ETV Bharat / sports

ಹೆಂಡ್ತಿಗೆ ವಿಚ್ಛೇದನ ನೀಡಿದ ವಿಶ್ವಕಪ್​ ವಿಜೇತ ತಂಡದ ಕ್ಯಾಪ್ಟನ್​... ಏಳೇ ವರ್ಷಕ್ಕೆ ದಾಂಪತ್ಯದಲ್ಲಿ ಬಿರುಕು! - ಆಸ್ಟ್ರೇಲಿಯಾ ಕ್ಯಾಪ್ಟನ್​ ಮೈಕಲ್​ ಕ್ಲಾರ್ಕ್​

ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಮಾಜಿ ಕ್ಯಾಪ್ಟನ್​ ಮೈಕಲ್ ಕ್ಲಾರ್ಕ್​ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದ್ದು, ಇದೀಗ ಹೆಂಡತಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ.

Former Aus captain Michael Clarke
Former Aus captain Michael Clarke
author img

By

Published : Feb 13, 2020, 7:35 AM IST

ಸಿಡ್ನಿ: ಐಸಿಸಿ ಏಕದಿನ ವಿಶ್ವಕಪ್​ ತಂಡದ ಕ್ಯಾಪ್ಟನ್​ ಆಗಿದ್ದ ಮೈಕಲ್​ ಕ್ಲಾರ್ಕ್​​ ಹಾಗೂ ಹೆಂಡತಿ ಕೈಲಿ ಇದೀಗ ಬೇರೆ ಬೇರೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಗುಡ್​ಬೈ ಹೇಳಲು ಮುಂದಾಗಿದ್ದಾರೆ. 2012ರಲ್ಲಿ ಮದುವೆಯಾಗಿದ್ದ ಈ ಜೋಡಿ ಇದೀಗ ಬೇರೆ ಬೇರೆ ವಾಸ ಮಾಡಲು ನಿರ್ಧರಿಸಿದೆ.

2015ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಗೆಲುವಿನ ತಂಡದ ಕ್ಯಾಪ್ಟನ್​ ಆಗಿದ್ದ ಇವರು,​ 115 ಟೆಸ್ಟ್​, 245 ಏಕದಿನ ಹಾಗೂ 34 ಟಿ-20 ಪಂದ್ಯಗಳಲ್ಲಿ ಭಾಗಿಯಾಗಿದ್ದಾರೆ. 2012ರಲ್ಲಿ ಕೈಲಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಕ್ಲಾರ್ಕ್​​ಗೆ ಐದು ವರ್ಷದ ಮಗಳಿದ್ದಾಳೆ.

ಮಾಡೆಲ್​ ಹಾಗೂ ಟಿವಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೈಲಿ ಇದೀಗ ತಾವು ಕ್ಲಾರ್ಕ್ ಅವರಿಂದ ಬೇರೆಯಾಗುತ್ತಿರುವುದಾಗಿ ತಿಳಿಸಿದ್ದು, ಇಬ್ಬರ ನಡುವೆ ಮಾತುಕತೆ ನಡೆದ ಬಳಿಕ ಈ ನಿರ್ಧಾರ ಕೈಗೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ವಿಚ್ಛೇದನ ಪಡೆದುಕೊಳ್ಳುವ ಮೊದಲು ಇಬ್ಬರ ನಡುವೆ ಹಣಕಾಸಿನ ಹೊಂದಾಣಿಕೆ ಸಹ ನಡೆಯಲಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.