ETV Bharat / sports

ಕೆ ಎಲ್ ರಾಹುಲ್ ದೀರ್ಘಾವಧಿ ವಿಕೆಟ್ ಕೀಪರ್​ ಆಗಬಾರದು.. ಅದಕ್ಕೆ ಮಾಜಿ ಕ್ರಿಕೆಟರ್ಸ್‌ ಕೊಟ್ಟರು ಕಾರಣ.. - ಕೆಎಲ್​ ರಾಹುಲ್​ ವಿಕೆಟ್​ ಕೀಪಿಂಗ್​

ಭಾರತ ತಂಡದ ಪರ ಆಡಿರುವ ಆಕಾಶ್​ ಚೊಪ್ರಾ ಹಾಗೂ ಮಾಜಿ ವಿಕೆಟ್​ ಕೀಪರ್​ ನಯನ್​ ಮೊಂಗಿಯಾ ಕೆಎಲ್​ ರಾಹುಲ್​ ದೀರ್ಘಾವದಿಯ ವಿಕೆಟ್​ ಕೀಪರ್​ ಆದರೆ ಅದು ಅವರ ಬ್ಯಾಟಿಂಗ್​ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

KL Rahul wicket Keeper
KL Rahul wicket Keeper
author img

By

Published : Jan 18, 2020, 7:14 PM IST

ಮುಂಬೈ: ಆಸ್ಟ್ರೇಲಿಯಾ ವಿರುದ್ಧದ 2ನೇ ಪಂದ್ಯದಲ್ಲಿ ಕೆ ಎಲ್​ ರಾಹುಲ್​ ಬ್ಯಾಟಿಂಗ್​ ಜೊತೆಗೆ ವಿಕೆಟ್ ಕೀಪಿಂಗ್​ನಲ್ಲೂ ಮಿಂಚಿದ್ದರು. ಆದರೆ, ಇದೇ ಜವಾಬ್ದಾರಿಯನ್ನು ದೀರ್ಘಾವಧಿಗೆ ಮುಂದುವರಿಸುವುದು ಬೇಡ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತ ತಂಡದ ಪರ ಆಡಿರುವ ಆಕಾಶ್​ ಚೊಪ್ರಾ ಹಾಗೂ ಮಾಜಿ ವಿಕೆಟ್​ ಕೀಪರ್​ ನಯನ್​ ಮೊಂಗಿಯಾ ಕೆ ಎಲ್​ ರಾಹುಲ್​ ದೀರ್ಘಾವಧಿಯ ವಿಕೆಟ್​ ಕೀಪರ್​ ಆದರೆ ಅದು ಅವರ ಬ್ಯಾಟಿಂಗ್​ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಹುಲ್​ ಈ ಹಿಂದೆ ಅರೆಕಾಲಿಕ ವಿಕೆಟ್​ ಕೀಪರ್ ಆಗಿದ್ದ ದ್ರಾವಿಡ್​ಗಿಂತಲೂ ಉತ್ತಮ ವಿಕೆಟ್​ ಕೀಪರ್​. ಆದರೆ, ರಾಹುಲ್​ ಕೀಪಿಂಗ್​ ಹಾಗೂ ಬ್ಯಾಟಿಂಗ್​ ಎರಡೂ ಜವಾಬ್ದಾರಿಗಳನ್ನು ನಿರ್ವಹಿಸಬಾರದು. ಅವರು 50 ಓವರ್​ಗಳ ತನಕ ಕೀಪಿಂಗ್​ ಮಾಡಿ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡುವುದು ಆಸಾಧ್ಯ. ರಾಹುಲ್​ ನನ್ನ ಪ್ರಕಾರ ಅತ್ಯುತ್ತಮ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​. ಆದರೆ, ಎರಡೂ ಜವಾಬ್ದಾರಿ ನಿರ್ವಹಿಸಿದರೆ ಅವರಿಗೆ ಕೆಲಸದ ಒತ್ತಡ ಹೆಚ್ಚಾಗುತ್ತದೆ ಎನ್ನುವುದೇ ನನ್ನ ಅನಿಸಿಕೆ. ಹಾಗಾಗಿ ರಾಹುಲ್​ ತಂಡದ 2ನೇ ವಿಕೆಟ್​​ ಕೀಪರ್​ ಆಗಿರುವುದೇ ಉತ್ತಮ ಎಂದು ಆಕಾಶ್​ ಚೋಪ್ರಾ ತಿಳಿಸಿದ್ದಾರೆ.

ಮತ್ತೊಬ್ಬ ಮಾಜಿ ಕ್ರಿಕೆಟಿಗ ನಯನ್​ ಮೊಂಗಿಯಾ ಕೂಡ ರಾಹುಲ್​ ತಂಡದ ವಿಕೆಟ್​ ಕೀಪರ್​ಗೆ ನಂಬರ್​ ಒನ್​ ಆಯ್ಕೆಯಾಗಬಾರದು. ಅವರು 2ನೇ ವಿಕೆಟ್​ ಕೀಪರ್​ ಆಗಿ ಉತ್ತಮರು. ಅವರು ಟಿ20 ಕ್ರಿಕೆಟ್​ನಲ್ಲಿ ವಿಕೆಟ್​ ಕೀಪಿಂಗ್​ ಮಾಡಬಹುದು. ಆದರೆ, ಏಕದಿನ ಕ್ರಿಕೆಟ್​ನಲ್ಲಿ ಅಸಾಧ್ಯ. ಆದ್ದರಿಂದ ತಂಡದಲ್ಲಿ ಒಬ್ಬ ಖಾಯಂ ವಿಕೆಟ್​ ಕೀಪರ್​ ಇರಲೇಬೇಕು ಎಂದು ತಿಳಿಸಿದ್ದಾರೆ.

ರಿಷಭ್​ ಪಂತ್​ ಅನುಪಸ್ಥಿತಿಯಲ್ಲಿ ರಾಹುಲ್​ ತಮ್ಮ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆದರೆ, ಅವರೇ ಖಾಯಂ ವಿಕೆಟ್​ ಕೀಪರ್​ ಆದರೆ ಖಂಡಿತ ಅವರ ಬ್ಯಾಟಿಂಗ್​ಗೆ ತೊಂದರೆಯಾಗುತ್ತದೆ. ರಾಹುಲ್​ ತಂಡದ ವಿಕೆಟ್​ ಕೀಪರ್​ಗಿಂತ ಬ್ಯಾಟ್ಸ್​ಮನ್​ ಆಗಿ ಹೆಚ್ಚು ಅವಶ್ಯಕರಾಗಿದ್ದಾರೆ ಎಂದು ಎಂದು ಮೊಂಗಿಯಾ ಅಭಿಪ್ರಾಯಪಟ್ಟಿದ್ದಾರೆ.

ರಾಜ್​ಕೋಟ್​ನಲ್ಲಿ ನಡೆದಿದ್ದ ಆಸೀಸ್​ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ರಾಹುಲ್​ 80 ರನ್​ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದ್ದಲ್ಲದೆ. ವಿಕೆಟ್​ ಕೀಪಿಂಗ್​ನಲ್ಲಿ ಒಂದು ಸ್ಟಂಪ್​ ಹಾಗೂ ಎರಡು ಕ್ಯಾಚ್​ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.