ETV Bharat / sports

ವೆಟ್ಟೋರಿ ಹೃದಯ ವೈಶಾಲ್ಯತೆ: ತಮ್ಮ ವೇತನದ ಒಂದು ಭಾಗ ಕಡಿಮೆ ವೇತನವಿರುವ ಬಿಸಿಬಿ ಸಿಬ್ಬಂದಿಗೆ ದೇಣಿಗೆ ​

ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್​ಗಾಗಿ 100 ದಿನಗಳವರೆಗೆ ಸ್ಪಿನ್​​ ಬೌಲಿಂಗ್​ ಕೋಚ್​ ಆಗಿ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ನೇಮಿಸಿತ್ತು. ಇದಕ್ಕಾಗಿ ದಿನಕ್ಕೆ 3571 ಯುಎಸ್​ಡಿ(2.5 ಲಕ್ಷ ರೂ) ವೇತನ ನಿಗದಿ ಮಾಡಲಾಗಿತ್ತು.

Former New Zealand spinner Daniel Vettori
ಡೇನಿಯಲ್​ ವೆಟ್ಟೋರಿ
author img

By

Published : Jun 1, 2020, 8:20 AM IST

ಢಾಕಾ: ನ್ಯೂಜಿಲ್ಯಾಂಡ್​ ಮಾಜಿ ನಾಯಕ ಹಾಗೂ ಬಾಂಗ್ಲಾದೇಶ ತಂಡದ ಸ್ಪಿನ್​ ಬೌಲಿಂಗ್ ಸಲೆಹೆಗಾರನಾಗಿರುವ ಡೇನಿಯಲ್ ವೆಟ್ಟೋರಿ ತಮ್ಮ ವೇತನದ ಒಂದು ನಿರ್ದಿಷ್ಟ ಭಾಗವನ್ನು ಬಾಂಗ್ಲಾದೇಶ ಕ್ರಿಕೆಟ್​ ಬೋರ್ಡ್​ನಲ್ಲಿ ಕಡಿಮೆ ವೇತನವಿರುವ ಸಿಬ್ಬಂದಿಗೆ ಹಂಚುವಂತೆ ಹೇಳುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್​ಗಾಗಿ 100 ದಿನಗಳವರೆಗೆ ಸ್ಪಿನ್​​ ಬೌಲಿಂಗ್​ ಕೋಚ್​ ಆಗಿ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ನೇಮಿಸಿತ್ತು. ಇದಕ್ಕಾಗಿ ದಿನಕ್ಕೆ 3571 ಯುಎಸ್​ಡಿ(2.5 ಲಕ್ಷ ರೂ) ವೇತನ ನಿಗದಿ ಮಾಡಲಾಗಿತ್ತು. ಭಾರತದ ಸುನಿಲ್​ ಜೋಷಿ ಕೋಚ್​ ಅವಧಿ ಮುಗಿದ ಬಳಿಕ ವೆಟ್ಟೋರಿಯನ್ನು ಬೌಲಿಂಗ್ ಕೋಚ್​ ಆಗಿ ನೇಮಕ ಮಾಡಲಾಗಿತ್ತು. ಇವರು ಏಷ್ಯಾದಲ್ಲಿ ಅತಿ ಹೆಚ್ಚು ವೇತನ ಪಡೆದಿದ್ದ ಬೌಲರ್​ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.

ಇದೀಗ ಕೊರೊನಾ ಲಾಕ್​ಡೌನ್​ನಿಂದ ಸಂಕಷ್ಟಕ್ಕೀಡಾಗಿರುವ ಮಂಡಳಿಯಲ್ಲಿ ಕಡಿಮೆ ವೇತನ ಪಡೆಯುತ್ತಿರುವ ಸಿಬ್ಬಂದಿಗೆ ತಮ್ಮ ವೇತನದ ಒಂದು ನಿರ್ದಿಷ್ಟ ಭಾಗವನ್ನು ನೀಡುವಂತೆ ವಿಟ್ಟೋರಿ ಸೂಚಿಸಿದ್ದಾರೆ ಎಂದು ಬಿಸಿಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಜಾಮುದ್ದಿನ್‌ ಚೌಧರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ 44,000 ಪಾಸಿಟಿವ್​ ಕೇಸ್​ ಇದ್ದು, 600 ಮಂದಿ ಮೃತಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.