ETV Bharat / sports

ಧೋನಿ ಬಗ್ಗೆ ಅಲ್ಲ, ದೇಶದ ಭವಿಷ್ಯದ ಬಗ್ಗೆ ಗಮನಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ: ಗಂಭೀರ್​! - ಟೀಂ ಇಂಡಿಯಾ ಕ್ರಿಕೆಟ್​

ಟೀಂ ಇಂಡಿಯಾ ಕ್ರಿಕೆಟ್​ ಭವಿಷ್ಯದ ದೃಷ್ಟಿಯಿಂದ ಧೋನಿ ನಿವೃತ್ತಿ ಬಗ್ಗೆ ಆಯ್ಕೆ ಸಮಿತಿ ಮಹತ್ವದ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಗೌತಮ್​ ಗಂಭೀರ್​ ತಿಳಿಸಿದ್ದಾರೆ.

ಗಂಭೀರ್​,ಧೋನಿ
author img

By

Published : Sep 30, 2019, 6:30 PM IST

ಕೋಲ್ಕತ್ತಾ: ಟೀಂ ಇಂಡಿಯಾದ ಹಿರಿಯ ವಿಕೆಟ್​ ಕೀಪರ್​ ಬ್ಯಾಟ್ಸ್​​ಮನ್​ ಎಂಎಸ್​ ಧೋನಿ ನಿವೃತ್ತಿಗೆ ಸಂಬಂಧಿಸಿದಂತೆ ಈ ಹಿಂದಿನಿಂದಲೂ ಮೇಲಿಂದ ಮೇಲೆ ಪ್ರಶ್ನೆಗಳು ಕೇಳಿ ಬರುತ್ತಿವೆ. ಆದರೆ, ಭಾರತೀಯ ಕ್ರಿಕೆಟ್​ ಮಂಡಳಿ, ಆಯ್ಕೆ ಸಮಿತಿ ಆ ವಿಚಾರವಾಗಿ ಮಾತನಾಡಿಲ್ಲ. ಇದೇ ವಿಷಯವನ್ನಿಟ್ಟುಕೊಂಡು ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್​ ಗಂಭೀರ್​ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ms Dhoni,Gambhir
ಧೋನಿ,ಗಂಭೀರ್​

ನಿವೃತ್ತಿ ಪಡೆದುಕೊಳ್ಳುವ ವಿಷಯ ಅವರ ವೈಯಕ್ತಿಕವಾಗಿರುತ್ತದೆ. ನೀವೂ ಎಲ್ಲಿಯವರೆಗೆ ಕ್ರಿಕೆಟ್​ ಆಡಬೇಕು ಎಂದು ನಿರ್ಧರಿಸುವಿರೋ ಅಲ್ಲಿಯವರೆಗೆ ಸಮಯವಿದೆ. ಆದರೆ, ತಂಡದ ಮುಂದಿನ ಭವಿಷ್ಯದ ಬಗ್ಗೆ ಸಹ ಈ ವೇಳೆ ವಿಚಾರ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಧೋನಿ ವಿಚಾರದಲ್ಲಿ ಆಯ್ಕೆ ಸಮಿತಿ ತೆಗೆದುಕೊಂಡಿರುವ ನಿರ್ಧಾರ ಏನು? ಅವರಾಗಿ ನಿವೃತ್ತಿ ಘೋಷಣೆ ಮಾಡುವೆ ಎಂದು ಬರುವವರೆಗೂ ನೀವು ಸುಮ್ಮನೆ ಕುಳಿತುಕೊಳ್ಳುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ಎಂಎಸ್​ ಧೋನಿ/MS Dhoni
ಎಂಎಸ್​ ಧೋನಿ/MS Dhoni

ಮುಂದಿನ ಐಸಿಸಿ ಏಕದಿನ ವಿಶ್ವಕಪ್​ 2023ರಲ್ಲಿ ಭಾರತದಲ್ಲೇ ನಡೆಯಲಿದೆ. ಆ ವೇಳೆ, ಸಹ ಧೋನಿಯನ್ನು ತಂಡದಲ್ಲಿಟ್ಟುಕೊಳ್ಳಲು ನೀವೂ ನಿರ್ಧಾರ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದು, ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗೆಲುವು ಸಾಧಿಸಬೇಕಾದರೆ, ಇಂದಿನಿಂದಲೇ ಸಿದ್ಧತೆ ನಡೆಸಬೇಕಾಗುತ್ತದೆ. ರಿಷಭ್​ ಪಂತ್, ಸಂಜು ಸ್ಯಾಮ್ಸನ್​ರೊಂದಿಗೆ ಉಳಿದ ಯುವ ವಿಕೆಟ್ ಕೀಪರ್ ಆಟಗಾರರಿಗೂ ಅವಕಾಶ ನೀಡಬೇಕಿದೆ. ಟೀಂ ಇಂಡಿಯಾ ತಂಡ ಧೋನಿ ಅವರನ್ನು ಹೊರತು ಪಡಿಸಿ ನೋಡುವ ಸಮಯ ಬಂದಿದೆ ಎಂದು ಗಂಭೀರ್ ಹೇಳಿದ್ದಾರೆ.

