ETV Bharat / sports

ಚೊಚ್ಚಲ ಅಂತಾರಾಷ್ಟ್ರೀಯ ಶತಕ ತಂದೆಗೆ ಅರ್ಪಿಸಿದ ಹನುಮ ವಿಹಾರಿ

ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಹನುಮ ವಿಹಾರಿ ತಮ್ಮ ಚೊಚ್ಚಲ ಶತಕವನ್ನ ತಂದೆಗೆ ಅರ್ಪಿಸಿದ್ದಾರೆ.

ಹನುಮ ವಿಹಾರಿ
author img

By

Published : Sep 1, 2019, 11:10 AM IST

ಜಮೈಕಾ: ವೆಸ್ಟ್ ಇಂಡೀಸ್​ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಹನುಮ ವಿಹಾರಿ ತಮ್ಮ ಶತಕವನ್ನ ತಂದೆಗೆ ಅರ್ಪಿಸಿದ್ದಾರೆ.

Hanuma Vihari
ಹನುಮ ವಿಹಾರಿ

ಮೊದಲ ಟೆಸ್ಟ್​ ಪಂದ್ಯದಲ್ಲಿ 93 ರನ್ ಗಳಿಸಿ ಶತಕ ವಂಚಿತರಾಗಿದ್ದ ವಿಹಾರಿ ಎರಡನೇ ಪಂದ್ಯದಲ್ಲಿ ಎಚ್ಚರಿಕೆಯಿಂದ ಬ್ಯಾಟ್​ ಬೀಸಿ ಶತಕ ಸಿಡಿಸಿದ್ರು.

ಮೊದಲ ಇನ್ನಿಂಗ್ಸ್ ಬ್ಯಾಟಿಂಗ್​​ ಮುಗಿದ ನಂತರ ಮಾತನಾಡಿದ ವಿಹಾರಿ, ನಾನು 12ನೇ ವರ್ಷದ ಬಾಲಕನಿದ್ದಾಗ ನನ್ನ ತಂದೆ ನಮ್ಮನ್ನ ಅಗಲಿದ್ರು. ನಾನು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದಾಗಲೇ ನನ್ನ ಮೊದಲ ಶತಕವನ್ನ ತಂದೆಗೆ ಅರ್ಪಿಸಬೇಕೆಂದು ನಿರ್ಧಾರ ಮಾಡಿದ್ದೆ. ಇಂದು ನನಗೆ ತುಂಬಾ ಭಾವನಾತ್ಮಕ ದಿನ. ಅವರು ಎಲ್ಲೇ ಇದ್ದರು ನನ್ನ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.

ನಾನು ಮೊದಲ ದಿನ 42 ರನ್​ ಗಳಿಸಿದ ನಂತರ ರಾತ್ರಿ ನಿದ್ದೆ ಮಾಡಿಲ್ಲ. ರಾತ್ರಿ ಪೂರ್ತಿ ನಾಳೆ ಹೇಗೆ ದೊಡ್ಡ ಮೊತ್ತ​ ಕಲೆಹಾಕಬೇಕು ಎಂದು ಚಿಂತಿಸುತ್ತಿದ್ದೆ. ಅಂತಿಮವಾಗಿ ಶತಕ ಗಳಿಸಿದ್ದಕ್ಕೆ ಸಂತೋಷವಿದೆ. ಉತ್ತಮ ಜೊತೆಯಾಟ ನೀಡಿದ ಇಶಾಂತ್​ ಶರ್ಮಾಗೆ ಅಭಿನಂದನೆಗಳು ಎಂದಿದ್ದಾರೆ. ಇಶಾಂತ್​ ಶರ್ಮಾ ಜೊತೆಗೂಡಿ 122 ರನ್​ಗಳ ಜೊತೆಯಾಟವಾಡಿದ ವಿಹಾರಿ, ಶತಕ ಸಿಡಿಸಿದ್ರು.

Intro:Body:

ಕ್ರೀಡೆ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.