ದುಬೈ: ಐಸಿಸಿ ವಿಶ್ವಕಪ್ ಸೂಪರ್ ಲೀಗ್ನ ಮೊದಲ ಆವೃತ್ತಿ ಜುಲೈ 30 ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಐರ್ಲೆಂಡ್ ವಿರುದ್ಧ ಸೌತಾಂಪ್ಟನ್ನಲ್ಲಿ ಎದುರಿಸಲಿದೆ.
ಇದು ಏಕದಿನ ಕ್ರಿಕೆಟ್ ಟೂರ್ನಮೆಂಟ್ ಆಗಿದ್ದು, ಇದರಲ್ಲಿ ಟೆಸ್ಟ್ ಆಡಲು ಮಾನ್ಯತೆ ಪಡೆದಿರುವ ಎಲ್ಲ 12 ರಾಷ್ಟ್ರ ಹಾಗೂ 2015-17ರಲ್ಲಿ ಐಸಿಸಿ ಸೂಪರ್ ಲೀಗ್ನಲ್ಲಿ ಪ್ರಶಸ್ತಿ ಗೆದ್ದಿರುವ ನೆದರ್ಲೆಂಡ್ ಭಾಗವಹಿಸಿಲಿದೆ. ಈ ಟೂರ್ನಿಯಲ್ಲಿ ಗರಿಷ್ಠ ಅಂಕ ಪಡೆದ 7 ತಂಡಗಳು ಭಾರತದಲ್ಲಿ 2023ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ನೇರ ಅರ್ಹತೆ ಪಡೆಯಲಿವೆ. ಉಳಿದ 5 ತಂಡಗಳು ಕ್ವಾಲಿಫೈಯರ್ ಮೂಲಕ ಬರಲಿವೆ.
ನಾವು ವಿಶ್ವಕಪ್ ವಿನ್ನರ್ ಇಂಗ್ಲೆಂಡ್ ಹಾಗೂ ಐರ್ಲೆಂಡ್ ನಡುವೆ ಚೊಚ್ಚಲ ಆವೃತ್ತಿಯ ಪುರುಷರ ಐಸಿಸಿ ವಿಶ್ವಕಪ್ ಸೂಪರ್ ಲೀಗ್ ಅನ್ನು ಆರಂಭಿಸಲು ಉತ್ಸುಕರಾಗಿದ್ದೇವೆ ಎಂದು ಐಸಿಸಿ ಜನರಲ್ ಮ್ಯಾನೇಜರ್ ಜೆಫ್ ಅಲ್ಲಾರ್ಡಿಸ್ ತಿಳಿಸಿದ್ದಾರೆ.
ಈ ಲೀಗ್ 2023ರ ವಿಶ್ವಕಪ್ಗೆ ಪ್ರಸ್ತುತತೆ ಮತ್ತು ಸ್ಪರ್ಧೆಯನ್ನು ತರುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ನಡೆಯುವ ವಿಶ್ವಕಪ್ ಅರ್ಹತೆಗಿಟ್ಟಿಸಿಕೊಳ್ಳಲು ಈ ಲೀಗ್ ಪರಿಣಾಮಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಲೀಗ್ನಲ್ಲಿ ಪಾಲ್ಗೊಳ್ಳುವ ಎಲ್ಲ ತಂಡಗಳು 3 ಪಂದ್ಯಗಳ 4 ಸರಣಿಯನ್ನು ತವರಿನಲ್ಲೂ ಮತ್ತು 4 ಸರಣಿಗಳನ್ನು ವಿದೇಶದಲ್ಲೂ ಆಡಲಿವೆ.