ಕೊಲಂಬೊ: ನವೆಂಬರ್ 26ರಂದು ಆರಂಭವಾಗಲಿರುವ ಚೊಚ್ಚಲ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸಲು ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಸೋಮವಾರ ಕೊಲಂಬೊ ತಲುಪಿದ್ದಾರೆ.
2020ರ ಆರಂಭದಲ್ಲೇ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಪಠಾಣ್ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ನಿವೃತ್ತಿ ನಂತರ ಮತ್ತೊಮ್ಮೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
-
In Srilanka for the #LPLT20 looking forward to this new journey... #cricket pic.twitter.com/fuzcRqyedz
— Irfan Pathan (@IrfanPathan) November 16, 2020 " class="align-text-top noRightClick twitterSection" data="
">In Srilanka for the #LPLT20 looking forward to this new journey... #cricket pic.twitter.com/fuzcRqyedz
— Irfan Pathan (@IrfanPathan) November 16, 2020In Srilanka for the #LPLT20 looking forward to this new journey... #cricket pic.twitter.com/fuzcRqyedz
— Irfan Pathan (@IrfanPathan) November 16, 2020
ಇರ್ಫಾನ್ ಪಠಾಣ್ ಬಾಲಿವುಡ್ ನಟ ಸೊಹೈಲ್ ಖಾನ್ ಮಾಲೀಕತ್ವದ ಕ್ಯಾಂಡಿ ಟಸ್ಕರ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಇವರು ಕ್ರಿಸ್ ಗೇಲ್, ಕುಸಲ್ ಪೆರೆರಾ, ಕುಸಲ್ ಮೆಂಡಿಸ್ ಮತ್ತು ನುವಾನ್ ಪ್ರದೀಪ್, ಇಂಗ್ಲೆಂಡ್ ಬಲಗೈ ವೇಗದ ಬೌಲರ್ ಲಿಯಾಮ್ ಪ್ಲಂಕೇಟ್ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲಿದ್ದಾರೆ.
ಎಲ್ಪಿಎಲ್ಗಾಗಿ ಶ್ರೀಲಂಕಾದಲ್ಲಿದ್ದೇನೆ. ಹೊಸ ಜರ್ನಿಗಾಗಿ ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ನವೆಂಬರ್ 26ರಿಂದ ಆರಂಭಗೊಳ್ಳಲಿರುವ ಈ ಟೂರ್ನಿಯಲ್ಲಿ 5 ತಂಡಗಳು ಭಾಗವಹಿಸಲಿವೆ. ಕೊಲಂಬೊ, ಕ್ಯಾಂಡಿ, ಗಾಲೆ, ದಂಬುಲಾ, ಜಫ್ನಾ ಹೆಸರಿನ ತಂಡಗಳು 21 ದಿನಗಳ ಟೂರ್ನಿಯಲ್ಲಿ 23 ಪಂದ್ಯಗಳನ್ನಾಡಲಿವೆ.