ETV Bharat / sports

ಕೊಹ್ಲಿ ಅನುಪಸ್ಥಿತಿಯಲ್ಲಿ ಹಿಟ್​ಮ್ಯಾನ್​ ರೋಹಿತ್​ಗಿದು ಮೊದಲ ’ಟೆಸ್ಟ್’ - ಭಾರತ vs ಆಸ್ಟ್ರೇಲಿಯಾ ಸಿಡ್ನಿ ಟೆಸ್ಟ್

ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಉಪನಾಯಕ ರೋಹಿತ್ ಶರ್ಮಾ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ.

first time Rohit Sharma is playing a Test in the absence of Kohli
ಕೊಹ್ಲಿ ಅನುಪಸ್ಥತಿಯಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯ
author img

By

Published : Jan 7, 2021, 12:44 PM IST

ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪ್ರಾರಂಭವಾಗಿದೆ. ಸ್ಟಾರ್ ಓಪನರ್ ರೋಹಿತ್ ಶರ್ಮಾ ಬಹಳ ಸಮಯದ ನಂತರ ಟೆಸ್ಟ್ ಸ್ವರೂಪಕ್ಕೆ ಮರಳಿದ್ದು, ಮಯಂಕ್ ಅಗರ್ವಾಲ್ ಬದಲಿಗೆ ಸ್ಥಾನ ಪಡೆದಿದ್ದಾರೆ.

ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಉಪನಾಯಕ ರೋಹಿತ್ ಶರ್ಮಾ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. 2013 ರಲ್ಲಿ ಟೆಸ್ಟ್​ಗೆ ಪದಾರ್ಪಣೆ ಮಾಡಿದ್ದ ಹಿಟ್​​ಮ್ಯಾನ್, ಸಿಡ್ನಿ ಪಂದ್ಯಕ್ಕೂ ಮೊದಲು ಒಟ್ಟು 32 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಎಲ್ಲ ಪಂದ್ಯಗಳಲ್ಲೂ ವಿರಾಟ್ ಕೊಹ್ಲಿ ಕೂಡ ಉಪಸ್ಥಿತರಿದ್ದರು.

ಒಬ್ಬರೂ ಉತ್ತಮ ಜೊತೆಯಾಟ ಆಡಿದ್ದು, ಅಂಕಿ- ಅಂಶಗಳು ಸಹ ಬಹಳ ಪ್ರಭಾವಶಾಲಿಯಾಗಿವೆ. ಉಭಯ ಆಟಗಾರರು ಇಲ್ಲಿಯವರೆಗೆ 17 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 53.56 ಸರಾಸರಿಯಲ್ಲಿ 857 ರನ್ ಸೇರಿಸಿದ್ದಾರೆ. ಈ ಜೋಡಿ ಮೂರು ಶತಕ ಮತ್ತು ಒಂದು ಅರ್ಧಶತಕದ ಜೊತೆಯಾಟ ಕೂಡ ಹೊಂದಿದೆ.

ಓದಿ ಕಷ್ಟದ ದಿನಗಳಲ್ಲಿ ಜೊತೆಯಲ್ಲಿ ನಿಂತ ಗೆಳೆಯ: ಬಾಲ್ಯ ಸ್ನೇಹಿತನ ಕಾರ್ಯ ಮರೆಯಲ್ಲ ಎಂದ ದಾದಾ!

ಐಪಿಎಲ್ ಸಮಯದಲ್ಲಿ ಗಾಯದಿಂದಾಗಿ, ರೋಹಿತ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಮೊದಲ ಎರಡು ಟೆಸ್ಟ್ ಪಂದ್ಯಗಳಿಗೂ ಕೂಡ ರೋಹಿತ್ ಲಭ್ಯವಾಗಿರಲಿಲ್ಲ. ಕೊಹ್ಲಿ ಮೊದಲ ಟೆಸ್ಟ್ ಆಡಿದ ನಂತರ ಭಾರತಕ್ಕೆ ಮರಳಿದ್ದು, ಪ್ರಸ್ತುತ ಪಿತೃತ್ವ ರಜೆಯಲ್ಲಿದ್ದಾರೆ.

33 ನೇ ಟೆಸ್ಟ್ ಪಂದ್ಯದವರೆಗೆ ರೋಹಿತ್ ಶರ್ಮಾ ಅವರ ಸಾಮಾನ್ಯ ಪಾಲುದಾರ:

ವಿರಾಟ್ ಕೊಹ್ಲಿ: 32 ಪಂದ್ಯ

ಅಜಿಂಕ್ಯಾ ರಹಾನೆ: 29 ಪಂದ್ಯ

ಚೇತೇಶ್ವರ್ ಪೂಜಾರ: 28 ಪಂದ್ಯ

ಆರ್ ಅಶ್ವಿನ್: 27 ಪಂದ್ಯ

ಮೊಹಮ್ಮದ್ ಶಮಿ: 24 ಪಂದ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.