ದುಬೈ: ಗಾಯಕ್ವಾಡ್ ಅವರ ಜವಾಬ್ದಾರಿಯುತ ಅರ್ಧಶತಕ ಹಾಗೂ ಜಡೇಜಾ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಸಿಎಸ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಕೆಕೆಆರ್ ನೀಡಿದ 173 ರನ್ಗಳ ಗುರಿ ಬೆನ್ನತ್ತಿದ ಸಿಎಸ್ಕೆ ಕೊನೆಯ ಎಸೆತದಲ್ಲಿ ಜಡೇಜಾ ಸಿಡಿಸಿದ ಸಿಕ್ಸರ್ ಹಾಗೂ ಗಾಯಕ್ವಾಡ್ ಅವರ ಅರ್ಧಶತಕದ ನೆರವಿನಿಂದ 6 ವಿಕೆಟ್ಗಳ ಜಯ ಸಾಧಿಸುವ ಜೊತೆಗೆ ಕೆಕೆಆರ್ ಪ್ಲೇ ಆಫ್ ಕನಸಿಗೆ ತಣ್ಣೀರು ಎರಚಿದೆ.
ಆರಂಭಿಕರಾಗಿ ಕಣಕ್ಕಿಳಿದಿದ್ದ ರುತುರಾಜ್ ಗಾಯಕ್ವಾಡ್ ಅನುಭವಿ ವಾಟ್ಸನ್ ಜೊತೆಗೂಡಿ 50 ರನ್ಗಳ ಜೊತೆಯಾಟ ನಡೆಸಿದರು. ಇಂದು ಕೂಡ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ ವಾಟ್ಸನ್ 19 ಎಸೆತಗಳಲ್ಲಿ 14 ರನ್ಗಳಿಸಿ ಔಟಾದರು. ಆದರೆ ರುತುರಾಜ್ ಗಾಯಕ್ವಾಡ್ ಮಧ್ಯಮ ಕ್ರಮಾಂಕದಲ್ಲಿ ರಾಯುಡು ಜೊತೆಗೂಡಿ 68 ರನ್ಗಳ ಜೊತೆಯಾಟ ನೀಡಿ ಪಂದ್ಯವನ್ನು ಸಿಎಸ್ಕೆ ಕಡೆ ತಿರುಗಿಸಿದರು.
-
A nail-biting finish. @imjadeja finishes off in style 👏👏#CSK win by 6 wickets.#Dream11IPL pic.twitter.com/eaoeT1cU4k
— IndianPremierLeague (@IPL) October 29, 2020 " class="align-text-top noRightClick twitterSection" data="
">A nail-biting finish. @imjadeja finishes off in style 👏👏#CSK win by 6 wickets.#Dream11IPL pic.twitter.com/eaoeT1cU4k
— IndianPremierLeague (@IPL) October 29, 2020A nail-biting finish. @imjadeja finishes off in style 👏👏#CSK win by 6 wickets.#Dream11IPL pic.twitter.com/eaoeT1cU4k
— IndianPremierLeague (@IPL) October 29, 2020
ರಾಯಡು 20 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 38 ರನ್ಗಳಿಸಿ ಕಮ್ಮಿನ್ಸ್ಗೆ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೇ ಧೋನಿ ಕೂಡ ಕೇವಲ 1 ರನ್ಗಳಿಸಿ ವರುಣ್ ಚಕ್ರವರ್ತಿಗೆ 2ನೇ ಬಲಿಯಾದರು. ಗಾಯಕ್ವಾಡ್ 53 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 72 ರನ್ಗಳಿಸಿ ತಂಡದ ಗೆಲುವಿಗೆ 33 ರನ್ಗಳ ಅಗತ್ಯವಿದ್ದಾಗ ಔಟ್ ಆದರು.
ಆದರೆ ಕೇವಲ11 ಎಸೆತಗಳಲ್ಲಿ ಅಜೇಯ 31 ರನ್ಗಳಿಸಿದ ಜಡೇಜಾ ಸಿಎಸ್ಕೆ ತಂಡಕ್ಕೆ ಗೆಲುವು ತಂದುಕೊಂಡರು. ಜಡೇಜಾ 3 ಸಿಕ್ಸರ್ ಹಾಗೂ 2 ಬೌಂಡರಿ ಸಿಡಿಸಿದರು. ಇವರಿಗೆ ಬೆಂಬಲ ನೀಡಿದ ಸ್ಯಾಮ್ ಕರ್ರನ್ 13 ರನ್ಗಳಿಸಿ ಔಟಾಗದೆ ಉಳಿದರು.
ಕೆಕೆಆರ್ ಪರ ಪ್ಯಾಟ್ ಕಮ್ಮಿನ್ಸ್ 31ಕ್ಕೆ 2 ಹಾಗೂ ವರುಣ್ ಚಕ್ರವರ್ತಿ 20ಕ್ಕೆ 2 ವಿಕೆಟ್ ಪಡೆದರು. 19 ನೇ ಓವರ್ನಲ್ಲಿ 20 ರನ್ ಬಿಟ್ಟುಕೊಟ್ಟ ಫರ್ಗ್ಯುಸನ್ ಕೆಕೆಆರ್ ಸೋಲಿಗೆ ಕಾರಣರಾದರು.
ಇದಕ್ಕು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ನಿತೀಶ್ ರಾಣಾ ಅವರ 87 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 172 ರನ್ಗಳಿಸಿತ್ತು. ಆಕರ್ಷಕ 72 ರನ್ಗಳಿಸಿದ ರುತುರಾಜ್ ಗಾಯಕ್ವಾಡ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಈ ಸೋಲಿನೊಂದಿಗೆ ಕೆಕೆಆರ್ ಪ್ಲೇ ಆಫ್ ಕನಸು ಬಹುತೇಕ ಭಗ್ನವಾಗಿದೆ. ಕೆಕೆಆರ್ ಸೋಲು ಪಂಜಾಬ್ಗೆ 4ನೇ ತಂಡವಾಗಿ ಪ್ಲೇ ಆಫ್ ತಲುಪಲು ಹಾದಿ ಮಾಡಿಕೊಟ್ಟಿದೆ.