ETV Bharat / sports

ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್​​ ಪಡೆದ ಸ್ಟುವರ್ಟ್​ ಬ್ರಾಡ್ ಹೇಳಿದ್ದೇನು? - ಇಂಗ್ಲೆಂಡ್​

ವೆಸ್ಟ್​ ಇಂಡೀಸ್​ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್​ಗಳನ್ನು ಪಡೆಯುವ ಮೂಲಕ ಇಂಗ್ಲೆಂಡ್​ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ತಮಗಾದ ಖುಷಿ ಹಂಚಿಕೊಂಡರು.

ಸ್ಟುವರ್ಟ್​ ಬ್ರಾಡ್ ಮಾತು
ಸ್ಟುವರ್ಟ್​ ಬ್ರಾಡ್ ಮಾತು
author img

By

Published : Jul 29, 2020, 1:37 PM IST

ಮ್ಯಾಂಚೆಸ್ಟರ್​: ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್​ಗಳನ್ನು ಪಡೆದ ಇಂಗ್ಲೆಂಡ್​​​​​ನ ವೇಗದ ಬೌಲರ್​ ಸ್ಟುವರ್ಟ್​ ಬ್ರಾಡ್​ ಮುಂಬರುವ ಪಾಕಿಸ್ತಾನ ವಿರುದ್ಧದ ಸರಣಿ ಎದುರು ನೋಡುತ್ತಿದ್ದಾರೆ.

ವೆಸ್ಟ್​ ಇಂಡೀಸ್​ ವಿರುದ್ಧ ಪಂದ್ಯದಲ್ಲಿ 10 ವಿಕೆಟ್​ಗಳನ್ನು ಪಡೆಯುವ ಮೂಲಕ ಇಂಗ್ಲೆಂಡ್​ ಗೆಲುವು ಸಾಧಿಸಲು ಸ್ಟುವರ್ಟ್​ ಬ್ರಾಡ್ ಬೌಲಿಂಗ್​ ಸಹಾಯ ಮಾಡಿತ್ತು. ಇನ್ನು ಈ ಕುರಿತು ಮಾತನಾಡಿದ ಅವರು, ನಾನು ಅನೇಕ ಪಂದ್ಯಗಳಲ್ಲಿ ಸಾಕಷ್ಟು ಕಲಿತಿದ್ದೇನೆ. ಇನ್ನು ಈ ಪಂದ್ಯದಲ್ಲಿ ಕೆಲವು ತಂತ್ರಗಳನ್ನು ಬಳಸಿ ಬೌಲಿಂಗ್​ ಮಾಡಿದ್ದೇನೆ. ಅಷ್ಟೇ ಅಲ್ಲದೆ, ಪಾಕಿಸ್ತಾನದ ವಿರುದ್ಧ ಆಡುವ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.

ಸ್ಟುವರ್ಟ್​ ಬ್ರಾಡ್ ಮಾತು

2007ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ ಟೆಸ್ಟ್ ವಿಕೆಟ್ ಪಡೆದಾಗ ಅವರ ಮಹತ್ವಾಕಾಂಕ್ಷೆಗಳು ಏನು ಎಂದು ಕೇಳಲಾಗಿತ್ತು. ಆಗ ಅವರು, 'ಯಾವುದೇ ಗುರಿಗಳನ್ನು ನಿಗದಿಪಡಿಸಿಲ್ಲ' ಎಂದು ಹೇಳಿದ್ದರು.

ಇಂಗ್ಲೆಂಡ್ ತಂಡವು ಉತ್ತಮ ಬೌಲರ್​ಗಳನ್ನು ಹೊಂದಿದೆ. ಜೇಮ್ಸ್ ಆಂಡರ್ಸನ್, ಸ್ಯಾಮ್ ಕುರ್ರನ್, ಕ್ರಿಸ್ ವೋಕ್ಸ್ ಮತ್ತು ಬೆನ್ ಸ್ಟೋಕ್ಸ್ ಎಲ್ಲರೂ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.