ಸಿಡ್ನಿ: ಭಾರತದ ವಿರುದ್ಧ ಏಕದಿನ ಸರಣಿ ಸೋತ ನಂತರ ಬಿಗ್ಬ್ಯಾಷ್ ಲೀಗ್ನಲ್ಲಿ ಆಡುತ್ತಿರುವ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಲೀಗ್ಗೆ ಮರಳಿದ ಮೊದಲ ಪಂದ್ಯದಲ್ಲಿಯೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ಶನಿವಾರ ನಡೆದ ಸಿಡ್ನಿ ಸಿಕ್ಸರ್ ವಿರುದ್ಧದ ಪಂದ್ಯದಲ್ಲಿ ಆ್ಯರೋನ್ ಫಿಂಚ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಆರಂಭಿಕನಾಗಿ ಕ್ರೀಸಿಗೆ ಬಂದ ಅವರು 68 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 6 ಬೌಂಡರಿ ನೆರವಿನಿಂದ 109 ರನ್ ಗಳಿಸಿದ್ದರು. ಇವರ ಏಕಾಂಗಿ ಹೋರಾಟದ ಶತಕದ ನೆರವಿನಿಂದ ಮೆಲ್ಬೋರ್ನ್ ರೆನೆಗೇಡ್ಸ್ 175 ರನ್ ಗಳಿಸಿತ್ತು.
ಆರ್ಸಿಬಿ ವಿಕೆಟ್ ಕೀಪರ್(ಫಿಲಿಪ್ಪೆ)/ಸ್ಮಿತ್ ಬ್ಯಾಟಿಂಗ್ ಸೊಗಸು:
176 ರನ್ ಟಾರ್ಗೆಟ್ ಬೆನ್ನತ್ತಿದ ಸಿಡ್ನಿ ಸಿಕ್ಸರ್ಗೆ (ಆರ್ಸಿಬಿ ತಂಡಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವ) ಜೋಶ್ ಫಿಲಿಪ್ಪೆ 42 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸೇರಿದಂತೆ 61 ರನ್ಗಳಿಸಿ ಉತ್ತಮ ಆರಂಭ ನೀಡಿದರು.
ಇವರಿಗೆ ಸಾಥ್ ನೀಡಿದ ಸ್ಟೀವ್ ಸ್ಮಿತ್ ಬಿಬಿಎಲ್ಗೆ 6 ವರ್ಷಗಳ ದೀರ್ಘಾವಧಿ ಬಳಿಕ ಮರಳಿದರೂ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಅವರು ಕೇವಲ 40 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 7 ಬೌಂಡರಿ ಸಹಿತ 66 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಆರ್ಸಿಬಿ ತಂಡ ಫಿಲುಪ್ಪೆಯವರನ್ನು 2019ರ ಹರಾಜಿನಲ್ಲಿ 20 ಲಕ್ಷ ರೂಗೆ ಖರೀದಿಸಿದೆ. ಇದೇ ಪಂದ್ಯದಲ್ಲಿ ಶತಕ ಸಿಡಿಸಿದ ಫಿಂಚ್ ಕೂಡ ಆರ್ಸಿಬಿ ತಂಡ ಸೇರಿಕೊಂಡಿದ್ದಾರೆ. ಇವರಿಗೆ 4.4 ಕೋಟಿ ರೂ ನೀಡಲಾಗಿದೆ. ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಆರ್ಸಿಬಿಗೆ ತಮ್ಮ ತಂಡದ ಆಟಗಾರರ ಬ್ಯಾಟಿಂಗ್ ಖುಷಿ ತಂದಿದೆ.