ETV Bharat / sports

ನಾಡಾದಲ್ಲಿ ಜವಾನ​​ ಕೆಲಸಕ್ಕೆ ಅರ್ಜಿ ಸಲ್ಲಿಸಿದ ಭಾರತ ವಿಕಲಚೇತನ ಕ್ರಿಕೆಟ್​ ತಂಡದ ಮಾಜಿ ನಾಯಕ

ದಿನೇಶ್ ಅವರ ಹಿರಿಯ ಸಹೋದರರು ಈವರೆಗೆ ಅವರನ್ನು ಮತ್ತು ಅವರ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ, ಸಮಯ ಮುಗಿದಿದೆ, ನಮ್ಮ ಜೀವನ ನಾವು ನೋಡಿಕೊಳ್ಳಬೇಕಾಗಿರುವುದರಿಂದ ತಾನು ನಾಡಾದಲ್ಲಿ ಉದ್ಯೋಗ ಪಡೆಯಲು ಬಯಸಿರುವುದಾಗಿ ತಿಳಿಸಿದ್ದಾರೆ..

author img

By

Published : Jul 28, 2020, 3:26 PM IST

ನಾಡಾದಲ್ಲಿ ಜವಾನ​​ ಕೆಲಸಕ್ಕೆ ಅರ್ಜಿ ಸಲ್ಲಿಸಿದ ಭಾರತ ವಿಕಲಚೇತನ ಕ್ರಿಕೆಟಿಗ

ನವದೆಹಲಿ : ಭಾರತ ವಿಕಲ ಚೇತನ ಕ್ರಿಕೆಟ್​ ತಂಡದ ಮಾಜಿ ನಾಯಕ ದಿನೇಶ್​ ಸೈನ್​ ಅವರು ಜೀವನ ನಡೆಸಲು ದಾರಿಯಿಲ್ಲದೆ ಹತಾಷೆರಾಗಿ ನಾಡಾದಲ್ಲಿ ಖಾಲಿಯಿರುವ ಜವಾನ​ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಹುಟ್ಟಿನಿಂದಲೂ ಪೋಲಿಯೊದಿಂದ ಬಳಲುತ್ತಿರುವ ಸೈನ್, 2015 ಮತ್ತು 2019ರ ನಡುವೆ ಭಾರತ ವಿಕಲ ಚೇತನರ ತಂಡಕ್ಕಾಗಿ ಆಡಿದ್ದಾರೆ. ಒಂದಷ್ಟು ಸಮಯ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 35ನೇ ವಯಸ್ಸಿನ ಸೈನ್​ ಮಡದಿ ಮತ್ತು ಒಂದು ಮಗು ಹೊಂದಿದ್ದಾರೆ. ಸಂಸಾರ ನೌಕೆ ಸಾಗಿಸಲು ಸ್ಥಿರ ಆದಾಯದ ಮೂಲ ಹುಡುಕುತ್ತಿದ್ದಾರೆ.

ನನಗೆ 35 ವರ್ಷ. ನಾನು 12ನೇ ತರಗತಿಯ ನಂತರ ಕ್ರಿಕೆಟ್​ ಆಡಲು ಪ್ರಾರಂಭಿಸಿದ್ದರಿಂದ ಓದನ್ನು ಮುಗಿಸಿಲು ಸಾಧ್ಯವಾಗಿರಲಿಲ್ಲ. ಭಾರತ ತಂಡವನ್ನು ಪ್ರತಿನಿಧಿಸಿದ್ದ ನಾನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ. ನಾಡಾದಲ್ಲಿ ಪ್ಯೂನ್​ ಹುದ್ದೆ ಖಾಲಿಯಿದೆ. ಅದಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ದಿನೇಶ್ ಅವರ ಹಿರಿಯ ಸಹೋದರರು ಈವರೆಗೆ ಅವರನ್ನು ಮತ್ತು ಅವರ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ, ಸಮಯ ಮುಗಿದಿದೆ, ನಮ್ಮ ಜೀವನ ನಾವು ನೋಡಿಕೊಳ್ಳಬೇಕಾಗಿರುವುದರಿಂದ ತಾನು ನಾಡಾದಲ್ಲಿ ಉದ್ಯೋಗ ಪಡೆಯಲು ಬಯಸಿರುವುದಾಗಿ ತಿಳಿಸಿದ್ದಾರೆ.

'ಈ ಉದ್ಯೋಗ ಪಡೆಯಲು (ಪ್ಯೂನ್​) ಸಾಮಾನ್ಯ ಜನರಿಗೆ ವಯಸ್ಸಿನ ಮಿತಿ 25 ಮತ್ತು ವಿಶೇಷ ಚೇತನ ವರ್ಗಕ್ಕೆ (ದೈಹಿಕವಾಗಿ ಅಂಗವಿಕಲರಿಗೆ) 35 ವರ್ಷಗಳಿದೆ. ಆದ್ದರಿಂದ, ಸರ್ಕಾರಿ ಉದ್ಯೋಗ ಪಡೆಯಲು ಇದು ನನ್ನ ಕೊನೆಯ ಅವಕಾಶ' ಎಂದು ಅವರು ಪ್ಯೂನ್​ ಸಂದರ್ಶನಕ್ಕೆ ಆಗಮಿಸಿದ್ದ ವೇಳೆ ಹೇಳಿದ್ದಾರೆ.

'ಹುಟ್ಟಿನಿಂದಲೂ ನನ್ನ ಕಾಲುಗಳು ಪೋಲಿಯೊ ಬಾಧಿತವಾಗಿವೆ. ಆದರೆ, ಕ್ರಿಕೆಟ್‌ನ ಬಗೆಗಿನ ನನ್ನ ಉತ್ಸಾಹಕ್ಕೆ ಅಂಗವಿಕಲತೆ ಅಡ್ಡಿಯಾಗಲಿಲ್ಲ. ಬಾಂಗ್ಲಾದೇಶದಲ್ಲಿ ನಡೆದ ಐದು ರಾಷ್ಟ್ರಗಳ ಟೂರ್ನಾಮೆಂಟ್​ನ 2015ರ ಆವೃತ್ತಿಯಲ್ಲಿ (ಭಾರತವು ಇಂಗ್ಲೆಂಡ್‌ನಲ್ಲಿ 2019ಆವೃತ್ತಿಯನ್ನು ಗೆದ್ದಿದೆ), ನಾನು ನಾಲ್ಕು ಪಂದ್ಯಗಳಿಂದ 8 ವಿಕೆಟ್ ಗಳಿಸುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ ಎನಿಸಿಕೊಂಡಿದ್ದೆ. ಪಾಕಿಸ್ತಾನದ ವಿರುದ್ಧ ಎರಡು ವಿಕೆಟ್ ಪಡೆದಿದ್ದೆ' ಎಂದು ಅವರು ನೆನಪಿಸಿಕೊಂಡರು. ಭಾರತದ ಪರ ಆಡಿದ್ದರೂ ಹಣ ಮತ್ತು ಹೆಸರು ಬಾರದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.