ಜೈಪುರ್: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ಮತ್ತಷ್ಟು ಕಾವು ಪಡೆದುಕೊಂಡಿದೆ. ಕ್ರಿಕೆಟರ್ಸ್ ದಾಖಲೆಗಳ ಸುರಿಮಳೆಗೈಯುತ್ತಿದ್ದು, ಇದರ ಮಧ್ಯೆ ಕೆಲವೊಂದು ವಿವಾದಗಳು ಕೂಡ ಕಾಮನ್ ಆಗಿವೆ. ಸದ್ಯ ಮೈದಾನದಲ್ಲಿ ಅಪರೂಪದ ಘಟನೆವೊಂದು ನಡೆಯುತ್ತಿದ್ದು, ಇದಕ್ಕೆ ಎಲ್ಲಾ ಕ್ರಿಕೆಟರ್ಸ್ ಕಂಗೆಟ್ಟು ಹೋಗಿದ್ದಾರೆ.
- — CricBoll (@mycricboll) April 7, 2019 " class="align-text-top noRightClick twitterSection" data="
— CricBoll (@mycricboll) April 7, 2019
">— CricBoll (@mycricboll) April 7, 2019
ನಿನ್ನೆ ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೆಕೆಆರ್ 8ರನ್ಗಳ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ನಡೆದ ಅಪರೂಪದ ಸಂಗತಿಯಿಂದ ಕ್ರಿಕೆಟರ್ಸ್ ತಲೆಕೆಡಿಸಿಕೊಳ್ಳುವಂತಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ್ದ ರಾಜಸ್ಥಾನ ರಾಯಲ್ಸ್, ಕೆಕೆಆರ್ ಗೆಲುವಿಗೆ 139ರನ್ಗಳ ಟಾರ್ಗೆಟ್ ನೀಡಿತ್ತು. ಇದರ ಬೆನ್ನತ್ತಿದ್ದ ಕೆಕೆಆರ್ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ರಿಸ್ ಲೀನ್ ಕೇವಲ 13ರನ್ಗಳಿಕೆ ಮಾಡಿದ್ದ ವೇಳೆ ಧವಳ್ ಕುಲಕರ್ಣಿ ಬೌಲಿಂಗ್ ಮಾಡುವಾಗ ಅವರು ಎಸೆದ ಚೆಂಡು ನೇರವಾಗಿ ಸ್ಟಂಪ್ಗೆ ಬಿದ್ದಿದೆ. ತಾನು ಔಟಾಗಿದ್ದೇನೆಂದು ಕ್ರಿಸ್ ಲೀನ್ ಮೈದಾನ ತೊರೆಯಲು ಮುಂದಾಗಿದ್ದಾರೆ. ಆದರೆ, ಈ ವೇಳೆ ಅಂಪೈರ್ ಅವರಿಗೆ ಬೆಲ್ಸ್ ಹಾರದ ವಿಷಯವನ್ನ ತಿಳಿಸಿದ್ದಾರೆ. ಹೀಗಾಗಿ ಅವರು ಬ್ಯಾಟಿಂಗ್ ಮಾಡಿ ತಂಡವನ್ನ ಗೆಲುವಿನತ್ತ ಕೊಂಡೊಯ್ದಿದ್ದರು.
- — CricBoll (@mycricboll) April 6, 2019 " class="align-text-top noRightClick twitterSection" data="
— CricBoll (@mycricboll) April 6, 2019
">— CricBoll (@mycricboll) April 6, 2019
ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ರಾಯಲ್ಸ್ ಕ್ಯಾಪ್ಟನ್ ರಹಾನೆ, ಅಂಪೈರ್ ಜತೆ ಕೆಲಹೊತ್ತು ಮಾತುಕತೆ ಸಹ ನಡೆಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಪ್ಲೇಯರ್ಸ್ ಬೇಸರಗೊಂಡಿದ್ದಾರೆ. ಇನ್ನು ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಇದೇ ರೀತಿ ಎರಡು ಸಲ ನಡೆದಿದೆ. ಈ ಹಿಂದೆ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಧೋನಿ ಕೂಡ ಬೌಲ್ಡ್ ಆಗಿದ್ದರೂ ಕೂಡ ಬೆಲ್ಸ್ ಹಾರದ ಕಾರಣ ನಾಟೌಟ್ ಆಗಿದ್ದರು. ಇದಾದ ಬಳಿಕ ಚೆನ್ನೈ ವಿರುದ್ಧದ ಪಂದ್ಯದಲ್ಲಿ ರಾಹುಲ್ ಕೂಡ ಧೋನಿ ಮಾಡಿದ ರನೌಟ್ನಿಂದ ಬೆಲ್ಸ್ ಹಾರದೇ ಸೇಫ್ ಆಗಿದ್ದರು.
-
WATCH: Thala Dhoni effect? When even bails refused to fall
— IndianPremierLeague (@IPL) March 31, 2019 " class="align-text-top noRightClick twitterSection" data="
📹📹https://t.co/ccTyMBLToc #CSKvRR
">WATCH: Thala Dhoni effect? When even bails refused to fall
— IndianPremierLeague (@IPL) March 31, 2019
📹📹https://t.co/ccTyMBLToc #CSKvRRWATCH: Thala Dhoni effect? When even bails refused to fall
— IndianPremierLeague (@IPL) March 31, 2019
📹📹https://t.co/ccTyMBLToc #CSKvRR
ಧೋನಿ ಮ್ಯಾಜಿಕ್ ಮಾಡಿದ್ರೂ ಹಾರದ ಬೆಲ್ಸ್.. ರಾಹುಲ್ ಸೇಫ್ ಆದ ವಿಡಿಯೋ ವೈರಲ್!
ಇದೀಗ ಈ ನಿಯಮ ಚೇಂಜ್ ಮಾಡಬೇಕು ಎಂಬ ಕೂಗು ಸಹ ಜೋರಾಗಿ ಕೇಳಿ ಬರುತ್ತಿದೆ. ಇಂಗ್ಲೆಂಡ್ನ ಮಾಜಿ ಕ್ಯಾಪ್ಟನ್ ಮೈಕಲ್ ವಾನ್ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಿಯಮ ಬದಲಾವಣೆ ಮಾಡುವಂತೆ ಹೇಳಿದ್ದಾರೆ. ಇನ್ನು ಐಸಿಸಿ ನಿಯಮದ ಪ್ರಕಾರ ಚೆಂಡು ಸ್ಟಂಪ್ಗೆ ತಗಲಿದಾಗ ಬೆಲ್ಸ್ ಹಾರಿದರೆ ಮಾತ್ರ ಔಟ್ ಎಂಬ ನಿಯಮವಿದೆ.