ದುಬೈ: ಕಿಂಗ್ಸ್ ಇಲೆವೆನ್ ತಂಡದ ದುಬಾರಿ ವಿದೇಶಿ ಕ್ರಿಕೆಟಿಗನಾಗಿರುವ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ 13ನೇ ಆವೃತ್ತಿಯಲ್ಲಿ ಬರೋಬ್ಬರಿ ನೂರು ಎಸೆತಗಳನ್ನೆದುರಿಸಿದರೂ ಒಂದೂ ಸಿಕ್ಸರ್ ಸಿಡಿಸಿಲ್ಲ ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ.
ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ 2019ರ ಡಿಸೆಂಬರ್ನಲ್ಲಿ ನಡೆದ ಹರಾಜಿನಲ್ಲಿ 10.75 ಕೋಟಿ ರೂ. ನೀಡಿ ಖರೀದಿಸಿದೆ. ಆದರೆ, ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರುವ ಮೂಲಕ ಅಷ್ಟು ದೊಡ್ಡ ಮೊತ್ತ ಪಡೆದರೂ ಅದಕ್ಕೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ.
-
Most balls faced in #IPL2020 without hitting a six:
— Bharath Seervi (@SeerviBharath) October 24, 2020 " class="align-text-top noRightClick twitterSection" data="
103 - Stokes
100 - Maxwell
66 - Jadhav#KXIPvSRH
">Most balls faced in #IPL2020 without hitting a six:
— Bharath Seervi (@SeerviBharath) October 24, 2020
103 - Stokes
100 - Maxwell
66 - Jadhav#KXIPvSRHMost balls faced in #IPL2020 without hitting a six:
— Bharath Seervi (@SeerviBharath) October 24, 2020
103 - Stokes
100 - Maxwell
66 - Jadhav#KXIPvSRH
ಮ್ಯಾಕ್ಸ್ವೆಲ್ ಕಳೆದ 11 ಇನ್ನಿಂಗ್ಸ್ಗಳಲ್ಲಿ ಒಂದು ಅರ್ಧಶತಕ ಸಿಡಿಸಿಲ್ಲ. ಅವರು 13ನೇ ಐಪಿಎಲ್ನಲ್ಲಿ 1,5,13,11,11,7,10,0,32,12 ರನ್ಗಳಿಸಿದ್ದಾರೆ. ಇದರಲ್ಲಿ 3 ಪಂದ್ಯಗಳಲ್ಲಿ ನಾಟೌಟ್ ಆಗಿ ಉಳಿದಿದ್ದಾರೆ. ಇಷ್ಟು ವೈಫಲ್ಯ ಅನುಭವಿಸಿದರೂ ಪಂಜಾಬ್ ತಂಡ ಅವರನ್ನೇ ಎಲ್ಲಾ ಪಂದ್ಯಗಳಲ್ಲೂ ಅವಕಾಶ ಕೊಡುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ.