ETV Bharat / sports

ರಿಷಭ್ ಪಂತ್ ಕಾಲ ಶೀಘ್ರದಲ್ಲೆ ಬರಲಿದೆ: ಡಿಸಿ ಕೋಚ್​ ಪ್ರವೀಣ್ ಆಮ್ರೆ - ಭಾರತ vs ಆಸ್ಟ್ರೇಲಿಯಾ ಟೆಸ್ಟ್​ ಸರಣಿ

ಈಟಿವಿ ಭಾರತ ನಡೆಸಿದ ಎಕ್ಸ್​ಕ್ಲೂಸಿವ್ ಸಂದರ್ಶನದಲ್ಲಿ ಭಾಗಿಯಾದ ಆಮ್ರೆ, ರಿಷಭ್ ಪಂತ್​ ಕುರಿತು ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.

ಪ್ರವೀಣ್ ಪ್ರವೀಣ್ ಆಮ್ರೆ ರಿಷಭ್ ಪಂತ್
ಪ್ರವೀಣ್ ಆಮ್ರೆ ರಿಷಭ್ ಪಂತ್
author img

By

Published : Jan 7, 2021, 8:12 PM IST

ಹೈದರಾಬಾದ್: ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನೂತನ ಸಹಾಯಕ ಕೋಚ್​ ಮತ್ತು ಫ್ರಾಂಚೈಸ್​ನ ಟ್ಯಾಲೆಂಟ್​ ಸ್ಕೌಟ್​ ಮುಖ್ಯಸ್ಥರಾಗಿರುವ ಪ್ರವೀಣ್​ ಆಮ್ರೆ, ಟೀಮ್ ಇಂಡಿಯಾದ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ರಿಷಭ್ ಪಂತ್​ ಅವರನ್ನು ತುಂಬಾ ಹತ್ತಿರದಿಂದ ನೋಡಿದವರಾಗಿದ್ದು, ಅವರನ್ನು ಮೂರು ಮಾದರಿಯಲ್ಲೂ ಆಡಬಲ್ಲ ಅತ್ಯುತ್ತಮ ಆಟಗಾರ ಎಂದು ಗುರುತಿಸಿದ್ದಾರೆ.

ಗುರುವಾರ ಸಿಡ್ನಿಯಲ್ಲಿ ಆರಂಭವಾಗಿರುವ 3ನೇ ಟೆಸ್ಟ್​ ಪಂದ್ಯದಲ್ಲಿ ಪಂತ್​, ಇಂದೇ ಆಸ್ಟ್ರೇಲಿಯಾ ಕ್ರಿಕೆಟ್​ ತಂಡಕ್ಕೆ ಪದಾರ್ಪಣೆ ಮಾಡಿದ್ದ ವಿಲ್ ಪುಕೋವ್​ಸ್ಕಿ ಅವರ ಎರಡು ಕ್ಯಾಚ್​ಗಳನ್ನು ಕೈಚೆಲ್ಲಿ ಭಾರತೀಯ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಆದರೆ ಈಟಿವಿ ಭಾರತ ನಡೆಸಿದ ಎಕ್ಸ್​ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಆಮ್ರೆ, ರಿಷಭ್ ಪಂತ್​ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವ ಆಟಗಾರ ದಿನದಿಂದ ದಿನಕ್ಕೆ ವಿಕೆಟ್ ಕೀಪಿಂಗ್ ಜವಾಬ್ದಾರಿ ಮತ್ತು ಎಲ್ಲಾ ಮಾದರಿಯಲ್ಲೂ ಆಡುವ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಪ್ರಶ್ನೆ: 2ನೇ ಟೆಸ್ಟ್​ನಲ್ಲಿ ಪಂತ್​ ಪ್ರದರ್ಶನವನ್ನು ಹೇಗೆ ಮೌಲ್ಯಮಾಪನ ಮಾಡುತ್ತೀರಿ?

ಪಂತ್ ಆ ಪಂದ್ಯದಲ್ಲಿ ನಾಯಕ ರಹಾನೆಯವರೊಂದಿಗಿನ ಜೊತೆಯಾಟವನ್ನು ತುಂಬಾ ಆನಂದಿಸಿದ್ದಾರೆ. 29 ರನ್​ಗಳಿಸಿದರೂ ಮಹತ್ವದ ಪಂದ್ಯದಲ್ಲಿ ಆ ಜೊತೆಯಾಟ ಮೌಲ್ಯಯುತವಾಗಿತ್ತು. ಇದು ಅವರಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಅವರು ಎಂತಹ ಆಟಗಾರ ಎಂಬುದು ನಮಗೆ ತಿಳಿದಿದೆ. ಈ ಹಿಂದೆ ಅವರು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಟೆಸ್ಟ್​ ಕ್ರಿಕೆಟ್ ಆಡಲು ಪಂತ್‌ ಸಂಪೂರ್ಣ ಸಾಮರ್ಥ್ಯ ಹೊಂದಿದ್ದಾರೆ.

ಪ್ರಶ್ನೆ: 2ನೇ ಟೆಸ್ಟ್​ಗೆ ವೃದ್ಧಿಮಾನ್​ ಸಹಾ ಬದಲಿಗೆ ಪಂತ್ ಆಯ್ಕೆ ಸರಿಯಾದ ಆಯ್ಕೆಯೇ?

ನಾವಿಲ್ಲಿ ಇದರ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಏಕೆಂದರೆ ಟೀಂ ಮ್ಯಾನೇಜ್​ಮೆಂಟ್​ಗೆ ಯಾರು ಲಯದಲ್ಲಿದ್ದಾರೆ ಎಂಬುದು ತಿಳಿದಿರುತ್ತದೆ. ಹಾಗೂ ತಂಡಕ್ಕೆ ಯಾವುದು ಉತ್ತಮ ಆಯ್ಕೆ ಎಂಬುದು ತಿಳಿದಿರುತ್ತದೆ.

ಪ್ರಶ್ನೆ: ಪಂತ್​ ದೀರ್ಘ ಮಾದರಿ ಕ್ರಿಕೆಟ್​ನಲ್ಲಿ ಮಿಂಚುತ್ತಾರೆ, ಆದರೆ ಅದೇ ಪ್ರದರ್ಶನವನ್ನು ಸೀಮಿತ ಓವರ್​ಗಳಲ್ಲಿ ಏಕೆ ಪುನಾರಾವರ್ತಿಸುತ್ತಿಲ್ಲ?

ನನ್ನ ಪ್ರಕಾರ, ಟೆಸ್ಟ್​ ಕ್ರಿಕೆಟ್​ನಲ್ಲಿ ಪಂತ್ ಹೆಚ್ಚು ಸ್ವಾತಂತ್ರರಾಗಿ ಆಡುತ್ತಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಗ್ಯಾಪ್​ ಹೆಚ್ಚಾಗಿರುವುದರಿಂದ ಅವರು ಹೊಡೆತೆಗಳೆಲ್ಲವೂ ಹೆಚ್ಚು ಮೌಲ್ಯ ತಂದುಕೊಡುತ್ತವೆ. ಮುಂದಿನ ದಿನಗಳಲ್ಲಿ ವೈಟ್​ಬಾಲ್​ ಕ್ರಿಕೆಟ್​ನಲ್ಲೂ ಇದೇ ಸಾಮರ್ಥ್ಯವನ್ನು ತೋರಿಸಲಿದ್ದಾರೆ. ಕೆಲವು ಸಣ್ಣ ಹೊಂದಾಣಿಕೆಗಳನ್ನು ಮಾಡಿಕೊಂಡ ನಂತರ ಅವರ ಸಮಯ ಬಂದೇ ಬರುತ್ತದೆ. ಅದನ್ನು ಸಾಧಿಸಲು ಅವರು ಸಾಕಷ್ಟು ಅನುಭವ ಹೊಂದಿದ್ದಾರೆ. ಅವರು ಎಲ್ಲಾ ಸ್ವರೂಪದ ಕ್ರಿಕೆಟ್ ಆಡುವ ಪ್ರತಿಭೆ.

ಪ್ರಶ್ನೆ: ನೀವು ಪಂತ್ ಅವರ ವಿಕೆಟ್ ಕೀಪಿಂಗ್ ಸಾಮರ್ಥ್ಯಕ್ಕೆ ಎಷ್ಟು ಅಂಕ ನೀಡುತ್ತೀರಿ?

ಪಂತ್ ಟೀಂ ಇಂಡಿಯಾ ಪರ ಅತಿ ಹೆಚ್ಚು ಕ್ಯಾಚ್ ಪಡೆದಿರುವ ಕೀಪರ್​ಗಳಲ್ಲಿ ಒಬ್ಬರು. ಅವರು ಒತ್ತಡದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಕ್ರಿಕೆಟ್ ಆಟದಲ್ಲಿ ಸುಧಾರಿಸಿಕೊಳ್ಳಲು ಯಾವಾಗಲೂ ಅವಕಾಶವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.