ಹೈದರಾಬಾದ್: 2020 ಮಹಿಳೆಯ ಕ್ರೀಡೆಗಳ ವರ್ಷ ಎಂದು ಭಾವಿಸಲಾಗಿತ್ತು. ಆದರೆ ನಂತರ ಕೋವಿಡ್ 19 ಸಾಂಕ್ರಾಮಿಕ ಸಂಭವಿಸಿದ ಕಾರಣ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಾಖಲೆ ವೀಕ್ಷಕರ ಮುಂದೆ ಆಡಿದ ಭಾರತದ ಮಹಿಳಾ ಕ್ರಿಕೆಟಿಗರು ಮತ್ತೆ 8 ತಂಗಳ ನಂತರ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳುತ್ತಿದ್ದಾರೆ.
ಕೋವಿಡ್ 19 ಮಹಿಳೆಯರ ಕ್ರಿಕೆಟ್ಗಾಗಿ ಮಾಡಿದ ಎಲ್ಲಾ ಉತ್ತಮ ಕಾರ್ಯಗಳನ್ನು ಹಳಿ ತಪ್ಪಿಸುವ ಬೆದರಿಕೆಯಾಕುತ್ತಿದೆ. ಇದು ಮಹಿಳೆಯರ ಕ್ರಿಕೆಟ್ನ ಬೆಳವಣಿಗೆಯನ್ನು ಹಾಸಿಗೊಳಿಸುವ ಮೂಲಕ ಎರಡು ವರ್ಷಗಳ ಹಿಂದಕ್ಕೆ ಕೊಂಡೊಯ್ದಿದೆ ಎಂದು ಹೇಳಿದ್ದಾರೆ.
ಪುರುಷರ ಕ್ರಿಕೆಟ್ಅನ್ನು ಮತ್ತೆ ಟ್ರ್ಯಾಕ್ ತರುವುದಕ್ಕೆ ಹೆಚ್ಚಿನ ಕ್ರಿಕೆಟ್ ಸಂಸ್ಥೆಗಳು ಕಾಳಜಿ ವಹಿಸಿವೆ. ಆದರೆ ಹೆಚ್ಚು ಮಹಿಳಾ ಕ್ರಿಕೆಟ್ ಇಲ್ಲದಿರುವ ಸಂದರ್ಭದಲ್ಲಿ ಭಾರತದ ಮಹಿಳಾ ಟಿ20 ಚಾಲೆಂಜ್ ಮತ್ತು ಆಸ್ಟ್ರೇಲಿಯಾದ ಮಹಿಳಾ ಬಿಗ್ಬ್ಯಾಶ್ ಲೀಗ್ ನಡುವೆ ವೇಳಾಪಟ್ಟಿ ಘರ್ಷಣೆ ಉಂಟುಮಾಡಿದ್ದು, ಮಹಿಳೆಯರ ಆಟವನ್ನು ಕುಂಠಿತಗೊಳಿಸಿದೆ.
ಈ ವಿಚಾರವಾಗಿ ಈಟಿವಿ ಭಾರತದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿರುವ ಇಂಗ್ಲೆಂಡ್ ಮಹಿಳಾ ತಂಡದ ಕೋಚ್ ಮಾರ್ಕ್ ರಾಬಿನ್ಸನ್, WIPLಮತ್ತು WBBL ನಡುವಿನ ಸಂಘರ್ಷ ಆಟಕ್ಕೆ ಸೂಕ್ತವಲ್ಲ ಹಾಗೂ ಇದು ಸರಿಯಾದ ಸಮಯವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದಾಗ್ಯೂ, ಮಹಿಳಾ ಟಿ 20 ಚಾಲೆಂಜರ್ಸ್ ದಿನಾಂಕಗಳನ್ನು ನಿರ್ಧರಿಸುವ ಮೊದಲುಬಿಸಿಸಿಐ ಶಾರ್ಜಾದಲ್ಲಿ ಎಲ್ಲಾ ವ್ಯವಸ್ಥೆಗಳು ಮತ್ತು ಮೂಲಸೌಕರ್ಯಗಳ ಬಗ್ಗೆ ಯೋಚಿಸಬೇಕೆಂದು ರಾಬಿನ್ಸನ್ ಒತ್ತಿ ಹೇಳಿದ್ದಾರೆ.
2017ರಲ್ಲಿ ಇಂಗ್ಲೆಂಡ್ ಮಹಿಳಾ ತಂಡ ವಿಶ್ವಕಪ್ ಗೆಲ್ಲುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೋಚ್ ರಾಬಿನ್ಸನ್, ಮಹಿಳಾ ಐಪಿಎಲ್ಅನ್ನು ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದ ನಂತರ ಮಹಿಳಾ ಐಪಿಎಲ್ ಲೀಗ್ನಲ್ಲಿ ಆಯೋಜಿಸುವುದು ಸರಣ ಮತ್ತು ಸುಲಭವಾದ ಮಾರ್ಗ ಎಂದು ಸಲಹೆ ನೀಡಿದ್ದಾರೆ.
ಎರಡು ಮಹಿಳಾ ಲೀಗ್ಗಳ ನಡುವಿನ ಸಂಘರ್ಷಕ್ಕೆ ಇದು ಸಮಯವಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಟೂರ್ನಿ ನಡೆಯುತ್ತಿವೆ. ಹಾಗಾಗಿ ಯಾರು ಬಿಗ್ಬ್ಯಾಶ್ನಲ್ಲಿ ಆಡುವ ಅವಕಾಶವಿಲ್ಲವೋ ಅಂತಹ ಆಟಗಾರ್ತಿಯರಿಗೆ ಮಹಿಳೆಯರ ಐಪಿಎಲ್ ಒಂದು ಒಳ್ಳೆಯ ಅವಕಾಶವಾಗಿದೆ ಎಂದಿರುವ ರಾಬಿನ್ಸನ್ ಆಸ್ಟ್ರೇಲಿಯಾ ಆಟಗಾರ್ತಿಯರು ಈ ಲೀಗ್ನಲ್ಲಿ ಆಡದಿರುವುದು ಮತ್ತು ಭಾರತದ ಪ್ರಮುಖ ಆಟಗಾರ್ತಿಯರು ಬಿಗ್ಬ್ಯಾಶ್ನಲ್ಲಿ ಪಾಲ್ಗೊಳ್ಳದಿರುವುದು ಅವಮಾನಕರ ಸಂಗತಿ ಎಂದಿದ್ದಾರೆ.