2019ರ ವಿಶ್ವಕಪ್​ ಮುಕ್ತಾಯಗೊಂಡ ಬಳಿಕ ಎಂಎಸ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ನಿವೃತ್ತಿ ಪಡೆದುಕೊಳ್ಳಲ್ಲಿದ್ದಾರೆ ಎಂಬ ಮಾತು ಗಂಭೀರವಾಗಿ ಕೇಳಿ ಬಂದಿತ್ತು. ಆದರೆ, ಸದ್ಯ ಕೂಡ ಅವರು ನಿವೃತ್ತಿ ಪಡೆದುಕೊಳ್ಳದೇ ತಂಡದ ಭಾಗವಾಗಿ ಉಳಿದಿದ್ದು, ತಂಡದಿಂದ ದೂರ ಉಳಿದು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

Intro:Body:

ಧೋನಿ ಬಗ್ಗೆ ಅಲ್ಲ, ದೇಶದ ಭವಿಷ್ಯದ ಬಗ್ಗೆ ಗಮನಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ: ಗಂಭೀರ್​! 

ಕೋಲ್ಕತ್ತಾ: ಟೀಂ ಇಂಡಿಯಾದ ಹಿರಿಯ ವಿಕೆಟ್​ ಕೀಪರ್​ ಬ್ಯಾಟ್ಸ್​​ಮನ್​ ಎಂಎಸ್​ ಧೋನಿ ನಿವೃತ್ತಿಗೆ ಸಂಬಂಧಿಸಿದಂತೆ ಈ ಹಿಂದಿನಿಂದಲೂ ಮೇಲಿಂದ ಮೇಲೆ ಪ್ರಶ್ನೆಗಳು ಕೇಳಿ ಬರುತ್ತಿವೆ. ಆದರೆ ಭಾರತೀಯ ಕ್ರಿಕೆಟ್​ ಮಂಡಳಿ, ಆಯ್ಕೆ ಸಮಿತಿ ಆ ವಿಚಾರವಾಗಿ ಮಾತನಾಡಿಲ್ಲ. ಇದೇ ವಿಷಯವನ್ನಿಟ್ಟುಕೊಂಡು ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್​ ಗಂಭೀರ್​ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. 

ನಿವೃತ್ತಿ ಪಡೆದುಕೊಳ್ಳುವ ವಿಷಯ ಅವರ ವೈಯಕ್ತಿಕವಾಗಿರುತ್ತದೆ. ನೀವೂ ಎಲ್ಲಿಯವರೆಗೆ ಕ್ರಿಕೆಟ್​ ಆಡಬೇಕು ಎಂದು ನಿರ್ಧರಿಸುವೀರಿ ಅಲ್ಲಿಯವರೆಗೆ ಸಮಯವಿದೆ. ಆದರೆ ತಂಡದ ಮುಂದಿನ ಭವಿಷ್ಯದ ಬಗ್ಗೆ ಸಹ ಈ ವೇಳೆ ವಿಚಾರ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಧೋನಿ ವಿಚಾರದಲ್ಲಿ ಆಯ್ಕೆ ಸಮಿತಿ ತೆಗೆದುಕೊಂಡಿರುವ ನಿರ್ಧಾರ ಏನು? ಅವರಾಗಿ ನಿವೃತ್ತಿ ಘೋಷಣೆ ಮಾಡುವೆ ಎಂದು ಬರುವವರೆಗೂ ನೀವು ಸುಮ್ಮನೆ ಕುಳಿತುಕೊಳ್ಳುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. 

ಮುಂದಿನ ಐಸಿಸಿ ಏಕದಿನ ವಿಶ್ವಕಪ್​ 2023ರಲ್ಲಿ ಭಾರತದಲ್ಲೇ ನಡೆಯಲಿದೆ. ಆ ವೇಳೆ ಸಹ ಧೋನಿಯನ್ನು ತಂಡದಲ್ಲಿಟ್ಟುಕೊಳ್ಳಲು ನೀವೂ ನಿರ್ಧಾರ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದು, ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗೆಲುವು ಸಾಧಿಸಬೇಕಾದರೆ, ಇಂದಿನಿಂದಲೇ ಸಿದ್ಧತೆ ನಡೆಸಬೇಕಾಗುತ್ತದೆ. ರಿಷಬ್ ಪಂತ್, ಸಂಜು ಸ್ಯಾಮ್ಸನ್​ರೊಂದಿಗೆ ಉಳಿದ ಯುವ ವಿಕೆಟ್ ಕೀಪರ್ ಆಟಗಾರರಿಗೂ ಅವಕಾಶ ನೀಡಬೇಕಿದೆ. ಟೀಂ ಇಂಡಿಯಾ ತಂಡ ಧೋನಿರನ್ನು ಹೊರತು ಪಡಿಸಿ ನೋಡುವ ಸಮಯ ಬಂದಿದೆ ಎಂದು ಗಂಭೀರ್ ಹೇಳಿದ್ದಾರೆ.

2019ರ ವಿಶ್ವಕಪ್​ ಮುಕ್ತಾಯಗೊಂಡ ಬಳಿಕ ಎಂಎಸ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ನಿವೃತ್ತಿ ಪಡೆದುಕೊಳ್ಳಲ್ಲಿದ್ದಾರೆ ಎಂಬ ಮಾತು ಗಂಭೀರವಾಗಿ ಕೇಳಿ ಬಂದಿತ್ತು. ಆದರೆ ಸದ್ಯ ಕೂಡ ಅವರು ನಿವೃತ್ತಿ ಪಡೆದುಕೊಳ್ಳದೇ ತಂಡದ ಭಾಗವಾಗಿ ಉಳಿದಿದ್ದು, ತಂಡದಿಂದ ದೂರ ಉಳಿದು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.