ಮುಂಬೈ: ಭಾರತ ಕ್ರಿಕೆಟ್ನ ದಂತಕತೆ, ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ ರನ್ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಆಗಿರುವ ಸುನಿಲ್ ಗವಾಸ್ಕರ್ಗೆ ಪ್ರಸ್ತುತ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾರಂತೆ ಬ್ಯಾಟಿಂಗ್ ಮಾಡಲು ಇಷ್ಟಪಡುತ್ತೇನೆಂದು ತಿಳಿಸಿದ್ದಾರೆ.
ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿರುವ ಸುನಿಲ್ ಗವಾಸ್ಕರ್ ತಾವೂ ಕ್ರಿಕೆಟ್ ಆಡುತ್ತಿದ್ದ ದಿನಗಳಲ್ಲಿ ಆತ್ಮವಿಶ್ವಾಸದ ಕೊರತೆಯಿಂದ ಸುಲಭವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
"ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರೆ, ಅದು ಟೆಸ್ಟ್ ಆಗಿರಲಿ ಅಥವಾ ಏಕದಿನ ಕ್ರಿಕೆಟ್ ಆಗಿರಲಿ. ಅವರು ಮೊದಲ ಓವರ್ನಲ್ಲೇ ದಂಡಿಸಲು ಶುರುಮಾಡುತ್ತಾರೆ. ನನಗೆ ಆ ರೀತಿ ಆಡಬೇಕೆಂಬ ಆಸೆಯಿದೆ. ಸಂದರ್ಭ ಮತ್ತು ನನ್ನ ಸಾಮರ್ಥ್ಯದ ಬಗ್ಗೆ ನನ್ನಲ್ಲಿದ್ದ ಆತ್ಮವಿಶ್ವಾಸದ ಕೊರತೆ ನನಗೆ ಆ ರೀತಿ ಬ್ಯಾಟಿಂಗ್ ಮಾಡಲು ಅನುಮತಿಸಲಲಿಲ್ಲ"
ಆದರೆ ನಾನು ಅದನ್ನು ಮುಂದಿನ ಪೀಳಿಗೆಯ ಆಟಗಾರರಿಂದ ನೋಡಿ ಸಂತೋಷ ಪಡುತ್ತಿದ್ದೇನೆ. ಬರುವ ಪೀಳಿಗೆಯ ಆಟಗಾರರಲ್ಲೂ ನಾನು ನೋಡಲು ಬಯಸುತ್ತೇನೆ. ಏಕೆಂದರೆ ಅಲ್ಲಿ ಆಟದಲ್ಲಿ ಪ್ರಗತಿ ಕಂಡುಬಂದಿರುತ್ತದೆ ಎಂದು ಗವಾಸ್ಕರ್ ತಿಳಿಸಿದ್ದಾರೆ.
ಪ್ರಸ್ತುತ ಭಾರತ ಟೆಸ್ಟ್ ತಂಡದ ಬೌಲರ್ಗಳನ್ನು ಮೆಚ್ಚಿಕೊಂಡಿರುವ ಅವರು, ಕೊಹ್ಲಿ ನೇತೃತ್ವದ ಭಾರತ ತಂಡದ ಭಾರತ ಇತಿಹಾಸದ ಸಾರ್ವಕಾಲಿಕ ಟೆಸ್ಟ್ ತಂಡ ಎಂದು ಅಭಿಪ್ರಾಯಪಟ್ಟಿದ್ದಾರೆ.