ETV Bharat / sports

​ಸ್ಟೋಕ್ಸ್​ ಪತ್ನಿ ಬಗ್ಗೆ ಅಸಭ್ಯ ಕಮೆಂಟ್: ಸ್ಯಾಮ್ಯುಯೆಲ್ಸ್​ ಮಾನಸಿಕ ಅಸ್ವಸ್ಥ ಎಂದ ಶೇನ್ ​ವಾರ್ನ್​ - ಬೆನ್​ಸ್ಟೋಕ್ಸ್ ಬಗ್ಗೆ ಸ್ಯಾಮ್ಯುಯೆಲ್ ಅಸಭ್ಯ ಕಾಮೆಂಟ್

ಕ್ವಾರಂಟೈನ್​ ದಿನಗಳ ಬಗ್ಗೆ ಮಾತನಾಡಿದ್ದ ಬೆನ್​ಸ್ಟೋಕ್ಸ್​, ಇಂತಹ ಕೆಟ್ಟ ಸ್ಥಿತಿ ನನ್ನ ಶತ್ರುವಾಗಿರುವ ಸ್ಯಾಮ್ಯುಯೆಲ್ಸ್​ಗೂ ಬರುವುದು ಬೇಡ ಎಂದು ಬಯಸುತ್ತೇನೆ ಎಂದು ತಮಾಷೆಯಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ಸ್ಯಾಮ್ಯುಯೆಲ್ಸ್ ಸ್ಟೋಕ್ಸ್​ ಪತ್ನಿಯನ್ನು ಎಳೆದು ತಂದು ಅಸಭ್ಯವಾದ ಕಮೆಂಟ್​ ಮಾಡಿದ್ದರು.

ಸ್ಯಾಮ್ಯುಯೆಲ್ಸ್ -  ಶೇನ್ ​ವಾರ್ನ್
ಸ್ಯಾಮ್ಯುಯೆಲ್ಸ್ - ಶೇನ್ ​ವಾರ್ನ್
author img

By

Published : Oct 28, 2020, 11:03 PM IST

Updated : Oct 28, 2020, 11:21 PM IST

ನವದೆಹಲಿ: ಇಂಗ್ಲೆಂಡ್ ಆಲ್​ರೌಂಡರ್ ಬೆನ್​ಸ್ಟೋಕ್ಸ್ ಹಾಗೂ ಆತನ ಪತ್ನಿ ಮತ್ತು ತಮ್ಮ ವಿರುದ್ಧ ಅವಮಾನಕರ ಹೇಳಿಕೆ ನೀಡಿರುವ ವೆಸ್ಟ್ ಇಂಡೀಸ್ ತಂಡದ ಆಟಗಾರ ಮಾರ್ಲಾನ್ ಸ್ಯಾಮ್ಯುಯೆಲ್ಸ್​ ಅವರನ್ನು ಆಸೀಸ್ ದಂತಕತೆ ಶೇನ್ ವಾರ್ನ್​ ಮಾನಸಿಕ ಅಸ್ವಸ್ಥ ಎಂದು ಕರೆದಿದ್ದು, ಆತನಿಗೆ ಯಾರಾದರೂ ಸಹಾಯ ಮಾಡಿ ಎಂದು ಹೇಳಿದ್ದಾರೆ.

ಸ್ಯಾಮ್ಯಯೆಲ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸ್ಟೋಕ್ಸ್​ ಹಾಗೂ ವಾರ್ನ್​ ಕುರಿತು ಅವಹೇಳನಕಾರಿ ಪೋಸ್ಟ್​ ಮಾಡಿಕೊಂಡಿದ್ದರು. ಜೊತೆಗೆ ಬೆನ್​ಸ್ಟೋಕ್ಸ್​ ಅವರ ಪತ್ನಿಯ ಬಗ್ಗೆಯೂ ಕಮೆಂಟ್ ಮಾಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ವಾರ್ನ್​ ಕೂಡ ಸ್ಯಾಮ್ಯುಯೆಲ್ ಕಮೆಂಟ್​ಗೆ ಪ್ರತಿಕ್ರಿಯಿಸಿದ್ದು, ವೆಸ್ಟ್​ ಇಂಡೀಸ್​ ಆಟಗಾರನ ಅಶ್ಲೀಲ ಹೇಳಿಕೆಯಿಂದ ಎಲ್ಲರೂ ಮುಜುಗರಕ್ಕೊಳಗಾಗಿ ಆತನನ್ನು ದೂರವಿಡಲು ಪ್ರಯತ್ನಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

  • I’ve just been sent what Samuels has posted re @benstokes38 & I. It’s a very sad situation as he obviously needs serious help-but has no friends at all & not even his ex teammates like him. Just because you were an ordinary cricketer-no need to be an ordinary person. Get help son

    — Shane Warne (@ShaneWarne) October 28, 2020 " class="align-text-top noRightClick twitterSection" data=" ">

" ನನ್ನ ಮತ್ತು ಬೆನ್​ಸ್ಟೋಕ್ಸ್​ ಕುರಿತು ನೀಡಿರುವ ಪೋಸ್ಟ್​ ಈಗ ನನಗೆ ಬಂದಿದೆ. ಇದೊಂದು ನಿಜಕ್ಕೂ ದುಃಖಕರ ಸನ್ನಿವೇಶವಾಗಿದ್ದು, ಸ್ಯಾಮ್ಯುಯೆಲ್ಸ್​ಗೆ ಯಾರಾದರೂ ಸಹಾಯ ಮಾಡುವ ಅವಶ್ಯಕತೆಯಿದೆ.ಆದರೆ ಆತನಿಗೆ ಯಾವುದೇ ಸ್ನೇಹಿತರಿಲ್ಲ ಮತ್ತು ಅವನಿಗೆ ಮಾಜಿ ಸಹ ಆಟಗಾರರು ಕೂಡ ಅವರ ಜೊತೆಯಿಲ್ಲ. ನೀನು ಸಾಮಾನ್ಯ ಕ್ರಿಕೆಟಿಗನಿಂದ ಸಾಮಾನ್ಯ ವ್ಯಕ್ತಿಯಾಗುವುದು ಬೇಡ. ಸಹಾಯ ಪಡೆದುಕೊ ಮಗನೇ!" ಎಂದು ಕೋಪದಿಂದ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಕ್ವಾರಂಟೈನ್​ ದಿನಗಳ ಬಗ್ಗೆ ಮಾತನಾಡಿದ್ದ ಬೆನ್​ಸ್ಟೋಕ್ಸ್​, ಇಂತಹ ಕೆಟ್ಟ ಸ್ಥಿತಿ ನನ್ನ ಶತ್ರುವಾಗಿರುವ ಸ್ಯಾಮ್ಯುಯೆಲ್ಸ್​ಗೂ ಬರುವುದು ಬೇಡ ಎಂದು ಬಯಸುತ್ತೇನೆ ಎಂದು ತಮಾಷೆಯಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ಸ್ಯಾಮ್ಯುಯೆಲ್ಸ್ ಸ್ಟೋಕ್ಸ್​ ಪತ್ನಿಯನ್ನು ಎಳೆದು ತಂದು ಅಸಭ್ಯವಾದ ಕಮೆಂಟ್​ ಮಾಡಿದ್ದರು.

Last Updated : Oct 28, 2020, 11:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.