ಕೋಲ್ಕತ್ತಾ: ಟೀಂ ಇಂಡಿಯಾ ಮಾಜಿ ನಾಯಕ ಮತ್ತು ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಳೇ ಪೋಟೋವೊಂದನ್ನು ಟ್ವೀಟ್ ಮಾಡಿದ್ದು, ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಕಾಲೆಳೆದಿದ್ದಾರೆ.
-
Hi Nass .. when was this picture taken .. losing memory with old age 🤔...need my mates help @nassercricket pic.twitter.com/LtVUFxw5N2
— Sourav Ganguly (@SGanguly99) June 19, 2020 " class="align-text-top noRightClick twitterSection" data="
">Hi Nass .. when was this picture taken .. losing memory with old age 🤔...need my mates help @nassercricket pic.twitter.com/LtVUFxw5N2
— Sourav Ganguly (@SGanguly99) June 19, 2020Hi Nass .. when was this picture taken .. losing memory with old age 🤔...need my mates help @nassercricket pic.twitter.com/LtVUFxw5N2
— Sourav Ganguly (@SGanguly99) June 19, 2020
ನಾಸಿರ್ ಹುಸೇನ್ ಮತ್ತು ಸೌರವ್ ಗಂಗೂಲಿ 2002ರ ನಾಟ್ವೆಸ್ಟ್ ಸರಣಿ ಟ್ರೋಫಿ ಹಿಡಿದು ನಿಂತಿರುವ ಫೋಟೋ ಟ್ವೀಟ್ ಮಾಡಿದ್ದು, ಈ ಚಿತ್ರ ಯಾವಾಗ ತೆಗೆದಿದ್ದು, ವಯಸ್ಸಾದ ಕಾರಣ ನನಗೆ ಮರೆತು ಹೋಗಿದೆ. ಯಾರದರು ಸಹಾಯ ಮಾಡಿ ಎಂದು ನಾಸಿರ್ ಹುಸೇನ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
- — Nasser Hussain (@nassercricket) June 19, 2020 " class="align-text-top noRightClick twitterSection" data="
— Nasser Hussain (@nassercricket) June 19, 2020
">— Nasser Hussain (@nassercricket) June 19, 2020
ಗಂಗೂಲಿ ಟ್ವೀಟ್ಗೆ ನಾಸಿರ್ ಹುಸೇನ್ ಕಾರ್ಟೂನ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಗೊಂಬೆಯೊಂದು ಪೊದೆಯ ಮರೆಯಲ್ಲಿ ಮುಖ ಮುಚ್ಚಿಕೊಳ್ಳುವ ಗಿಫ್(GIF) ಪೋಸ್ಟ್ ಮಾಡಿದ್ದಾರೆ. ಇತ್ತ 2002 ನಾಟ್ವೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟೀಂ ಇಂಡಿಯಾ ಮಾಜಿ ಆಟಗಾರ ಮೊಹಮದ್ ಕೈಫ್ ಕೂಡ ನಾಸಿರ್ ಹುಸೇನ್ ಕಾಲೆಳೆದಿದ್ದಾರೆ.
-
Hi @nassercricket I think you called someone a ‘bus driver.’ And in the end we all saw Dada’s 8-pack abs at the Lord’s balcony 😉 #mymemories
— Mohammad Kaif (@MohammadKaif) June 19, 2020 " class="align-text-top noRightClick twitterSection" data="
">Hi @nassercricket I think you called someone a ‘bus driver.’ And in the end we all saw Dada’s 8-pack abs at the Lord’s balcony 😉 #mymemories
— Mohammad Kaif (@MohammadKaif) June 19, 2020Hi @nassercricket I think you called someone a ‘bus driver.’ And in the end we all saw Dada’s 8-pack abs at the Lord’s balcony 😉 #mymemories
— Mohammad Kaif (@MohammadKaif) June 19, 2020
'ಹಾಯ್ ನಾಸಿರ್ ನೀವು ಯಾರನ್ನೋ ಬಸ್ ಡ್ರೈವರ್ ಎಂದು ಕರೆದಿದ್ರಿ. ಅಂತಿಮವಾಗಿ ನಾವು ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ದಾದಾ ಅವರ 8 ಪ್ಯಾಕ್ಸ್ ನೋಡುವಂತಾಯ್ತು ಎಂದು ಅಂದು ಗಂಗೂಲಿ ಕಾಲೆಳೆದಿದ್ದ ನಾಸಿರ್ ಹುಸೇನ್ಗೆ ತಿರುಗೇಟು ನೀಡಿದ್ದಾರೆ.
2002ರ ಜುಲೈ 13ರಂದು ಲಾರ್ಡ್ಸ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡದ ನಡುವೆ ನಾಟ್ವೆಸ್ಟ್ ಸರಣಿಯ ಫೈನಲ್ ಪಂದ್ಯ ನಡೆದಿತ್ತು. ಇಂಗ್ಲೆಂಡ್ ನೀಡಿದ್ದ 326 ರನ್ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ, ಮೊಹಮ್ಮದ್ ಕೈಫ್ ಅವರ ಅಜೆಯ 87 ಮತ್ತು ಯವರಾಜ್ ಸೀಂಗ್ ಅವರ 69 ರನ್ಗಳ ನೆರವಿನಿಂದ ಲಾರ್ಡ್ಸ್ ಮೈದಾನದಲ್ಲಿ ಐತಿಹಾಸಿಕ ಸರಣಿ ಗೆದ್ದಿತ್ತು.