ನವದೆಹಲಿ: ಭಾರತ ಕ್ರಿಕೆಟ್ ಕಂಡ ಸ್ಫೋಟಕ ಬ್ಯಾಟ್ಸ್ಮನ್ ಎಂದರೆ ಅದು ವಿರೇಂದ್ರ ಸೆಹ್ವಾಗ್, ಬ್ಯಾಟ್ ಇರುವುದೇ ದಂಡಿಸುವುದಕ್ಕಾಗಿ ಎಂದುಕೊಂಡಿದ್ದ ಸೆಹ್ವಾಗ್ಗೆ ಟೆಸ್ಟ್-ಟಿ20ಗೆ ವ್ಯತ್ಯಾಸವಿಲ್ಲದೆ ಚೆಂಡನ್ನು ದಂಡಿಸುತ್ತಿದ್ದರು.
ತಮ್ಮ ಹೊಡಿಬಡಿ ಆಟಕ್ಕೆ ಪ್ರಸಿದ್ದರಾಗಿದ್ದ ಸೆಹ್ವಾಗ್ ಅವರ ವೃತ್ತಿ ಜೀವನದಲ್ಲಿ ಆಗಸ್ಟ್ 12 ಎಂಬುದು ಅತ್ಯಂತ ಕರಾಳ ದಿನ ಎಂದರೇ ತಪ್ಪಾಗಲಾರದು. ಏಕೆಂದರೆ ಅಂದಿನ ದಿನ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಸೆಹ್ವಾಗ್ ಎರಡೂ ಇನ್ನಿಂಗ್ಸ್ನಲ್ಲೂ ಗೋಲ್ಡನ್ ಡಕ್ ಆಗಿದ್ದರು. ಆದರೆ, ಇದು ಅವರನ್ನು ಸುದ್ದಿ ಮಾಡುವುದಕ್ಕೂ ಒಂದು ರೋಚಕ ಕಥೆಯಿದೆ.
ಭಾರತದ ಭರವಸೆಯ ಬ್ಯಾಟ್ಸ್ಮನ್ ಎಂದೇ ಖ್ಯಾತರಾಗಿದ್ದ ಸೆಹ್ವಾಗ್ 2011 ರಲ್ಲಿ ಫಾರ್ಮ್ ಕಳೆದುಕೊಂಡಿದ್ದರು. ಅವರನ್ನು ತಂಡದಿಂದ ಕೈಬಿಡುವ ದೈರ್ಯವೂ ಇಲ್ಲ, ಅವರನ್ನು ಆಯ್ಕೆ ಮಾಡಿ ಆಡುವ 11ರ ಬಳಗದಲ್ಲಿ ಆಡಿಸುವ ವಿಶ್ವಾಸದಲ್ಲೂ ಟೀಮ್ ಇಂಡಿಯಾ ಇರಲಿಲ್ಲ. ಆದರೂ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ತಂಡದಲ್ಲಿ ಟೆಸ್ಟ್ ಸರಣಿಗೆ ಸೆಹ್ವಾಗ್ ಆಯ್ಕೆ ಮಾಡಲಾಗಿದ್ದರೂ ಮೊದಲೆರಡೂ ಟೆಸ್ಟ್ನಲ್ಲಿ ಬೆಂಚ್ ಕಾಯ್ದಿದ್ದರು. ಆ ಎರಡು ಟೆಸ್ಟ್ನಲ್ಲೂ ಭಾರತ ತಂಡ ಸೋಲನುಭವಿಸಿತ್ತು.
