ETV Bharat / sports

ಟೆಸ್ಟ್​ ಕ್ರಿಕೆಟ್​​ ಪಾದಾರ್ಪಣೆಗೆ 50 ವರ್ಷದ ಸಂಭ್ರಮ.. ಗವಾಸ್ಕರ್​ಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದ ಬಿಸಿಸಿಐ - 1971 ಮಾರ್ಚ್ 6

ಅಹ್ಮದಾಬಾದ್​ ಟೆಸ್ಟ್​ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಸುನೀಲ್​ ಗವಾಸ್ಕರ್​ ಅವರಿಗೆ ಇಂದು ಬಿಸಿಸಿಐ, ವಿಶೇಷ ಕ್ಯಾಪ್​ ನೆನಪಿನ ಕಾಣಿಕೆಯಾಗಿ ನೀಡುವ ಮೂಲಕ ಗೌರವ ಸಮರ್ಪಿಸಿದೆ.

ಸುನೀಲ್ ಗವಾಸ್ಕರ್​
ಸುನೀಲ್ ಗವಾಸ್ಕರ್​
author img

By

Published : Mar 6, 2021, 3:24 PM IST

ಹೈದರಾಬಾದ್​: ಭಾರತ ಕ್ರಿಕೆಟ್​ ದಂತಕತೆ, ಟೆಸ್ಟ್​ ಕ್ರಿಕೆಟ್​ನ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಸುನೀಲ್ ಗವಾಸ್ಕರ್​ ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿ ಇಂದಿಗೆ ಬರೋಬ್ಬರಿ 50 ವರ್ಷ ಕಳೆದಿವೆ.

ಕ್ರಿಕೆಟ್​ ಜಗತ್ತಿನಲ್ಲಿ ಅದಾಗಲೇ ಇಂಗ್ಲೆಂಡ್​ ಮತ್ತು ವೆಸ್ಟ್​ ಇಂಡೀಸ್​ ತಮ್ಮ ಅಧಿಪತ್ಯ ಸಾಧಿಸಿದ್ದವು. ಭಾರತವು ಕ್ರಿಕೆಟ್ ಲೋಕದಲ್ಲಿ​ ಶಿಶುವಾಗಿ ಅಂಬೆಗಾಲಿಡುತ್ತಿತ್ತು. ಆ ಸಂದರ್ಭದಲ್ಲಿ ತಂಡದಲ್ಲಿ ಅವಕಾಶ ಪಡೆದಾಗ ಸುನೀಲ್ ಗವಾಸ್ಕರ್​ಗೆ ಕೇವಲ 21 ವರ್ಷ. ಕೇವಲ 5.5 ಅಡಿಯ ವಾಮನ ಮೂರ್ತಿಯಂತಿದ್ದ ಗವಾಸ್ಕರ್​ ತಮ್ಮ ಪಾದಾರ್ಪಣೆ ಪಂದ್ಯದಲ್ಲಿಯೇ ಏಳಡಿ ಎತ್ತರದ ವಿಂಡೀಸ್​ನ ದೈತ್ಯ ಬೌಲರ್​ಗಳನ್ನು ಕೆಚ್ಚೆದೆಯಿಂದ ಎದುರಿಸಿ ಬರೋಬ್ಬರಿ 774 ರನ್ ಸಿಡಿಸಿದ್ದರು. ಪಾದಾರ್ಪಣೆ ಸರಣಿಯಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆ ದಾಖಲೆ ಇನ್ನೂ ಅವರ ಹೆಸರಿನಲ್ಲಿಯೇ ಇದೆ!

ಬಿಸಿಸಿಐ ಅಹ್ಮದಾಬಾದ್​ ಟೆಸ್ಟ್​ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಸುನೀಲ್​ ಗವಾಸ್ಕರ್​ ಅವರಿಗೆ ಇಂದು ವಿಶೇಷ ಕ್ಯಾಪ್​ ಅನ್ನು ನೆನಪಿನ ಕಾಣಿಕೆಯಾಗಿ ನೀಡುವ ಮೂಲಕ ಬಿಸಿಸಿಐ ಅವರಿಗೆ ಗೌರವ ಸಮರ್ಪಿಸಿದೆ.

1971 ಮಾರ್ಚ್​ 6ರಂದು ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಲಿಟ್ಲ್​ ಮಾಸ್ಟರ್​ ನಾಲ್ಕು ಪಂದ್ಯಗಳ ಸರಣಿಯಲ್ಲಿ 774 ರನ್ ಕಲೆ ಹಾಕಿದ್ದರು. ಮೊದಲ ಪಂದ್ಯದಲ್ಲಿ 65 ಮತ್ತು 67 ರನ್​ಗಳಿಸಿದ್ದ ಅವರು, ನಂತರದ ಪಂದ್ಯದಲ್ಲಿ 116-64, 01-117, 124-220 ರನ್​ ಚಚ್ಚಿದ್ದರು.

ಆ ಪಂದ್ಯದ ನಂತರ 17 ವರ್ಷಗಳ ಕಾಲ ಕ್ರಿಕೆಟ್ ಆಡಿದ ಗವಾಸ್ಕರ್‌ ವಿಶ್ವದ ಅತ್ಯಂತ ಅಪಾಯಕಾರಿ ವೇಗಿಗಳನ್ನ ಲೀಲಾಜಾಲಾವಾಗಿ ಎದುರಿಸಿದ್ದರು. ಅದರಲ್ಲೂ ಹೆಲ್ಮೆಟ್​ ಇಲ್ಲದೆ ಇರುವ ಪಂದ್ಯಗಳು ಸೇರಿದಂತೆ ಎಲ್ಲ ತಂಡಗಳ ಎದುರು ಮಾರಕ ಬೌನ್ಸರ್‌ಗಳಿಗೆ ಬೌಂಡರಿ ದಾರಿ ತೋರಿಸುತ್ತಿದ್ದದ್ದು ಗವಾಸ್ಕರ್​ ಹೆಗ್ಗಳಿಕೆ.

ಗವಾಸ್ಕರ್​ ಮಾರ್ಚ್​ 13, 1987ರಲ್ಲಿ ಟೆಸ್ಟ್​ ಕ್ರಿಕೆಟ್​​ ಬದುಕಿಗೆ ವಿದಾಯ ಹೇಳಿದ್ದರು. ಅವರು 125 ಟೆಸ್ಟ್​ ಪಂದ್ಯಗಳಿಂದ 34 ಶತಕ, 45 ಅರ್ಧಶತಕ ಸಹಿತ 10,122 ರನ್​ ಕಲೆ ಹಾಕಿದ್ದಾರೆ. 108 ಏಕದಿನ ಪಂದ್ಯಗಳಲ್ಲಿ 3092 ರನ್ ​ಗಳಿಸಿದ್ದಾರೆ. ಅವರು 1983ರ ವಿಶ್ವಕಪ್​, 1985ರ ಚಾಂಪಿಯನ್​ಶಿಪ್​ ಗೆದ್ದ ತಂಡದ ಭಾಗವಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.