ETV Bharat / sports

'ಟಿ20ಯಲ್ಲಿ ಬ್ಯಾಟಿಂಗ್​ ಹೇಗಿರಬೇಕು ಅನ್ನೋದನ್ನು ಕೊಹ್ಲಿ ಟೀಂ​ ತೋರಿಸಿಕೊಟ್ರು' - ಭಾರತದ ಬ್ಯಾಟಿಂಗ್​ ಹೊಗಳಿದ ಗಂಗೂಲಿ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಮೂರನೇ ಟಿ20 ಯಲ್ಲಿ ಭಾರತದ ಆರಂಭಿಕರಾದ ರೋಹಿತ್ ಶರ್ಮಾ 71, ರಾಹುಲ್ 91, ಹಾಗೂ ಕೊಹ್ಲಿ 70 ರನ್‌ಗಳ ಸ್ಫೋಟಕ ಬ್ಯಾಟಿಂಗ್​ ನಡೆಸಿ ರನ್‌ ಶಿಖರವನ್ನೇ ಕಡೆದು ನಿಲ್ಲಿಸಿದ್ರು.

Ganguly lauds dominant India
Ganguly lauds dominant India
author img

By

Published : Dec 12, 2019, 3:43 PM IST

ಮುಂಬೈ: ವೆಸ್ಟ್​ ಇಂಡೀಸ್​ ವಿರುದ್ಧದ ಅಂತಿಮ ಟಿ-20 ಪಂದ್ಯದಲ್ಲಿ ಅತ್ಯುತ್ತಮ ​ಪ್ರದರ್ಶನ ತೋರಿ ಸರಣಿ ಗೆದ್ದ ಭಾರತ ತಂಡವನ್ನು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಅಭಿನಂದಿಸಿದ್ದಾರೆ.

ಭಾರತ ತಂಡ ಸರಣಿ ಸೋಲುತ್ತದೆ ಎಂದು ಯಾರೂ ನಿರೀಕ್ಷಿಸೋದಿಲ್ಲ. ಹಾಗಾಗಿ ಗೆಲುವು ಯಾವುದೇ ರೀತಿಯ ಅಚ್ಚರಿ ನೀಡಿಲ್ಲ. ಭಯವಿಲ್ಲದ ಬ್ಯಾಟಿಂಗ್​ ಹೇಗೆ ಹೊರಬರುತ್ತದೆ ಎಂಬುದನ್ನು ಇಂದಿನ ಟಿ20ಯಲ್ಲಿ ನಾವು ನೋಡಿದ್ದೇವೆ. ಇಲ್ಲಿ ಯಾರೊಬ್ಬರೂ ತನ್ನ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕೆ ಆಡುವುದಿಲ್ಲ. ಬದಲಾಗಿ ಎಲ್ಲರೂ ಆಡುವುದು ತಂಡದ ಗೆಲುವಿಗಾಗಿ ಎಂದು ಭಾರತ ತಂಡದ ಗೆಲುವನ್ನು ಟ್ವೀಟ​ರ್​ ಮೂಲಕ ಗಂಗೂಲಿ ವಿಶ್ಲೇಷಿಸಿ ಅಭಿನಂದಿಸಿದ್ದಾರೆ.

  • Not many expected india to lose a series .. win was not a surprise .. what will stand out is the fearless batting which all will see in T20 now ..play without fear .. no one plays for his place but plays to win ..well done india @BCCI @imVkohli @JayShah @ImRo45

    — Sourav Ganguly (@SGanguly99) December 11, 2019 " class="align-text-top noRightClick twitterSection" data=" ">

ಮುಂಬೈನ ವಾಂಖೆಡೆಯಲ್ಲಿ ನಡೆದ ಮೂರನೇ ಟಿ20ಯಲ್ಲಿ ಭಾರತದ ಆರಂಭಿಕರಾದ ರೋಹಿತ್ ​(34 ಬಾಲ್‌ಗೆ 71), ರಾಹುಲ್​(56 ಬಾಲ್‌ಗೆ 91) ಹಾಗೂ ನಾಯಕ ಕೊಹ್ಲಿ (29 ಬಾಲ್‌ಗೆ 70) ಸ್ಫೋಟಕ ಬ್ಯಾಟಿಂಗ್​ ನಡೆಸಿ 240 ರನ್​ಗಳ ಬೃಹತ್​ ಮೊತ್ತ ದಾಖಲಿಸಲು ನೆರವಾಗಿದ್ದರು.

241 ರನ್​ಗಳ ಭಾರಿ​ ಗುರಿ ಪಡೆದಿದ್ದ ವಿಂಡೀಸ್‌ನ​ ಪೊಲಾರ್ಡ್​(68), ಶಿಮ್ರಾನ್​​ ಹೆಟ್ಮೈರ್​(41) ಅವರ ಭರ್ಜರಿ ಬ್ಯಾಟಿಂಗ್ ಹೊರತಾಗಿಯೂ 173 ರನ್​ಗಳಿಸಲಷ್ಟೇ ಶಕ್ತವಾಗಿ 67 ರನ್​ಗಳಿಂದ ಸೋಲುಕಂಡಿತು.

ಪಂದ್ಯದುದ್ದಕ್ಕೂ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ ದೀಪಕ್​ ಚಹಾರ್​, ಭುವನೇಶ್ವರ್​ ಕುಮಾರ್​, ಮೊಹಮ್ಮದ್​ ಶಮಿ ಹಾಗೂ ಕುಲ್ದೀಪ್​ ಯಾದವ್ ತಲಾ​ 2 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.​

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.