ಬ್ರಾಮ್ಟನ್: ಯುವರಾಜ್ ಸಿಂಗ್,ಆಫ್ರಿದಿ, ಮೆಕಲಮ್ರಂತಹ ಸ್ಟಾರ್ ಆಟಗಾರರು ಆಡುತ್ತಿರುವ ಗ್ಲೋಬಲ್ ಟಿ20 ಲೀಗ್ಗೆ ಬಾಂಬ್ ದಾಳಿಯ ಭೀತಿ ಕಾಡುತ್ತಿದೆ.
ಶುಕ್ರವಾರ ಮಂಟ್ರಿಯಲ್ ಟೈಗರ್ಸ್ ಹಾಗೂ ವಿನ್ನಿಪೆಗ್ ಹಾಕ್ಸ್ ನಡುವಿನ ಪಂದ್ಯವನ್ನು ತಾಂತ್ರಿಕ ಧೋಷ ಎಂದು 90 ನಿಮಿಷಗಳ ಕಾಲ ಆಟವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಕ್ರೀಡಾಂಗಣದಲ್ಲಿ ಅನುಮಾನಸ್ಪದ ವಸ್ತು ಪತ್ತೆಯಾಗಿರೋದೆ ಅದಕ್ಕೆ ಅಸಲಿ ಕಾರಣ ಎಂದು ತಿಳಿದುಬಂದಿದೆ.
ಶುಕ್ರವಾರ ಪಂದ್ಯಾರಂಭಕ್ಕೂ ಮುನ್ನ ಗ್ಲೋಬಲ್ ಟಿ20 ಕೆನಡಾ ತನ್ನ ಅಫಿಶಿಯಲ್ ಟ್ವಿಟರ್ನಲ್ಲಿ ತಾಂತ್ರಿಕ ದೋಷದಿಂದ ಪಂದ್ಯ ತಡವಾಗಿ ಆರಂಭವಾಗಲಿದೆ ಎಂದು ಟ್ವೀಟ್ ಮಾಡಿದ್ದರು. ಇದರಿಂದ ಆಟಗಾರರು ಮೈದಾನಕ್ಕೆ ಆಗಮಿಸಿರಲಿಲ್ಲ. ಸುಮಾರು 90 ನಿಮಿಷಗಳ ಕಾಲ ಮೈದಾನದಲ್ಲಿ ಬಾಂಗ್ ನಿಷ್ಕ್ರಿಯ ದಳ, ಶ್ವಾನದಳ ಮೈದಾನದಲ್ಲಿ ದೊರೆತ ಅನುಮಾನಾಸ್ಪದ ವಸ್ತುವನ್ನು ಪರಿಶೀಲನೆ ನಡೆಸಿದ ನಂತರ ಪಂದ್ಯವನ್ನು ಆರಂಭಿಸಲಾಗಿತ್ತು.
ಪರಿಶೀಲನೆ ನಂತರ ಈ ಪಂದ್ಯವನ್ನು 12 ಓವರ್ಗಳಿಗೆ ಸೀಮಿತ ಮಾಡಿ ಆಡಿಸಲಾಗಿತ್ತು. ಆಸ್ಟ್ರೇಲಿಯಾದ ಜಾರ್ಜ್ ಬೈಲಿ ನೇತೃತ್ವದ ತಂಡ135 ರನ್ಗಲಿಳಿಸಿ ಹಾಕ್ಸ್ ತಂಡಕ್ಕೆ 136 ರನ್ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನೆತ್ತಿದ ಹಾಕ್ಸ್ 12 ಓವರ್ಗಳಲ್ಲಿ 111 ರನ್ಗಳಿಸಿ 24 ರನ್ಗಳ ಸೋಲುಕಂಡಿತ್ತು.