ಮುಂಬೈ :ಯಾವುದೇ ಕ್ರೀಡಾಪಟುವಿಗಾದರೂ ಫಿಟ್‌ನೆಸ್ ತುಂಬಾ ಮುಖ್ಯ. ಇದು ಕ್ರಿಕೆಟರ್‌ಗೂ ಹೊರತಲ್ಲ. ಕ್ರಿಕೆಟರ್ಸ್ ಈ ಮೊದಲು ಬ್ಯಾಟ್ ಇಲ್ಲ ಬೌಲಿಂಗ್ ಸ್ಕಿಲ್‌ಗೆ ಹೆಚ್ಚು ಒತ್ತು ನೀಡುತ್ತಿದ್ದರು. ಆದರೆ, ಈಗ ಆಟ ಜತೆಗೆ ದೈಹಿಕ ಕ್ಷಮತೆ ಬಗ್ಗೆ ಹೆಚ್ಚುಗಮನ ಹರಿಸುತ್ತಾರೆ. ವಿಶ್ವದ ಐದು ಫಿಟೆಸ್ಟ್ ಪ್ಲೇಯರ್ಸ್‌ಗಳಲ್ಲಿ ಭಾರತೀಯರೇ ಅಗ್ರಗಣ್ಯರು.
ಫೀಲ್ಡಿಂಗ್ ಮತ್ತು ವಿಕೆಟ್ ಮಧ್ಯೆ ರನ್ ಕದಿಯುವಾಗ ಫಿಟ್ ಆಗಿದ್ರೇ ಆಟಗಾರನ ಸಾಮರ್ಥ್ಯ ಮಜಬೂತಾಗಿರುತ್ತೆ. ಸದ್ಯ ವಿಶ್ವಕ್ರಿಕೆಟ್‌ನಲ್ಲಿ ಐವರು ಕ್ರಿಕೆಟರ್ಸ್ ತಮ್ಮ ಆಟದಲ್ಲಿ ಒಳ್ಳೇ ಫಾರ್ಮ್ ಕಂಡುಕೊಳ್ಳುವುದರ ಜತೆಗೇ ತಮ್ಮ ಫಿಟ್‌ನೆಸ್‌ಗೂ ಸಾಕಷ್ಟು ಮಹತ್ವ ನೀಡುತ್ತಿದ್ದಾರೆ.
1. ವಿರಾಟ್ ಕೊಹ್ಲಿ :
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಸದಾ ರನ್ ಗಳಿಕೆಯ ಹಸಿವು. ಅವರೊಂದು ರನ್‌ಮೆಷಿನ್‌ನಂತೆ. ರನ್ ಗಳಿಕೆಯಲ್ಲೂ ಈಗ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ದಿಲ್ಲಿವಾಲಾ ಕೊಹ್ಲಿ, ತಮ್ಮ ಫಿಟ್‌ನೆಸ್‌ಗೆ ಮಾತ್ರ ಸಿಕ್ಕಾಪಟ್ಟೆ ಇಂಪಾರ್ಟೆನ್ಸ್ ಕೊಡ್ತಾರೆ. ಕುಡಿಯೋ ನೀರಿನಿಂದ ಯಾವೆಲ್ಲ ಆಹಾರ, ಎಷ್ಟೆಷ್ಟು ತಿನ್ನಬೇಕು ಅಂತಾ ತುಂಬಾ ಲೆಕ್ಕಹಾಕಿ ಸೇವಿಸುತ್ತಾರೆ. ತಾನು ಫ್ಯಾಟ್ ಆಗ್ಬಿಡ್ತೀನೋ ಅಂತಾ ವೇಗಾನ್ ಕ್ಲಬ್ ಸೇರಿದ್ದರು ಕೊಹ್ಲಿ.(Veganism -ಸಂಪೂರ್ಣ ಸಸ್ಯಹಾರಿ) ಬಿರಿಯಾನಿ ಅಂದ್ರೇ ಕೊಹ್ಲಿಗೆ ಪ್ರಾಣ. ಆದರೆ, ಈಗ ಕೊಹ್ಲಿ ಸಂಪೂರ್ಣ ಸಸ್ಯಹಾರಿ. ವೇಗಾನ್ ಕ್ಲಬ್ ಸೇರಿದ ಮೇಲೆ, ದೈಹಕ ಕ್ಷಮತೆ ಮತ್ತಷ್ಟು ಹೆಚ್ಚಿಸಿದ ಕಾರಣವೇ ಇತ್ತೀಚೆಗೆ ಒಂದರ ಮೇಲೊಂದು ರೆಕಾರ್ಡ್ ಮಾಡುತ್ತಿದ್ದಾರೆ ವಿರಾಟ್ ಕೊಹ್ಲಿ. 10 ವರ್ಷದ ಹಿಂದೆ ದುಂಡು ಮುಖದ ದಿಲ್ಲಿ ಹುಡುಗ ವಿರಾಟ್, ಈಗ ಜಿಮ್‌ನಲ್ಲಿ ಹೆಚ್ಚುಕಾಲ ವರ್ಕೌಟ್ ಮಾಡ್ತಾರೆ. ಸದ್ಯ ವಿಶ್ವದ ಯಾವೊಬ್ಬ ಕ್ರಿಕೆಟರ್ ವಿರಾಟ್ ರೀತಿ ಫಿಟ್‌ನೆಸ್ ಸ್ಕಿಲ್ ಹೊಂದಿಲ್ಲ. ಫಿಟ್‌ನೆಸ್ ದೃಷ್ಟಿಯಿಂದ ತುಂಬ ಸಮತೋಲನ ಕಾಯ್ದುಕೊಂಡಿದ್ದಾರೆ ದಿಲ್ಲಿಬಾಯ್.
