ಕರಾಚಿ: ಕೊರೊನಾ ಸೋಂಕಿಗೊಳಗಾಗಿದ್ದ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಸನಾ ಮಿರ್ ಇದೀಗ ಚೇತರಿಸಿಕೊಂಡಿದ್ದು, ಕೋವಿಡ್ ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ.
ಟ್ವೀಟ್ ಮಾಡಿದ ಪಾಕ್ ಮಾಜಿ ಕ್ಯಾಪ್ಟನ್
ತಾವು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿರುವುದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಸನಾ, ನಿಮ್ಮ ಪ್ರೀತಿ ಹಾಗೂ ಶುಭ ಹಾರೈಕೆಗಳಿಗೆ ಧನ್ಯವಾದಗಳು. ಇದೀಗ ಕೊರೊನಾ ನೆಗೆಟಿವ್ ವರದಿ ಬಂದಿದೆ. ಕೊರೊನಾ ಸಂದರ್ಭದಲ್ಲಿ ಮನೆಯವರೊಂದಿಗೆ ಸಮಯ ಕಳೆದಿದ್ದು, ಇದೀಗ ಕೆಲಸಕ್ಕೆ ಹಾಜರಾಗುತ್ತೇನೆ ಎಂದಿದ್ದಾರೆ.
-
Thank you for all your prayers and love. I have tested negative, spent some time with family and now back to work. 🙏🏽💕#CommBox #OneDayCup pic.twitter.com/1kMSBXYInI
— Sana Mir ثناء میر (@mir_sana05) January 29, 2021 " class="align-text-top noRightClick twitterSection" data="
">Thank you for all your prayers and love. I have tested negative, spent some time with family and now back to work. 🙏🏽💕#CommBox #OneDayCup pic.twitter.com/1kMSBXYInI
— Sana Mir ثناء میر (@mir_sana05) January 29, 2021Thank you for all your prayers and love. I have tested negative, spent some time with family and now back to work. 🙏🏽💕#CommBox #OneDayCup pic.twitter.com/1kMSBXYInI
— Sana Mir ثناء میر (@mir_sana05) January 29, 2021
ಇದನ್ನೂ ಓದಿ: ಜನ್ಮದಿನದಂದೇ ಕೊರೊನಾ ಸೋಂಕಿಗೆ ತುತ್ತಾದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕಿ
ಈ ತಿಂಗಳ ಆರಂಭದಲ್ಲಿ ಕೋವಿಡ್ ಸೋಂಕಿಗೊಳಗಾಗಿದ್ದ ಅವರು, ಮನೆಯಲ್ಲಿ ಐಸೋಲೇಶನ್ಗೆ ಒಳಗಾಗಿದ್ದರು. ಕಳೆದ ವರ್ಷವೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿರುವ ಸನಾ ಮಿರ್, ಸದ್ಯ ವೀಕ್ಷಕ ವಿವರಣೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
35 ವರ್ಷದ ಸನಾ ಮಿರ್ ಪಾಕ್ ಪರ 226 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 120 ಏಕದಿನ ಹಾಗೂ 106 ಟಿ-20 ಪಂದ್ಯಗಳನ್ನಾಡಿದ್ದಾರೆ.