ETV Bharat / sports

ಐಪಿಎಲ್​ ಇತಿಹಾಸದಲ್ಲಿ ಪ್ರಥಮ ಸಲ 'ಸೂಪರ್​ ಓವರ್'​​ನಲ್ಲಿ ತಂಡ ಗೆಲ್ಲಿಸದ ಬುಮ್ರಾ! - Mumbai Indians Bumrah

ರಾಯಲ್​ ಚಾಲೆಂಜರ್ಸ್​​ ಬೆಂಗಳೂರು-ಮುಂಬೈ ಇಂಡಿಯನ್ಸ್​ ನಡುವೆ ನಡೆದ ಐಪಿಎಲ್​​ ಪಂದ್ಯದಲ್ಲಿ ಕೊಹ್ಲಿ ಪಡೆ ಸೂಪರ್​ ಓವರ್​​ನಲ್ಲಿ ಗೆಲುವು ದಾಖಲು ಮಾಡುವ ಮೂಲಕ ಗೆಲುವಿನ ನಗೆ ಬೀರಿದೆ.

Bumrah
Bumrah
author img

By

Published : Sep 29, 2020, 3:07 PM IST

ದುಬೈ: 13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​​ನ ನಿನ್ನೆಯ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬಲಿಷ್ಠ ಮುಂಬೈ ಇಂಡಿಯನ್ಸ್​​ ವಿರುದ್ಧ ಸೂಪರ್​ ಓವರ್​​ನಲ್ಲಿ ಗೆಲುವು ದಾಖಲು ಮಾಡಿದ್ದು, ಈ ಮೂಲಕ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ್ದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 3ವಿಕೆಟ್​ನಷ್ಟಕ್ಕೆ 201ರನ್​ಗಳಿಕೆ ಮಾಡಿ ಮುಂಬೈ ತಂಡಕ್ಕೆ 202ರನ್​ಗಳ ಬೃಹತ್​ ಟಾರ್ಗೆಟ್​ ನೀಡಿತ್ತು. ಇದರ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್​ ಕೂಡ ನಿಗದಿತ 20 ಓವರ್​​ಗಳಲ್ಲಿ 201ರನ್​ಗಳಿಕೆ ಮಾಡಿ ಪಂದ್ಯ ಟೈ ಮಾಡಿಕೊಂಡಿತ್ತು. ಹೀಗಾಗಿ ಸೂಪರ್​ ಓವರ್​ಗಳ ಮೊರೆ ಹೋಗಬೇಕಾಯಿತು.

Bumrah
ಜಸ್​ಪ್ರೀತ್​ ಬುಮ್ರಾ

ಸೂಪರ್​ ಓವರ್​ನಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಮುಂಬೈ ಇಂಡಿಯನ್ಸ್​​​​ 8ರನ್​ಗಳ ಟಾರ್ಗೆಟ್​ ನೀಡಿತು. ಇದರ ಬೆನ್ನತ್ತಿದ್ದ ಆರ್​ಸಿಬಿ ಕೊನೆಯ ಎಸೆತದಲ್ಲಿ ಗೆಲುವಿನ ನಗೆ ಬೀರಿತು.

ತಂಡ ಗೆಲ್ಲಿಸದ ಬುಮ್ರಾ

2017ರಲ್ಲಿ ಗುಜರಾತ್​ ಲಯನ್ಸ್​​ ವಿರುದ್ಧ, 2019ರಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಸೂಪರ್​ ಓವರ್​​ನಲ್ಲಿ ತಂಡ ಗೆಲ್ಲಿಸಿ ಹೀರೋ ಆಗಿದ್ದ ಬುಮ್ರಾ ನಿನ್ನೆಯ ಪಂದ್ಯದಲ್ಲಿ ಈ ಯಶಸ್ಸು ಕಾಣಲಿಲ್ಲ. ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ವಿಫಲವಾದ ಬುಮ್ರಾ ಐಪಿಎಲ್​ ಇತಿಹಾಸದಲ್ಲೇ ಮೊದಲ ಸಲ ಸೂಪರ್​ ಓವರ್​ನಲ್ಲಿ ಮುಂಬೈ ತಂಡವನ್ನ ಗೆಲ್ಲಿಸಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.