2. ಬೆನ್ ಸ್ಟೋಕ್ಸ್ :
ವೇಗದ ಬೌಲರ್ಬೆನ್‌ಸ್ಟೋಕ್ಸ್ ಆಲ್‌ರೌಂಡರ್, ಅದಕ್ಕಾಗಿ ಬಹುಬೇಡಿಕೆಯ ಆಟಗಾರ. ಆಟದ ಜತೆಗೆ ಬಾಡಿ ಟೋನ್ ಕೂಡ ಪರ್ಫೆಕ್ಟಾಗಿರಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನ ಆಲ್‌ರೌಂಡರ್ ವಿಶ್ವಕ್ರಿಕೆಟ್‌ನಲ್ಲಿ ಒಳ್ಳೇ ಟ್ರ್ಯಾಕ್‌ರೆಕಾರ್ಡ್ ಹೊಂದಲು ಕಾರಣ, ಸ್ಟೋಕ್ಸ್ ಫಿಟ್‌ನೆಸ್‌ಗೆ ನೀಡುತ್ತಿರುವ ಹೆಚ್ಚಿನ ಪ್ರಾಮುಖ್ಯತೆ. ಪ್ರತಿಬಾಲ್‌ನೂ ಗಂಟೆಗೆ 140+ ಕಿ.ಮೀ ವೇಗದಲ್ಲಿ ಎಸಿತಾರೆ ಬೆನ್. ಜತೆಗೆ ಅದ್ಭುತ ಫೀಲ್ಡರ್ ಕೂಡ ಹೌದು. ಈ ಡೆಡಿಕೇಷನ್‌ನಿಂದಾಗಿ ವಿಶ್ವದ ಟಾಪ್ ಫಿಟ್‌ನೆಸ್ ಹೊಂದಿರುವ ಆಲ್‌ರೌಂಡರ್ ಆಗಿದ್ದಾರೆ. ಈಗಲೂ ಕೂಡ ಅದನ್ನ ಹಾಗೇ ಮೆಂಟೇನ್ ಮಾಡುತ್ತಿದ್ದಾರೆ.
3. ಎಂ.ಎಸ್ ಧೋನಿ:
ಕೊಹ್ಲಿಗೂ ಮೊದಲೇ ಎಂ.ಎಸ್ ಧೋನಿ ಫಿಟ್ಟೆಸ್ಟ್ ಕ್ರಿಕೆಟರ್. ಎರಡು ಫಾರ್ಮ್ಯಾಟ್‌ನಲ್ಲೂ ವಿಶ್ವಕಪ್ ಗೆಲ್ಲುವಲ್ಲಿ ಫಿಟೆನೆಸ್ ಕೂಡ ಮಹತ್ವವಹಿಸಿದೆ. ವಿಕೆಟ್ ಮುಂದೆ ಮತ್ತು ಹಿಂದೆ ಧೋನಿ ಆ್ಯಕ್ಟೀವಾಗಿರೋದನ್ನ ನೋಡಿದ್ರೇ, ಅವರ ಫಿಟ್ನೆಸ್ ಬಗ್ಗೆ ಅರಿವಾಗುತ್ತೆ. ದೇಹದ ಫ್ಲೆಕ್ಸಿಬಿಲಿಟಿ ಕಾರಣ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮೆನಾಗಿ ಧೋನಿ ಈಗಲೂ ದಂಗುಬಡಿಸುವ ಆಟ ಪ್ರದರ್ಶಿಸುತ್ತಿದ್ದಾರೆ. ಫಿಟೆನೆಸ್ ಲೆವೆಲ್‌ನಿಂದಾಗಿ ವಿಕೆಟ್ ಮಧ್ಯೆ ವೇಗವಾಗಿ ಓಡುವ ಧೋನಿಯಿಂದ ಎದುರಾಳಿ ಫೀಲ್ಡರ್‌ಗಳ ಮೇಲೂ ಒತ್ತಡ ಬೀಳುತ್ತೆ. 1 ರನ್ ಆಗುತ್ತಿದ್ದರೇ, ಅದನ್ನ 2 ರನ್‌ಗಳಾಗಿ ಓಡ್ತಾರೆ. 2 ಆಗೋದಿದ್ರೇ ಅದನ್ನ 3ರನ್ ಯಶಸ್ವಿಯಾಗಿ ಓಡುವ ಕ್ಷಮತೆ ಧೋನಿಗೆ ಮಾತ್ರವೇ ಸಾಧ್ಯ. ಕ್ರಿಕೆಟ್ ಬಗೆಗಿನ ಕಮಿಟ್‌ಮೆಂಟ್‌ನಿಂದಾಗಿ ಈಗಲೂ ವಿಶ್ವದ ಅಗ್ರಪಂಕ್ತಿಯ ಫಿಟ್‌ನೆಸ್ ಹೊಂದಿದ ಆಟಗಾರರಲ್ಲಿ ಧೋನಿ ಮುಂಚೂಣಿಯಲ್ಲಿದ್ದಾರೆ.
4. ಫಫ್ ಡು ಪ್ಲೆಸಿಸ್:
ಸೌಥ್ ಆಫ್ರಿಕಾ ಕ್ಯಾಪ್ಟನ್ ಡೂ ಪ್ಲೆಸಿಸ್‌ಗೆ ಈಗ 34. ಈ ವಯಸ್ಸಿನ ಆಟಗಾರರಿಗೆ ಗಾಯದ ಸಮಸ್ಯೆ ಕಾಣಿಸುತ್ತವೆ. ಆದರೆ, ಪ್ಲೆಸಿಸ್ ಯಾವುದೇ ಸಮಸ್ಯೆಗೆ ಸಿಲುಕಿಲ್ಲ. ತಮ್ಮ ಫಿಟ್‌ನೆಸ್‌ನಿಂದಾಗಿ ಕ್ರಿಕೆಟ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುವತ್ತ ಫೋಕಸಾಗಿದ್ದಾರೆ. ಫೀಲ್ಡಿಂಗ್ ಮತ್ತು ವಿಕೆಟ್ ಮಧ್ಯೆ ಚುರುಕಾಗಿ ಓಡುವ ರೀತಿ ನೋಡಿದ್ರೇ ಫಾಫ್ ಡೂ ಪ್ಲೆಸಿಸ್ ಫಿಟ್‌ನೆಸ್ ತಿಳಿಯುತ್ತೆ. ಪ್ಲೆಸಿಸ್ ಬ್ಯಾಟಿಂಗ್‌ನಲ್ಲೂ ಸ್ಥಿರ ಪ್ರದರ್ಶನ ತೋರುತ್ತಿದ್ರೇ ಅದಕ್ಕೆ ಅವರ ಫಿಟ್‌ನೆಸ್ ಕಾರಣಕ್ಕೆ ಅನ್ನೋದನ್ನ ಒಪ್ಪಲೇಬೇಕು.
5. ಜಸ್‌ಪ್ರೀತ್ ಬುಮ್ರಾ:
ಜಸ್‌ಪ್ರೀತ್ ಬೂಮ್ರಾ ಭಾರತದ ಆರಂಭಿಕ ವೇಗದ ಬೌಲರ್. ಎಲ್ಲ ಫಾರ್ಮ್ಯಾಟ್‌ನಲ್ಲೂ ಮಹತ್ವದ ಟೈಮ್‌ನಲ್ಲಿ ಇಂಪಾರ್ಟೆಂಟ್ ವಿಕೆಟ್‌ಗಳನ್ನ ಕೀಳೋ ಸಾಮರ್ಥ್ಯ ಹೊಂದಿದ್ದಾರೆ. ಟೀಂ ಇಂಡಿಯಾಗೆ ಒಂದುರೀತಿ ಬೌಲಿಂಗ್ ಶಕ್ತಿ. ಫಿಟ್‌ನೆಸ್ ಬಗ್ಗೆ ಸಾಕಷ್ಟು ಫೋಕಸಾಗಿದ್ದಾರೆ. ಇದೇ ಕಾರಣಕ್ಕೆ ಬೂಮ್ರಾ ಮೇಲೆ ಕೊಹ್ಲಿಗೆ ಸಾಕಷ್ಟು ವಿಶ್ವಾಸ. ಫಿಟ್‌ನೆಸ್ ಯಾವುದೇ ಕ್ರೀಡೆಯ ಆಟಗಾರನಿಗಾದರೂ ಇರಲೇಬೇಕು. ಆಗಲೇ ಸ್ಥಿರ ಪ್ರದರ್ಶನ ನೀಡಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬಹುದು.