ETV Bharat / sports

'ಅರ್ಜುನ ಪ್ರಶಸ್ತಿ' ಸ್ವೀಕರಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ: ಇಶಾಂತ್​ ಶರ್ಮಾ - ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ

ಆಗಸ್ಟ್​ 29 ಕ್ರೀಡಾ ದಿನವಾದ ಇಂದು ಸಂಪ್ರದಾಯದಂತೆ ವಾರ್ಷಿಕ ಕ್ರೀಡಾ ಪ್ರಶಸ್ತಿಯನ್ನು ವರ್ಚುವಲ್​ ಕಾರ್ಯಕ್ರಮದಲ್ಲಿ ಎಲ್ಲಾ 74 ಕ್ರೀಡಾಪಟುಗಳಿಗೆ ಪ್ರದಾನ ಮಾಡಲಾಗಿದೆ.

ಅರ್ಜುನ ಪ್ರಶಸ್ತಿ
ಇಶಾಂತ್​ ಶರ್ಮಾ
author img

By

Published : Aug 29, 2020, 4:49 PM IST

ಮುಂಬೈ: 2020ರ 'ಅರ್ಜುನ ಪ್ರಶಸ್ತಿ'ಯನ್ನು ಸ್ವೀಕರಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಕ್ರಿಕೆಟಿಗ ಇಶಾಂತ್ ಶರ್ಮಾ ಹೇಳಿದ್ದಾರೆ.

ಟ್ವೀಟ್ ಮೂಲಕ ಸಂತೋಷ ವ್ಯಕ್ತಪಡಿಸಿರುವ ಶರ್ಮಾ, ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸುವುದು ಗೌರವವೆನಿಸುತ್ತಿದೆ. ಈ ಸಂದರ್ಭದಲ್ಲಿ ಪ್ರಶಸ್ತಿಗೆ ಭಾಜನರಾಗಿರುವ ಎಲ್ಲಾ ಕ್ರೀಡಾಪಟುಗಳಿಗೂ ಅಭಿನಂದನೆಗಳು. ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

  • Extremely grateful and honoured to receive the #ArjunaAward! Congratulations to fellow awardees for the same! Thanks for constant support and love from all of you!🇮🇳🙏 pic.twitter.com/dLh5WnjnEo

    — Ishant Sharma (@ImIshant) August 29, 2020 " class="align-text-top noRightClick twitterSection" data=" ">

ತಮ್ಮ ಕ್ರಿಕೆಟ್​ ಜರ್ನಿಯ ಬಗ್ಗೆ ತಿಳಿಸುತ್ತಾ, ನನಗೆ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್​ ಬಗ್ಗೆ ಒಲವಿತ್ತು. ಅಲ್ಲಿಂದ ಪ್ರತಿದಿನವೂ ಶೇ 100ರಷ್ಟು ಶ್ರಮ ಹಾಕುತ್ತಿದ್ದೇನೆ. ಪ್ರತಿಯೊಂದು ಹಂತದಲ್ಲೂ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯಲು ನನ್ನ ಆಟವನ್ನು ಹೆಚ್ಚು ಉತ್ತಮಗೊಳಿಸುತ್ತಿದ್ದೇನೆ. ನನ್ನ ದೇಹವೂ ಕೂಡ ಅದನ್ನು ಸಾಧಿಸಲು ನೆರವಾಗುತ್ತಿದೆ ಎಂದಿದ್ದಾರೆ.

ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದ ಕ್ರೀಡಾ ಸಚಿವಾಲಯ ಹಾಗೂ ತಮಗೆ ಬೆಂಬಲವಾಗಿ ನಿಂತಿರುವ ಬಿಸಿಸಿಐಗೆ ಇಶಾಂತ್​ ಧನ್ಯವಾದ ಅರ್ಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.