-
On this day 8 years ago, I scored a king pair vs England in Birmingham after flying for 2 days to reach England and fielding 188 overs. Unwillingly paid tribute to Aryabhatta :)
— Virender Sehwag (@virendersehwag) August 12, 2019 " class="align-text-top noRightClick twitterSection" data="
If there was zero chance of failure, what would you do ? If you have it figured, do that ! pic.twitter.com/7VchCDASh8
">On this day 8 years ago, I scored a king pair vs England in Birmingham after flying for 2 days to reach England and fielding 188 overs. Unwillingly paid tribute to Aryabhatta :)
— Virender Sehwag (@virendersehwag) August 12, 2019
If there was zero chance of failure, what would you do ? If you have it figured, do that ! pic.twitter.com/7VchCDASh8On this day 8 years ago, I scored a king pair vs England in Birmingham after flying for 2 days to reach England and fielding 188 overs. Unwillingly paid tribute to Aryabhatta :)
— Virender Sehwag (@virendersehwag) August 12, 2019
If there was zero chance of failure, what would you do ? If you have it figured, do that ! pic.twitter.com/7VchCDASh8
ಎರಡೂ ಟೆಸ್ಟ್ ಸೋತನಂತರ ಯುವ ಆಟಗಾರ ಮುಕುಂದ್ಗೆ ರೆಸ್ಟ್ ನೀಡಿ ಸೆಹ್ವಾಗ್ಗೆ ಅವಕಾಶ ಕಲ್ಪಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 224 ರನ್ಗಳಿಗೆ ಆಲೌಟ್ ಆಗಿತ್ತು. ಇಂಗ್ಲೆಂಡ್ನಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಇಳಿದಿದ್ದ ಸೆಹ್ವಾಗ್ ಮೇಲೆ ಭಾರಿ ನಿರೀಕ್ಷೆಯಿತ್ತು. ಆದರೆ, ಸೆಹ್ವಾಗ್ ಮೊದಲ ಇನ್ನಿಂಗ್ಸ್ನ ಮೊದಲ ಬಾಲ್ನಲ್ಲಿ ಸ್ಟುವರ್ಟ್ ಬ್ರಾಡ್ ಬೌಲಿಂಗ್ನಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಔಟಾದರು. ನಂತರ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಬರೋಬ್ಬರಿ 710 ರನ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತು.
4ನೇ ದಿನ ಭಾರತಕ್ಕೆ 13 ಓವರ್ ಬಿಟ್ಟುಕೊಟ್ಟಿತ್ತು. ಭಾರತಕ್ಕೆ ಸೋಲು ತಪ್ಪಿಸಿಕೊಳ್ಳುವ ಮಾರ್ಗವಿರಲಿಲ್ಲವಾದರೂ, ಇನ್ನಿಂಗ್ಸ್ ಸೋಲನ್ನಾದರೂ ತಪ್ಪಿಸಿಕೊಳ್ಳಬಹುದು ಎಂದು ನಿರೀಕ್ಷೆಯಿಡಲಾಗಿತ್ತು. ಆದರೆ, ಅಂದು ಓಪನರ್ ಆಗಿ ಕಣಕ್ಕಿಳಿದ ಸೆಹ್ವಾಗ್ ಮತ್ತೆ ತಾವೆದುರಿಸಿದ ಮೊದಲ ಎಸೆತದಲ್ಲೇ ಜೇಮ್ಸ್ ಆ್ಯಂಡರ್ಸನ್ಗೆ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ ಆ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 242 ರನ್ಗಳ ಬೃಹತ್ ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿತು.
ಸೆಹ್ವಾಗ್ ಪಾಲಿಗೆ ಆ ಟೆಸ್ಟ್ ಇಂದಿಗೂ ಕರಾಳವಾಗಿಯೇ ಉಳಿದುಕೊಂಡಿದೆ. 104 ಟೆಸ್ಟ್ಗಳ ಇತಿಹಾಸದಲ್ಲಿ ಸೆಹ್ವಾಗ್ರನ್ನು ಅತ್ಯಂತ ಹೆಚ್ಚು ಟೀಕೆಗೆ ಗುರಿ ಮಾಡಿದ ಆ ದಿನಕ್ಕೆ 8 ವರ್ಷಗಳು ತುಂಬಿವೆ. ಇದನ್ನು ಸ್ವತಃ ನೆನೆಪಿಸಿಕೊಂಡಿರುವ ಸೆಹ್ವಾಗ್" 2 ದಿನಗಳ ಪ್ರಯಾಣ ಮಾಡಿ ಇಂಗ್ಲೆಂಡ್ ತಲುಪಿ, 188 ಓವರ್ಗಳ ಫೀಲ್ಡಿಂಗ್ ಮಾಡಿ ಆರ್ಯಭಟನಿಗೆ ಇಷ್ಟವಿಲ್ಲದ ಗೌರವ ಸಲ್ಲಿಸಿದೆ"(ಶೂನ್ಯ ಸಂಪಾದನೆ ಮಾಡಿದ್ದಕ್ಕೆ) ಎಂದು ತಮ್ಮನ್ನು ತಾವೇ ಕಾಲೆಳೆದುಕೊಂಡಿದ್ದಾರೆ.