ETV Bharat / sports

'ದಿ ಹಂಡ್ರೆಡ್'​ ಹರಾಜಿನಲ್ಲಿ ಗೇಲ್, ಮಲಿಂಗಾರನ್ನು ಕೇಳೋರಿಲ್ಲ..!

author img

By

Published : Oct 21, 2019, 12:43 PM IST

ಭಾನುವಾರದಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಮಿಚೆಲ್ ಸ್ಟಾರ್ಕ್​, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಜೊತೆಗೆ ಗೇಲ್, ರಬಾಡ ಹಾಗೂ ಮಲಿಂಗಾ ಸಹ ಹರಾಜಿನಲ್ಲಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ವಿದೇಶಿ ಟಿ-20 ಲೀಗ್​ನಲ್ಲಿ ಛಾಪು ಮೂಡಿಸಿರುವ ಈ ಮೂವರನ್ನು ಖರೀದಿಸಲು ಯಾವುದೇ ತಂಡ ಮುಂದಾಗಲಿಲ್ಲ.

'ದಿ ಹಂಡ್ರೆಡ್'​ ಹರಾಜು

ಲಂಡನ್: ಕೆರಬಿಯನ್ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಹಾಗೂ ಸ್ವಿಂಗ್ ಸ್ಪೆಷಲಿಸ್ಟ್ ಲಸಿತ್ ಮಲಿಂಗಾ ಹಾಗೂ ಖ್ಯಾತ ವೇಗಿ ಕಗಿಸೋ ರಬಾಡ ದಿ ಹಂಡ್ರೆಡ್ ಲೀಗ್​​ನ ಹರಾಜಿನಲ್ಲಿ ಯಾವುದೇ ತಂಡಕ್ಕೆ ಹರಾಜಾಗದೇ ಅಚ್ಚರಿ ಮೂಡಿಸಿದೆ.

ಭಾನುವಾರದಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಮಿಚೆಲ್ ಸ್ಟಾರ್ಕ್​, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಜೊತೆಗೆ ಗೇಲ್, ರಬಾಡ ಹಾಗೂ ಮಲಿಂಗಾ ಸಹ ಹರಾಜಿನಲ್ಲಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ವಿದೇಶಿ ಟಿ20 ಲೀಗ್​ನಲ್ಲಿ ಛಾಪು ಮೂಡಿಸಿರುವ ಈ ಮೂವರನ್ನು ಖರೀದಿಸಲು ಯಾವುದೇ ತಂಡ ಮುಂದಾಗದಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಆಶ್ಚರ್ಯ ತರಿಸಿದೆ.

The Hundred auction
ದ.ಆಫ್ರಿಕಾದ ವೇಗಿ ಕಗಿಸೋ ರಬಾಡ

1,25,000 ಯುರೋ ಮೂಲ ಬೆಲೆಯನ್ನು ಗೇಲ್, ರಬಾಡ ಹಾಗೂ ಮಲಿಂಗಾಗೆ ನಿಗದಿಪಡಿಸಲಾಗಿತ್ತು. ಇನ್ನೊಂದೆಡೆ, ಟಿ20 ಕ್ರಿಕೆಟ್​ನ ನಂ.1 ಆಟಗಾರ ಪಾಕಿಸ್ತಾನದ ಬಾಬರ್ ಅಜಮ್​ (75,000 ಮೂಲ ಬೆಲೆ) ಸಹ ಬಿಕರಿಯಾಗದಿರುವುದು ಹರಾಜಿನ ಮತ್ತೊಂದು ಪ್ರಮುಖ ಹೈಲೈಟ್.

