ಅಬುಧಾಬಿ: ಐರ್ಲೆಂಡ್ ವಿರುದ್ಧ ಸ್ಫೋಟಕ ಶತಕ ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಗುರ್ಬಾಜ್ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶಕತ ಸಿಡಿಸಿದ ಮೊದಲ ಅಫ್ಘಾನಿಸ್ತಾನ ಹಾಗೂ ವಿಶ್ವದ 16ನೇ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಇಂದು ಅಬುಧಾಬಿ ಶೇಕ್ ಜಾಯೇದ್ ಸ್ಟೇಡಿಯಂನಲ್ಲಿ ನಡೆದ 3 ಏಕದಿನ ಪಂದ್ಯಗಳ ಮೊದಲ ಪಂದ್ಯದಲ್ಲಿ ರಹಮಾನುಲ್ಲಾ ಗುರ್ಬಾಜ್ 127 ರನ್ ಸಿಡಿಸಿದರು. ಅವರ ಈ ಇನ್ನಿಂಗ್ಸ್ನಲ್ಲಿ 8 ಬೌಂಡರಿ ಹಾಗೂ 9 ಸಿಕ್ಸರ್ ಒಳಗೊಂಡಿವೆ. ಇವರ ಶತಕ ಹಾಗೂ ರಶೀದ್ ಖಾನ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ತಂಡ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 287 ರನ್ ಗಳಿಸಿತ್ತು. ರಶೀದ್ ಕೇವಲ 30 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 55 ರನ್ ಗಳಿಸಿದರು.
ಐರ್ಲೆಂಡ್ ಪರ ಆ್ಯಂಡಿ ಮೆಕ್ಬ್ರೈನ್ 5 ವಿಕೆಟ್ ಪಡೆದು ಮಿಂಚಿದರೆ, ಗ್ಯಾರೆತ್ ಡೆಲಾನಿ, ಸಿಮಿ ಸಿಂಗ್ ಹಾಗೂ ಮೆಕಾರ್ಟಿ ತಲಾ ಒಂದು ವಿಕೆಟ್ ಪಡೆದರು.
-
💥 127 runs
— ICC (@ICC) January 21, 2021 " class="align-text-top noRightClick twitterSection" data="
💥 Eight fours, nine sixes
Rahmanullah Gurbaz, the first batsman from Afghanistan to score an ODI hundred on debut 👏 pic.twitter.com/poAz6D6bfK
">💥 127 runs
— ICC (@ICC) January 21, 2021
💥 Eight fours, nine sixes
Rahmanullah Gurbaz, the first batsman from Afghanistan to score an ODI hundred on debut 👏 pic.twitter.com/poAz6D6bfK💥 127 runs
— ICC (@ICC) January 21, 2021
💥 Eight fours, nine sixes
Rahmanullah Gurbaz, the first batsman from Afghanistan to score an ODI hundred on debut 👏 pic.twitter.com/poAz6D6bfK
287 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಐರ್ಲೆಂಡ್ ವಿಕೆಟ್ ಕೀಪರ್ ಲಾರ್ಕನ್ ಟಕ್ಕರ್ ಅವರ ಅದ್ಭುತ ಬ್ಯಾಟಿಂಗ್ ಹೊರತಾಗಿಯೂ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 271 ರನ್ ಗಳಿಸಿ 16 ರನ್ಗಳ ಸೋಲು ಕಂಡಿತು. ಟಕ್ಕರ್ 96 ಎಸೆತಗಳಲ್ಲಿ ತಲಾ 3 ಬೌಂಡರಿ-ಸಿಕ್ಸರ್ಗಳ ನೆರವಿನಿಂದ 83 ರನ್ ಗಳಿಸಿದರು. ಪಾಲ್ ಸ್ಟಿರ್ಲಿಂಗ್ 39, ಕರ್ಟಿಸ್ ಕ್ಯಾಂಫರ್ 39 ರನ್ ಗಳಿಸಿ ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿದರು.
ಅಫ್ಘಾನಿಸ್ತಾನದ ಪರ ನವೀನ್ ಉಲ್ ಹಕ್ 3, ಮುಜೀಬ್ ಉರ್ ರಹಮಾನ್, ರಶೀದ್ ಖಾನ್ ತಲಾ 2, ನೈಬ್ ಮತ್ತು ನಬಿ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಸಹಕಾರಿಯಾದರು.
ಇದನ್ನು ಓದಿ:ಭಾರತ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ 16 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಇಸಿಬಿ