ನವದೆಹಲಿ: ಎರಡು ವಾರಗಳ ಹಿಂದೆ ಆಂಜಿಯೋಪ್ಲ್ಯಾಸ್ಟಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಸಂಪೂರ್ಣ ಚೇತಿಸಿಕೊಂಡಿದ್ದು, ಸ್ನೇಹಿತರೊಂದಿಗೆ ಗಾಲ್ಫ್ ಆಟಕ್ಕೆ ಮರಳಿದ್ದಾರೆ.
61 ವರ್ಷದ ಭಾರತೀಯ ಕ್ರಿಕೆಟ್ನ ಲೆಜೆಂಡ್ ಚೇತರಿಸಿಕೊಂಡಿದ್ದು, ವೈದ್ಯರು ಅವಕ್ಕಾಗಿ ಕಾಯುತ್ತಿದ್ದ ಕಪಿಲ್ ಗುರುವಾರ ದೆಹಲಿಯ ಗಾಲ್ಫ್ ಕ್ಲಬ್ನಲ್ಲಿ ಸ್ನೇಹಿತರೊಂದಿ ಸೇರಿ ಗಾಲ್ಫ್ ಆಡಿದ್ದಾರೆ. ಈ ಮೂಲಕ ತಾವು ಸಂಪೂರ್ಣ ಫಿಟ್ ಇರುವುದಾಗಿ ತಮ್ಮ ಅಭಿಮಾನಿ ಸಮೂಹಕ್ಕೆ ತಿಳಿಸಿದ್ದಾರೆ.
-
Good to be back on the Golf Course .... pic.twitter.com/M3V6D7KEoF
— Kapil Dev (@therealkapildev) November 12, 2020 " class="align-text-top noRightClick twitterSection" data="
">Good to be back on the Golf Course .... pic.twitter.com/M3V6D7KEoF
— Kapil Dev (@therealkapildev) November 12, 2020Good to be back on the Golf Course .... pic.twitter.com/M3V6D7KEoF
— Kapil Dev (@therealkapildev) November 12, 2020
'ಗಾಲ್ಫ್ ಕೋರ್ಸ್ ಅಥವಾ ಕ್ರಿಕೆಟ್ ಮೈದಾನಕ್ಕೆ ಹಿಂತಿರುಗುವುದಕ್ಕೆ ಎಷ್ಟೊಂದು ಖುಷಿಯಾಗುತ್ತದೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಗಾಲ್ಫ್ ಕೋರ್ಸ್ಗೆ ಹಿಂತಿರುಗುವುದು ಮತ್ತು ಸ್ನೇಹಿತರೊಂದಿಗೆ ಆಟವಾಡುವುದು ತುಂಬಾ ಅದ್ಭುತವಾಗಿರುತ್ತದೆ' ಎಂದು ಕಪಿಲ್ ದೇವ್ ತಮ್ಮ ಟ್ವಿಟರ್ನಲ್ಲಿ ವಿಡಿಯೋ ಸಂದೇಶವೊಂದನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.
ಕಪಿಲ್ ದೇವ್ 1994ರಲ್ಲಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದಾಗಿನಿಂದಲೂ ಹವ್ಯಾಸಿ ಗಾಲ್ಫ್ ಆಟಗಾರರಾಗಿದ್ದಾರೆ. ಅವರು ವರ್ಷದಲ್ಲಿ ನಡೆಯುವ ಅನೇಕ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಾರೆ.