ದುಬೈ: ಮಹಿಳಾ ಟಿ20 ವಿಶ್ವಕಪ್ ಅಂತಿಮ ವೇಳಾಪಟ್ಟಿಯನ್ನು ಐಸಿಸಿ ಇಂದು ಪ್ರಕಟಿಸಿದೆ. ಬಾಂಗ್ಲಾದೇಶ ಹಾಗೂ ಥಾಯ್ಲೆಂಡ್ ತಂಡಗಳು ಅರ್ಹತಾ ಸುತ್ತಿನ ಮೂಲಕ ವಿಶ್ವಕಪ್ಗೆ ತೇರ್ಗಡೆಯಾಗಿವೆ.
2020ರಂದು ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗಿರುವ ಐಸಿಸಿ ಮಹಿಳಾ ಟಿ20 ಕ್ರಿಕೆಟ್ ಟೂರ್ನಿ ಫೆಬ್ರವರಿ 21ರಿಂದ ಮಾರ್ಚ್ 8ರವರೆಗೆ ನಡೆಯಲಿದೆ.
-
Here's how the groups for the #T20WorldCup shape up 👇 pic.twitter.com/O2V9UqTSHd
— T20 World Cup (@T20WorldCup) 7 September 2019 " class="align-text-top noRightClick twitterSection" data="
">Here's how the groups for the #T20WorldCup shape up 👇 pic.twitter.com/O2V9UqTSHd
— T20 World Cup (@T20WorldCup) 7 September 2019Here's how the groups for the #T20WorldCup shape up 👇 pic.twitter.com/O2V9UqTSHd
— T20 World Cup (@T20WorldCup) 7 September 2019
2020ರ ಮಹಿಳಾ ವಿಶ್ವಕಪ್ನಲ್ಲಿ ಒಟ್ಟು ಹತ್ತು ತಂಡಗಳು ಪಾಲ್ಗೊಳ್ಳುತ್ತಿದ್ದು ಗ್ರೂಪ್ ಎ ಮತ್ತು ಗ್ರೂಪ್ ಬಿ ಎಂದು ವಿಂಗಡಿಸಲಾಗಿದೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ 'ಎ' ಗ್ರೂಪ್ನಲ್ಲಿದ್ದರೆ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಹಾಗೂ ಥಾಯ್ಲೆಂಡ್ 'ಬಿ' ಗ್ರೂಪ್ನಲ್ಲಿದೆ.
ಟೂರ್ನಿ ಆರಂಭಿಕ ಪಂದ್ಯದಲ್ಲಿ ಭಾರತದ ವನಿತೆಯರು ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿವೆ. ಫೆಬ್ರವರಿ 21ರಂದು ಟೂರ್ನಿ ಆರಂಭವಾಗಲಿದೆ. ವಿಶ್ವ ಮಹಿಳಾ ದಿನವಾದ ಮಾರ್ಚ್ 8ರಂದು ಉಪಾಂತ್ಯ ಪಂದ್ಯ ಮೆಲ್ಬೋರ್ನ್ನಲ್ಲಿ ಆಯೋಜನೆಯಾಗಿದೆ.
ಗ್ರೂಪ್ 'ಎ' ಪಂದ್ಯಗಳು:
- 21 ಫೆಬ್ರವರಿ ಆಸ್ಟ್ರೇಲಿಯಾ Vs ಭಾರತ
- 22 ಫೆಬ್ರವರಿ ನ್ಯೂಜಿಲ್ಯಾಂಡ್ Vs ಶ್ರೀಲಂಕಾ
- 24 ಫೆಬ್ರವರಿ ಆಸ್ಟ್ರೇಲಿಯಾ Vs ಶ್ರೀಲಂಕಾ
- 24 ಫೆಬ್ರವರಿ ಭಾರತ Vs ಬಾಂಗ್ಲಾದೇಶ
- 27 ಭಾರತ Vs ನ್ಯೂಜಿಲ್ಯಾಂಡ್
- 27 ಆಸ್ಟ್ರೇಲಿಯಾ Vs ಬಾಂಗ್ಲಾದೇಶ
- 29 ಫೆಬ್ರವರಿ ನ್ಯೂಜಿಲ್ಯಾಂಡ್ Vs ಬಾಂಗ್ಲಾದೇಶ
- 29 ಫೆಬ್ರವರಿ ಭಾರತ Vs ಶ್ರೀಲಂಕಾ
- 2 ಮಾರ್ಚ್ ಶ್ರೀಲಂಕಾ Vs ಬಾಂಗ್ಲಾದೇಶ
- 2 ಮಾರ್ಚ್ ಆಸ್ಟ್ರೇಲಿಯಾ Vs ನ್ಯೂಜಿಲ್ಯಾಂಡ್
ಗ್ರೂಪ್ 'ಬಿ' ಪಂದ್ಯಗಳು:
- 22 ಫೆಬ್ರವರಿ ವೆಸ್ಟ್ ಇಂಡೀಸ್ Vs ಥಾಯ್ಲೆಂಡ್
- 23 ಫೆಬ್ರವರಿ ಇಂಗ್ಲೆಂಡ್ Vs ದಕ್ಷಿಣ ಆಫ್ರಿಕಾ
- 26 ಫೆಬ್ರವರಿ ಇಂಗ್ಲೆಂಡ್ Vs ಥಾಯ್ಲೆಂಡ್
- 26 ಫೆಬ್ರವರಿ ವೆಸ್ಟ್ ಇಂಡೀಸ್ Vs ಪಾಕಿಸ್ತಾನ
- 28 ಫೆಬ್ರವರಿ ದಕ್ಷಿಣ ಆಫ್ರಿಕಾ Vs ಥಾಯ್ಲೆಂಡ್
- 28 ಫೆಬ್ರವರಿ ಇಂಗ್ಲೆಂಡ್ Vs ಪಾಕಿಸ್ತಾನ
- 1 ಮಾರ್ಚ್ ದಕ್ಷಿಣ ಆಫ್ರಿಕಾ Vs ಪಾಕಿಸ್ತಾನ
- 1 ಮಾರ್ಚ್ ಇಂಗ್ಲೆಂಡ್ Vs ವೆಸ್ಟ್ ಇಂಡೀಸ್
- 3 ಮಾರ್ಚ್ ಪಾಕಿಸ್ತಾನ Vs ಥಾಯ್ಲೆಂಡ್
- 3 ಮಾರ್ಚ್ ವೆಸ್ಟ್ ಇಂಡೀಸ್ Vs ದಕ್ಷಿಣ ಆಫ್ರಿಕಾ
ಸೆಮಿ ಫೈನಲ್
- 5 ಮಾರ್ಚ್
- 5 ಮಾರ್ಚ್
ಫೈನಲ್
- 8 ಮಾರ್ಚ್