The Hundred auction
ನಂ.1 ಟಿ20 ಆಟಗಾರ ಬಾಬರ್ ಅಜಮ್

ದಿ ಹಂಡ್ರೆಡ್ ಟೂರ್ನಿಯ ಫ್ರಾಂಚೈಸಿ ಟ್ರೆಂಟ್ ರಾಕೆಟ್ಸ್​ ನಂ.1 ಟಿ-20 ಬೌಲರ್ ರಶೀದ್ ಖಾನ್​ರನ್ನು ಖರೀದಿಸಿದೆ. ಆಂಡ್ರೆ ರಸೆಲ್(ಸದರ್ನ್ ಬ್ರೇವ್), ಆರೋನ್ ಫಿಂಚ್, ಮುಜೀಬ್ ಉರ್ ರಹಮಾನ್(ನಾರ್ದರ್ನ್​ ಸೂಪರ್​ಚಾರ್ಜರ್ಸ್​), ಸುನಿಲ್ ನರೈನ್ (ಓವಲ್ ಇನ್​ವಿನ್ಸಿಬಲ್), ಇಮ್ರಾನ್ ತಾಹಿರ್, ಡೇನ್ ವಿಲಾಸ್(ಮ್ಯಾಂಚೆಸ್ಟರ್ ಒರಿಜಿನಲ್ಸ್), ಗ್ಲೆನ್ ಮ್ಯಾಕ್ಸ್​ವೆಲ್(ಲಂಡನ್ ಸ್ಪಿರಿಟ್) ಹಾಗೂ ಲಿಯಾಮ್ ಲಿವಿಂಗ್​​ಸ್ಟೋನ್(ಬರ್ಮಿಂಗ್​ಹ್ಯಾಮ್ ಫೀನಿಕ್ಸ್) ತಂಡಕ್ಕೆ ಹರಾಜಾಗಿದ್ದಾರೆ.

The Hundred auction
ದಿ ಹಂಡ್ರೆಡ್ ಹರಾಜಿನ ಅಂತಿಮ ಪಟ್ಟಿ

ಏನಿದು 'ದಿ ಹಂಡ್ರೆಡ್'..?

ನೂರು ಎಸೆತಗಳ ಒಂದು ಇನ್ನಿಂಗ್ಸ್​ ಇರುವ ಈ ಲೀಗ್​ 'ದಿ ಹಂಡ್ರೆಡ್'. ಈ ಟೂರ್ನಿಯಲ್ಲಿ ಎಂಟು ತಂಡಗಳು ಸುಮಾರು ಐದು ವಾರಗಳ ಕಾಲ ಪ್ರಶಸ್ತಿಗಾಗಿ ಸೆಣಸಾಡಲಿವೆ. 2020ರ ಜುಲೈ 17ರಂದು ಆರಂಭವಾಗಲಿದ್ದು, ಆಗಸ್ಟ್ 15ರಂದು ಫೈನಲ್ ಪಂದ್ಯ ನಡೆಯಲಿದೆ.

The Hundred auction
ದಿ ಹಂಡ್ರೆಡ್ ತಂಡಗಳ ಹೆಸರು

ಓರ್ವ ಬೌಲರ್ ಗರಿಷ್ಠ 20 ಎಸೆತಗಳನ್ನು ಎಸೆಯಬಹುದು. ಪಂದ್ಯವೊಂದರಲ್ಲಿ ಎರಡೂವರೆ ನಿಮಿಷಗಳ ಸ್ಟ್ರಾಟೆಜಿಕ್ ಟೈಮ್ ​ಔಟ್ ಇರುತ್ತದೆ. ಇನ್ನಿಂಗ್ಸ್​ನ ಮೊದಲ 25 ಎಸೆತ ಪವರ್​ಪ್ಲೇ ಆಗಿರಲಿದ್ದು, ಇಬ್ಬರು ಕ್ಷೇತ್ರ ರಕ್ಷಕರು ಮೂವತ್ತು ಗಜದ ಹೊರಗಿರಬಹುದಾಗಿದೆ. ಈ ಎಲ್ಲ ನಿಯಮವನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಜಾರಿಗೊಳಿಸಿದೆ.

The Hundred auction
ದಿ ಹಂಡ್ರೆಡ್ ಜೆರ್ಸಿ ಅನಾವರಣ

Intro:Body:

ಲಂಡನ್: ಕೆರಬಿಯನ್ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಹಾಗೂ ಸ್ವಿಂಗ್ ಸ್ಪೆಷಲಿಸ್ಟ್ ಲಸಿತ್ ಮಲಿಂಗಾ ಹಾಗೂ ಖ್ಯಾತ ವೇಗಿ ಕಗಿಸೋ ರಬಾಡ ದಿ ಹಂಡ್ರೆಡ್ ಲೀಗ್​​ನ ಹರಾಜಿನಲ್ಲಿ ಯಾವುದೇ ತಂಡಕ್ಕೆ ಹರಾಜಾಗದೆ ಅಚ್ಚರಿ ಮೂಡಿಸಿದೆ.

ಭಾನುವಾರದಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಮಿಚೆಲ್ ಸ್ಟಾರ್ಕ್​, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಜೊತೆಗೆ ಗೇಲ್, ರಬಾಡ ಹಾಗೂ ಮಲಿಂಗಾ ಸಹ ಹರಾಜನಲ್ಲಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ವಿದೇಶಿ ಟಿ20 ಲೀಗ್​ನಲ್ಲಿ ಛಾಪು ಮೂಡಿಸಿರುವ ಈ ಮೂವರನ್ನು ಖರೀದಿಸಲು ಯಾವುದೇ ತಂಡ ಮುಂದಾಗದಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಆಶ್ಚರ್ಯ ತರಿಸಿದೆ.

