾಗಿ ಯುವರಾಜ್ ಸಿಂಗ್ಗೆ 2020ರ ಲೀಗ್ನಿಂದ ಹೊರಬಿದ್ದಂತಾಗಿದೆ.
ಆದರೆ ಯುವಿ ವಿಶ್ವದ ಹಲವು ಟಿ20 ಲೀಗ್ನಲ್ಲಿ ಆಡಲಿದ್ದಾರೆ. ಈಗಾಗಲೆ ಕೆನಡಾ ಗ್ಲೋಬಲ್ ಟಿ20 ಲೀಗ್, ಅಬುಧಾಬಿ ಟಿ10 ಲೀಗ್ಗಳಲ್ಲಿ ಆಡುತ್ತಿರುವ ಯುವಿ ಇನ್ನು ಒಂದೆರಡು ವರ್ಷಗಳ ಕಾಲ ಮಾತ್ರ ಕ್ರಿಕೆಟ್ನಲ್ಲಿ ಸಕ್ರಿಯರಾಗಿರುವುದಾಗಿ ತಿಳಿಸಿದ್ದಾರೆ.
ಅದರಲ್ಲೂ ವರ್ಷದಲ್ಲಿ 3-4 ತಿಂಗಳುಗಳ ಟಿ20ಲೀಗ್ಗಳನ್ನಾಡಿ ಉಳಿದ ಸಮಯವನ್ನು ಕುಟುಂಬದ ಜೊತೆ ಕಳೆಯಲು ಬಯಸಿದ್ದು, 2-3 ವರ್ಷಗಳ ನಂತರ ಕೋಚ್ ಆಗಿ ಕಾರ್ಯ ನಿರ್ವಹಿಸಲು ಬಯಸಿರುವುದಾಗಿ ಯುವರಾಜ್ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.
ಭಾರತ ತಂಡದಕ್ಕೆ ಅತ್ಯುತ್ತಮ ಬ್ಯಾಟ್ಸ್ಮನ್, ಆಲ್ರೌಂಡರ್ ಆಗಿದ್ದ ಯುವರಾಜ್ ಸಿಂಗ್ ನಿಜಕ್ಕೂ ಒಬ್ಬ ಉತ್ತಮ ಕೋಚ್ ಆಗಬಲ್ಲರು. ಯುವಿ 15 ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತ ತಂಡದ ಪರ ಕಾಣಿಸಿಕೊಂಡಿದ್ದಾರೆ. ಭವಿಷ್ಯದ ಯುವಿ ಯೋಜನೆಗೆ ಅಭಿಮಾನಿಗಳು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ.