ಹೈದರಾಬಾದ್: ಭಾರತದ ಮಹಿಳಾ ಕುಸ್ತಿಪಟು ಹಾಗೂ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ತಮ್ಮ ಹೆಸರನ್ನು ಅರ್ಜುನ ಪ್ರಶಸ್ತಿಯಿಂದ ಕೈಬಿಟ್ಟಿರುವುದಕ್ಕೆ ಭಾರತ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಅಲ್ಲದೆ ಖೇಲ್ ರತ್ನ ಪ್ರಶಸ್ತಿ ಪಡೆದಿರುವವರು ಅರ್ಜುನ ಪ್ರಶಸ್ತಿ ಪಡೆಯಲು ಇನ್ನು ಯಾವ ಪದಕವನ್ನು ಗೆಲ್ಲಬೇಕು ಎಂದು ತಿಳಿಯಲು ಬಯಸಿರುವುದಾಗಿ. ಹಾಗೂ ಅರ್ಜುನ ಪ್ರಶಸ್ತಿ ಪಟ್ಟಿಯಿಂದ ತಮ್ಮ ಹೆಸರನ್ನು ತಿರಸ್ಕರಿಸಿದ್ದಾರೆ ಕ್ರೀಡಾ ಇಲಾಖೆಯ ಅಧಿಕಾರಿಗಳ ವಿರುದ್ಧ ಈಟಿವಿ ಭಾರತ ನಡೆಸಿದ ದೂರವಾಣಿ ಸಂದರ್ಶನದಲ್ಲಿ ಕಿಡಿಕಾರಿದ್ದಾರೆ.
ಅರ್ಜುನ ಪ್ರಶಸ್ತಿ ಪಡೆಯಲು ನಾನು ಏನು ಮಾಡುಬೇಕೆಂದು ತಿಳಿಯುತ್ತಿಲ್ಲ. ಖೇಲ್ ರತ್ನ ಪ್ರಶಸ್ತಿ ಪಡೆದಿರುವುದಕ್ಕೆ ಸಂತೋಷವಿದೆ ಮತ್ತು ಅದನ್ನು ಗೌರವಿಸುತ್ತೇನೆ. ಆದರೆ ನಾನು ಅರ್ಜುನ ಪ್ರಶಸ್ತಿ ಪಡೆಯಬೇಕೆಂದು ನನ್ನ ಕನಸು ಎಂದು ಸಾಕ್ಷಿ ತಿಳಿಸಿದ್ದಾರೆ.
ಸಾಕ್ಷಿ ಮತ್ತು ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ಅರ್ಜುನ ಪ್ರಶಸ್ತಿ ನೀಡುವುದನ್ನು ಸಚಿವಾಲಯವು ವಿರೋಧಿಸಿತ್ತು. ನಿಯಮಗಳ ಪ್ರಕಾರ ಉನ್ನತ ಪ್ರಶಸ್ತಿ ಪಡೆದವರು ಅದಕ್ಕಿಂತ ಕೆಳಸ್ತರದ ಪ್ರಶಸ್ತಿಯನ್ನು ನೀಡುವ ಆಗಿಲ್ಲ. ಆದರೂ ಆಯ್ಕೆ ಸಮಿತಿ 29 ಅರ್ಜುನ ಪ್ರಶಸ್ತಿ ವಿಜೆತರ ಪಟ್ಟಿಯಲ್ಲಿ ಇವರಿಬ್ಬರ ಹೆಸರನ್ನು ಸೇರಿಸಿದ್ದದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.
-
माननीय प्रधानमंत्री @narendramodi जी ओर माननीय खेल मंत्री @KirenRijiju जी । pic.twitter.com/YF1hQuJfPi
— Sakshi Malik (@SakshiMalik) August 22, 2020 " class="align-text-top noRightClick twitterSection" data="
">माननीय प्रधानमंत्री @narendramodi जी ओर माननीय खेल मंत्री @KirenRijiju जी । pic.twitter.com/YF1hQuJfPi
— Sakshi Malik (@SakshiMalik) August 22, 2020माननीय प्रधानमंत्री @narendramodi जी ओर माननीय खेल मंत्री @KirenRijiju जी । pic.twitter.com/YF1hQuJfPi
— Sakshi Malik (@SakshiMalik) August 22, 2020
ಎಲ್ಲಾ ಅವಾರ್ಡ್ಗಳನ್ನು ಪಡೆಯಬೇಕೆಂಬುದು ಎಲ್ಲ ಅಥ್ಲೀಟ್ಗಳ ಕನಸಾಗಿರುತ್ತದೆ. ಆದರೆ ನಾನು ಈಗಾಗಲೆ ಖೇಲ್ರತ್ನ ಅವಾರ್ಡ್ ಪಡೆದಿರುವುದರಿಂದ ನನ್ನನ್ನು ಅರ್ಜುನ ಅವಾರ್ಡ್ಗೆ ಪರಿಗಣಿಸಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಅಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದರೂ ನನಗೆ ಯಾವುದೇ ಪ್ರಶಸ್ತಿ ಸಿಗುವುದಿಲ್ಲ. ನಾನು ಈಗಾಗಲೇ ದೇಶದ ಅತಿದೊಡ್ಡ ಕ್ರೀಡಾ ಗೌರವವನ್ನು ಪಡೆದಿದ್ದೇನೆ ಎಂದು ಅವರು ಆ ರೀತಿ ಹೇಳುತ್ತಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಅರ್ಜುನ ಪ್ರಶಸ್ತಿ ವಿಜೇತ ಎಂದು ಕರೆಸಿಕೊಳ್ಳಲು ನಾನು ಸದಾ ಬಯಸುತ್ತೇನೆ. ಆಥ್ಲೀಟ್ಗಳು ಇಂತಹ ಗೌರವಗಳನ್ನು ಪಡೆಯುವುದಕ್ಕೆ ಏನೂ ಬೇಕಾದರೂ ಮಾಡುತ್ತಾರೆ. ಏಕೆಂದರೆ ಅವನಿಗೆ ಅಥವಾ ಅವಳಿಗೆ ಗೌರವ ಸಂಪಾದಿಸುವುದು ಮುಖ್ಯವಾಗಿರುತ್ತದೆ. ಅವುಗಳು ಕ್ರೀಡಾಪಟುಗಳಿಗೆ ಹೆಚ್ಚು ಪ್ರೇಣೆ ನೀಡುತ್ತವೆ ಎಂದು ಸಾಕ್ಷಿ ಮಲಿಕ್ ತಮ್ಮ ಅಸಮದಾನವನ್ನು ಈಟಿವಿ ಭಾರತಕ್ಕೆ ಹೇಳಿಕೊಂಡಿದ್ದಾರೆ.