ETV Bharat / sports

ಗ್ಲೋಬಲ್​ ಟಿ20 ಲೀಗ್​ನಲ್ಲಿ 'ಸಿಕ್ಸರ್​ ಸರದಾರ'ನ 2ನೇ ಇನ್ನಿಂಗ್ಸ್​ ​ಶುರು! - ಸಿಕ್ಸರ್​ ಸರದಾರ

ನಿವೃತ್ತಿ ನಂತರ ಮೊದಲ ಬಾರಿಗೆ ಬ್ಯಾಟ್​ ಹಿಡಿಯುತ್ತಿರುವ 'ಸಿಕ್ಸರ್​ ಸರದಾರ' ಯುವರಾಜ್​ ಸಿಂಗ್​ ಇಂದಿನಿಂದ ಆರಂಭವಾಗಲಿರುವ ಗ್ಲೋಬಲ್​ ಟಿ20 ಲೀಗ್​ನಲ್ಲಿ ಕ್ರಿಕೆಟ್​ನಲ್ಲಿ ತಮ್ಮ 2ನೇ ಇನ್ನಿಂಗ್ಸ್​ ಆರಂಭಿಸಲಿದ್ದಾರೆ.

Global T20 Canada
author img

By

Published : Jul 25, 2019, 7:53 PM IST

ಬ್ರಾಮ್ಟನ್​: ಕಳೆದ ತಿಂಗಳಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ ಯುವರಾಜ್​ ಸಿಂಗ್​ ಇಂದಿನಿಂದ ಕೆನಡಾದಲ್ಲಿ ಆರಂಭವಾಗಲಿರುವ ಗ್ಲೋಬಲ್​ ಟಿ20 ಲೀಗ್​ನಲ್ಲಿ ಕಣಕ್ಕಿಳಿಯಲಿದ್ದಾರೆ.

ಎರಡನೇ ಆವೃತ್ತಿಯ ಗ್ಲೋಬಲ್​ ಟಿ20 ಲೀಗ್​ ಇಂದಿನಿಂದ ಆರಂಭವಾಗುತ್ತಿದ್ದು ಭಾರತದ ಮಾಜಿ ಆಲ್​ರೌಂಡರ್​ ಟೊರೆಂಟೋ ನ್ಯಾಷನಲ್​ ತಂಡದ ಪರ ಕಣಕ್ಕಿಳಿಯುತ್ತಿದ್ದು, ಪದಾರ್ಪಣೆ ಪಂದ್ಯದಲ್ಲಿಯೇ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

ಯುವರಾಜ್​ ನೇತೃತ್ವದ ಟೊರೆಂಟೋ ನ್ಯಾಷನಲ್​ ತಂಡ ಹಾಳಿ ಚಾಂಪಿಯನ್​ ವಾಂಕೋವರ್​ ನೈಟ್ಸ್ ವಿರುದ್ಧ ಇಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಈ ತಂಡವನ್ನು ಯುನಿವರ್ಸಲ್​ ಬಾಸ್​ ಕ್ರಿಸ್​ ಗೇಲ್​ ಮುನ್ನಡೆಸುತ್ತಿದ್ದಾರೆ.

ಯುವಿ ತಂಡದಲ್ಲಿ ಕಿವೀಸ್​ ದಿಗ್ಗಜ ಬ್ರೆಂಡನ್​ ಮೆಕಲಮ್​, ಕೀರನ್​ ಪೊಲಾರ್ಡ್​​, ಹೆನ್ರಿಚ್​ ಕ್ಲಾಸನ್​, ಮಿಚೆಲ್​ ಮೆಕ್ಲೆನ್​ಘಾನ್​ ಹಾಗೂ ಯುವಿ ಗೆಳೆ ಮನ್​ಪ್ರೀತ್​ ಗೋನಿ ಇದ್ದಾರೆ. ಇತ್ತ ಗೇಲ್​ ತಂಡದಲ್ಲಿ ಪಾಕಿಸ್ತಾನದ ಮಲಿಕ್​, ಆ್ಯಂಡ್ರ್ಯೂ ರಸೆಲ್​, ಟಿಮ್​ ಸೌತಿ, ರಾಸ್ಸಿ ವಾನ್​ ಡರ್​ ಡಾಸ್ಸೆನ್​ ಇದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.