ಡ್ಯುನೇದಿನ್: ಬಾಂಗ್ಲಾದೇಶ ವಿರುದ್ಧ ಮಳೆಯ ಅಡಚಣೆಯ ನಡುವೆಯೂ ನಡೆದ ಕೊನೆಯ ಟಿ20 ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್ ತಂಡ ಫಿನ್ ಅಲೆನ್ ಅವರ ಅಬ್ಬರದ ಅರ್ಧಶತಕದ ನೆರವಿನಿಂದ 65 ರನ್ಗಳಿಂದ ಗೆಲುವು ಸಾಧಿಸಿ 3-0ಯಲ್ಲಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಆರಂಭಿಕರಾದ ಮಾರ್ಟಿನ್ ಗಪ್ಟಿಲ್ ಮತ್ತು ಫಿನ್ ಅಲೆನ್ ಮೊದಲ ವಿಕೆಟ್ಗೆ 85 ರನ್ಗಳ ಜೊತೆಯಾಟ ನೀಡಿದರು. ಗಪ್ಟಿಲ್ 19 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಮತ್ತು 1 ಬೌಂಡರಿ ನೆರವಿನಿಂದ 44 ರನ್ಗಳಿಸಿದರೆ, ಅಲೆನ್ ಕೇವಲ 29 ಎಸೆತಗಳಲ್ಲಿ 10 ಬೌಂಡರಿ 3 ಸಿಕ್ಸರ್ಗಳ ನೆರವಿನಿಂದ 71 ರನ್ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಫಿಲಿಫ್ಸ್ 14, ಡೇರಿಲ್ ಮಿಚೆಲ್ 11 ರನ್ಗಳಿಸಿದರು.
-
7⃣1️⃣ off just 2⃣9⃣ balls 🤯
— Royal Challengers Bangalore (@RCBTweets) April 1, 2021 " class="align-text-top noRightClick twitterSection" data="
12th Man Army, welcome the newest ⭐ on the International stage, Finn Allen, who has put the 🇧🇩 bowling to the sword today🤩#PlayBold #WeAreChallengers pic.twitter.com/v14KtMR5I1
">7⃣1️⃣ off just 2⃣9⃣ balls 🤯
— Royal Challengers Bangalore (@RCBTweets) April 1, 2021
12th Man Army, welcome the newest ⭐ on the International stage, Finn Allen, who has put the 🇧🇩 bowling to the sword today🤩#PlayBold #WeAreChallengers pic.twitter.com/v14KtMR5I17⃣1️⃣ off just 2⃣9⃣ balls 🤯
— Royal Challengers Bangalore (@RCBTweets) April 1, 2021
12th Man Army, welcome the newest ⭐ on the International stage, Finn Allen, who has put the 🇧🇩 bowling to the sword today🤩#PlayBold #WeAreChallengers pic.twitter.com/v14KtMR5I1
142 ರನ್ಗಳ ಗುರಿ ಪಡೆದ ಬಾಂಗ್ಲಾದೇಶ 9.3 ಓವರ್ಗಳಲ್ಲಿ 76 ರನ್ಗಳಿಗೆ ಆಲೌಟ್ ಆಗಿ ಹೀನಾಯ ಸೋಲುಂಡಿತು. ಮೊಹಮ್ಮದ್ ನಯೀಮ್ 19 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಟಿಮ್ ಸೌಥಿ 15ಕ್ಕೆ 3, ಟಾಡ್ ಆಸ್ಟಲ್ 13ಕ್ಕೆ 4 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಆ್ಯಡಂ ಮಿಲ್ನೆ, ಲೂಕಿ ಫರ್ಗ್ಯುಸನ್ ಮತ್ತು ಗ್ಲೇನ್ ಫಿಲಿಫ್ಸ್ ತಲಾ ಒಂದು ವಿಕೆಟ್ ಪಡೆದರು.
ನ್ಯೂಜಿಲ್ಯಾಂಡ್ ಪರ 2ನೇ ವೇಗದ ಅರ್ಧಶತಕ
ದೇಶಿಯ ಟಿ20 ಲೀಗ್ನಲ್ಲಿ ಅದ್ಭುತ ಪ್ರದರ್ಶನ ತೋರಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಫಿನ್ ಅಲೆನ್ ಕೇವಲ 18 ಎಸೆತಗಲ್ಲಿ ಅರ್ಧಶತಕ ಬಾರಿಸಿದರು. ಇದು ನ್ಯೂಜಿಲ್ಯಾಂಡ್ ಪರ 2ನೇ ವೇಗದ ಅರ್ಧಶತಕವಾಗಿದೆ. ಫಿನ್ ಅಲೆನ್ ಜೋಶ್ ಫಿಲಿಪ್ಪೆ ಬದಲು ಆರ್ಸಿಬಿ ತಂಡ ಸೇರಿಕೊಂಡಿದ್ದು, ಇಂದು ಭಾರತಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಇದನ್ನೂ ಓದಿ: ಚೆನ್ನೈನಲ್ಲಿ RCB ಕ್ಯಾಂಪ್ ಸೇರಿಕೊಂಡ ಎಬಿಡಿ