ETV Bharat / sports

ಮೊದಲ ಐಪಿಎಲ್​ ಆವೃತ್ತಿಯಲ್ಲಿ ಆಡಿದ್ದ ತಂಡಕ್ಕೆ ನೆಟ್​ಬೌಲರ್​ ಆದ ಪ್ರದೀಪ್ ಸಂಗ್ವಾನ್ - ಡೆಲ್ಲಿ ಕ್ಯಾಪಿಟಲ್​

2008ರ ಐಪಿಎಲ್​ನಲ್ಲಿ ಅಂಡರ್​ 19 ಕ್ರಿಕೆಟಿಗರಿಗೆ ಹರಾಜಿನಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಿಲ್ಲವಾದ್ದರಿಂದ ಫ್ರಾಂಚೈಸಿಗಳು ನಿರ್ದಿಷ್ಟ ಮೂಲಬೆಲೆಗೆ ಕೆಲವು ಆಟಗಾರರನ್ನು ಕೊಂಡುಕೊಂಡಿದ್ದರು. ಕೊಹ್ಲಿ ಕೂಡ ಅದೇ ಮಾದರಿಯಲ್ಲಿ ಆರ್​ಸಿಬಿ ತಂಡಕ್ಕೆ ಸೇರ್ಪಡೆಗೊಂಡಿದ್ದರು.

ಪ್ರದೀಪ್ ಸಂಗ್ವಾನ್​
ಪ್ರದೀಪ್ ಸಂಗ್ವಾನ್​
author img

By

Published : Aug 22, 2020, 7:56 PM IST

ನವದೆಹಲಿ: 2008ರ ಅಂಡರ್-19 ವಿಶ್ವಕಪ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಡೆಲ್ಲಿಯ ಪ್ರದೀಪ್​ ಸಂಗ್ವಾನ್​ ಐಪಿಎಲ್​ನಲ್ಲಿ ಪದಾರ್ಪಣೆ ಮಾಡಿದ್ದ ಡೆಲ್ಲಿ ಡೇರ್​ಡೆವಿಲ್ಸ್​ ತಂಡಕ್ಕೆ ನೆಟ್​ಬೌಲರ್​ ಆಗಿ ಆಯ್ಕೆಯಾಗಿದ್ದಾರೆ.

2008ರ ಐಪಿಎಲ್​ನಲ್ಲಿ ಅಂಡರ್​ 19 ಕ್ರಿಕೆಟಿಗರಿಗೆ ಹರಾಜಿನಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಿಲ್ಲವಾದ್ದರಿಂದ ಫ್ರಾಂಚೈಸಿಗಳು ನಿರ್ದಿಷ್ಟ ಮೂಲಬೆಲೆಗೆ(ಡ್ರಾಫ್ಟ್​ ಮೂಲಕ) ಕೆಲವು ಆಟಗಾರರನ್ನು ಕೊಂಡುಕೊಂಡಿದ್ದರು. ಕೊಹ್ಲಿ ಕೂಡ ಅದೇ ಮಾದರಿಯಲ್ಲಿ ಆರ್​ಸಿಬಿ ತಂಡಕ್ಕೆ ಸೇರ್ಪಡೆಗೊಂಡಿದ್ದರು.

ಪ್ರದೀಪ್ ಸಂಗ್ವಾನ್​
ಪ್ರದೀಪ್ ಸಂಗ್ವಾನ್​

ಸಂಗ್ವಾನ್​ ಡೆಲ್ಲಿ ಡೇರ್​ ಡೇವಿಲ್ಸ್​, ಕೋಲ್ಕತ್ತಾ ನೈಟ್​ರೈಡರ್ಸ್​, ಗುಜರಾತ್​ ಲಯನ್ಸ್​ ಹಾಗೂ ಮುಂಬೈ ಇಂಡಿಯನ್ಸ್​ ತಂಡದಲ್ಲಿ ಆಡಿದ್ದರು. ಅವರು 39 ಪಂದ್ಯಗಳಲ್ಲಿ 35 ವಿಕೆಟ್​ ವಿಕೆಟ್​ ಪಡೆದಿದ್ದಾರೆ. ಆದರೆ ಆಗಿಂದಾಗ್ಗೆ ಕಾಣಿಸಿಕೊಂಡ ಗಾಯ ಅವರ ಐಪಿಎಲ್​ ವೃತ್ತಿ ಜೀವನಕ್ಕೆ ಮುಳುವಾಗಿತ್ತು. ಪರಿಣಾಮ ಇದೀಗ ಅವರು ತಾವೂ ಪದಾರ್ಪಣೆ ಮಾಡಿದ್ದ ತಂಡಕ್ಕೆ ನೆಟ್​ ಬೌಲರ್ ಆಗಿ ತೆರಳಿದ್ದಾರೆ. ವಿಶೇಷವೆಂದರೆ ಅಂದು ಡೆಲ್ಲಿ ವಿರಾಟ್​ ಕೊಹ್ಲಿಯನ್ನು ಕಡೆಗಣಿಸಿ ಪ್ರದೀಪ್​ ಸಂಗ್ವಾನ್​ರನ್ನು ಖರೀದಿಸಿತ್ತು.

ಇವರ ಜೊತೆಗೆ ಹರ್ಷ್​ ತ್ಯಾಗಿ, ಪವನ್​ ಸುಯೆಲ್​ ಸೇರಿದಂತೆ 5 ಬೌಲರ್​ಗಳನ್ನು ಡೆಲ್ಲಿ ಕ್ಯಾಪಿಟಲ್​ ದುಬೈಗೆ ಕಳುಹಿಸಿಕೊಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.