ಸೌತಾಂಪ್ಟನ್ : ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಅದ್ಭುತ ಕ್ಷೇತ್ರರಕ್ಷಣೆ ತೋರಿದ್ದಾರೆ. ಸ್ಟಿವ್ ಸ್ಮಿತ್ರನ್ನು ರನ್ಔಟ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾದ ಲೆಜೆಂಡರಿ ಫೀಲ್ಡರ್ ಜಾಂಟಿ ರೋಡ್ಸ್ರನ್ನು ನೆನೆಪಿಸಿದ್ದಾರೆ.
2ನೇ ಟಿ20 ಪಂದ್ಯದ ಟಾಮ್ ಕರ್ರನ್ ಎಸೆದ 5ನೇ ಓವರ್ನಲ್ಲಿ ಲೆಗ್ ಸೈಡ್ನಲ್ಲಿ ಟಚ್ ಕೊಟ್ಟು ಸಿಂಗಲ್ ರನ್ ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ, ಶಾರ್ಟ್ ಮಿಡ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮಾರ್ಗನ್, ಚೆಂಡನ್ನು ತೆಗೆದುಕೊಂಡು ಡೈವ್ ಮಾಡುತ್ತಾ ನೇರವಾಗಿ ಸ್ಟಂಪ್ಗೆ ಹೊಡೆಯುವ ಮೂಲಕ ಸ್ಮಿತ್ರನ್ನು ಪೆವಿಲಿಯನ್ಗೆ ಕಳುಹಿಸಿದರು.
-
❓/🔟
— ICC (@ICC) September 6, 2020 " class="align-text-top noRightClick twitterSection" data="
How do you rate this piece of fielding by Eoin Morgan? 👀 #ENGvAUSpic.twitter.com/MEP2ODOoL9
">❓/🔟
— ICC (@ICC) September 6, 2020
How do you rate this piece of fielding by Eoin Morgan? 👀 #ENGvAUSpic.twitter.com/MEP2ODOoL9❓/🔟
— ICC (@ICC) September 6, 2020
How do you rate this piece of fielding by Eoin Morgan? 👀 #ENGvAUSpic.twitter.com/MEP2ODOoL9
ಸ್ಮಿತ್ ಅಷ್ಟಕ್ಕಾಗಲೇ 7 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 10 ರನ್ಗಳಿಸಿ ಉತ್ತಮ ಆರಂಭ ಕಂಡುಕೊಳ್ಳುತ್ತಿದ್ದರು. ಆದರೆ, ಮಾರ್ಗನ್ ತಮ್ಮ ಅದ್ಭುತ ಕ್ಷೇತ್ರ ರಕ್ಷಣೆಯಿಂದ ಇಂಗ್ಲೆಂಡ್ಗೆ ಮೇಲುಗೈ ತಂದುಕೊಟ್ಟರು.
ಜಾಂಟಿ ರೋಡ್ಸ್ 1992ರಲ್ಲಿ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ಹಕ್ರನ್ನು ಡೈವ್ ಮಾಡುವ ಮೂಲಕ ರನ್ ಔಟ್ ಮಾಡಿರೋದು ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ರನ್ಔಟ್ ಎಂದೇ ಹೆಸರಾಗಿದೆ. ಇಂದಿನ ಪಂದ್ಯದಲ್ಲಿ ಮಾರ್ಗನ್ ಕೂಡ ರೋಡ್ಸ್ರನ್ನು ನೆನೆಪಿಗೆ ಬರುವಂತೆ ಮಾಡಿದ್ದಾರೆ.
ಇಂಗ್ಲೆಂಡ್ ನೀಡಿದ ಆರಂಭಿಕ ಆಘಾತದ ನಡುವೆಯೂ ಆಸ್ಟ್ರೇಲಿಯಾ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್ಗಳಿಸಿದೆ.