ಪೋರ್ಟ್ ಆಫ್ ಸ್ಪೇನ್: ದೇಶದ ಜನತೆ 73ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಖುಷಿಯಲ್ಲಿದ್ದಾರೆ. ವಿಂಡೀಸ್ ವಿರುದ್ಧ ಏಕದಿನ ಸರಣಿ ಗೆದ್ದು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಕೊಹ್ಲಿ ಪಡೆ ಉಡುಗೊರೆ ನೀಡಿದೆ.
ಬುಧವಾರ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ 6 ವಿಕೆಟ್ಗಳಿಂದ ಗೆದ್ದ ಭಾರತ ತಂಡ ಸರಣಿಯನ್ನು 2-0ಯಲ್ಲಿ ವಶಪಡಿಸಿಕೊಂಡಿದೆ. ಇದೇ ಖುಷಿಯಲ್ಲಿ ಭಾರತೀಯ ಆಟಗಾರರೆಲ್ಲಾ 73 ನೇ ಸ್ವಾತಂತ್ರ್ಯೋತ್ಸವಕ್ಕೆ ಶುಭ ಕೋರಿರುವ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಶೇರ್ ಮಾಡಿದೆ.
-
#TeamIndia wishes everyone a very Happy Independence Day
— BCCI (@BCCI) August 14, 2019 " class="align-text-top noRightClick twitterSection" data="
Jai Hind 🇮🇳#IndependenceDay pic.twitter.com/z2Ji00T2l0
">#TeamIndia wishes everyone a very Happy Independence Day
— BCCI (@BCCI) August 14, 2019
Jai Hind 🇮🇳#IndependenceDay pic.twitter.com/z2Ji00T2l0#TeamIndia wishes everyone a very Happy Independence Day
— BCCI (@BCCI) August 14, 2019
Jai Hind 🇮🇳#IndependenceDay pic.twitter.com/z2Ji00T2l0
ಭಾರತ ತಂಡದ ನಾಯಕ ಕೊಹ್ಲಿ ಈ ದಿನ ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನ. ಭಾರತೀಯ ಅಭಿಮಾನಿಗಳಿಗೆ ಸ್ವಾತಂತ್ರ್ಯ ದಿನೋತ್ಸವದ ಶುಭಾಶಯ ಎಂದು ತಿಳಿಸಿದ್ದಾರೆ.
ಕ್ಯಾಪ್ಟನ್ ಕೊಹ್ಲಿ ಜೊತೆಗೆ, ಕೋಚ್ ರವಿಶಾಸ್ತ್ರಿ, ರೋಹಿತ್ ಶರ್ಮಾ, ಜಡೇಜಾ, ಕೇದಾರ್ ಜಾಧವ್, ಕುಲ್ದೀಪ್, ಚಹಲ್, ಖಲೀಲ್ ಅಹ್ಮದ್, ಶ್ರೇಯಸ್ ಅಯ್ಯರ್ ಕೂಡ ದೇಶದ ಜನರಿಗೆ ಶುಭ ಕೋರಿದ್ದಾರೆ.