1,25,000 ಯುರೋ ಮೂಲ ಬೆಲೆಯನ್ನು ಗೇಲ್,ರಬಾಡ ಹಾಗೂ ಮಲಿಂಗಾಗೆ ನಿಗದಿಪಡಿಸಲಾಗಿತ್ತು. ಇನ್ನೊಂದೆಡೆ ಟಿ20 ಕ್ರಿಕೆಟ್​ನ ನಂ.1 ಆಟಗಾರ ಪಾಕಿಸ್ತಾನದ ಬಾಬರ್ ಅಜಮ್​(75,000 ಮೂಲ ಬೆಲೆ) ಸಹ ಬಿಕರಿಯಾಗದಿರುವುದು ಹರಾಜಿನ ಮತ್ತೊಂದು ಪ್ರಮುಖ ಹೈಲೈಟ್. 

ದಿ ಹಂಡ್ರೆಡ್ ಟೂರ್ನಿಯ ಫ್ರಾಂಚೈಸಿ ಟ್ರೆಂಟ್ ರಾಕೆಟ್ಸ್​ ನಂ.1 ಟಿ20 ಬೌಲರ್ ರಶೀದ್ ಖಾನ್​ರನ್ನು ಖರೀದಿಸಿದೆ. ಆಂಡ್ರೆ ರಸೆಲ್(ಸದರ್ನ್ ಬ್ರೇವ್), ಆರೋನ್ ಫಿಂಚ್, ಮುಜೀಬ್ ಉರ್ ರಹಮಾನ್(ನಾರ್ದರ್ನ್​ ಸೂಪರ್​ಚಾರ್ಜರ್ಸ್​), ಸುನಿಲ್ ನರೈನ್(ಓವಲ್ ಇನ್​ವಿನ್ಸಿಬಲ್), ಇಮ್ರಾನ್ ತಾಹಿರ್, ಡೇನ್ ವಿಲಾಸ್(ಮ್ಯಾಂಚೆಸ್ಟರ್ ಒರಿಜಿನಲ್ಸ್), ಗ್ಲೆನ್ ಮ್ಯಾಕ್ಸ್​ವೆಲ್(ಲಂಡನ್ ಸ್ಪಿರಿಟ್) ಹಾಗೂ ಲಿಯಾಮ್ ಲಿವಿಂಗ್​​ಸ್ಟೋನ್(ಬರ್ಮಿಂಗ್​ಹ್ಯಾಮ್ ಫೀನಿಕ್ಸ್) ತಂಡಕ್ಕೆ ಹರಾಜಾಗಿದ್ದಾರೆ.

ಏನಿದು 'ದಿ ಹಂಡ್ರೆಡ್'..?

ನೂರು ಎಸೆತಗಳ ಒಂದು ಇನ್ನಿಂಗ್ಸ್​ ಇರುವ ಈ ಲೀಗ್​ ಅನ್ನು ದಿ ಹಂಡ್ರೆಡ್ ಎಂದು ಕರೆಯುತ್ತಾರೆ. ಇಲ್ಲಿ ಎಂಟು ತಂಡಗಳು ಸುಮಾರು ಐದು ವಾರಗಳ ಕಾಲ ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಟೂರ್ನಿ 2020ರಲ್ಲಿ ಆಯೋಜನೆಯಾಗಿದೆ.

ಓರ್ವ ಬೌಲರ್ ಗರಿಷ್ಠ 20 ಎಸೆತಗಳನ್ನು ಎಸೆಯಬಹುದು. ಪಂದ್ಯವೊಂದರಲ್ಲಿ ಎರಡೂವರೆ ನಿಮಿಷಗಳ ಸ್ಟ್ರಾಟೆಜಿಕ್ ಟೈಮ್​ಔಟ್ ಇರುತ್ತದೆ. ಇನ್ನಿಂಗ್ಸ್​ನ ಮೊದಲ 25 ಎಸೆತ ಪವರ್​ಪ್ಲೇ ಆಗಿರಲಿದ್ದು, ಇಬ್ಬರು ಕ್ಷೇತ್ರರಕ್ಷಕರು ಮೂವತ್ತು ಗಜದ ಹೊರಗಿರಬಹುದಾಗಿದೆ. ಈ ಎಲ್ಲ ನಿಯಮವನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಜಾರಿಗೊಳಿಸಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.