ಮುಂಬೈ: ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾರನ್ನು ಏಕದಿನ ಕ್ರಿಕೆಟ್ಗೆ ಲಾಯಕ್ಕಿಲ್ಲ ಎಂದಿದ್ದ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ರನ್ನು ಜಡೇಜಾ ಟ್ವಿಟರ್ನಲ್ಲಿ ತರಾಟೆ ತೆಗೆದುಕೊಂಡಿದ್ದಾರೆ.
ವಿಶ್ವಕಪ್ನಲ್ಲಿ ಕೇವಲ ಹೆಚ್ಚುವರಿ ಆಟಗಾರನಾಗಿಯೇ ಮುಂದುವರಿದಿರುವ ಜಡೇಜಾರಿಗೆ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಅವಕಾಶ ಸಿಗಬಹುದಾ ಎಂಬ ವಿಚಾರವಾಗಿ ಸುದ್ದಿ ಏಜೆನ್ಸಿಯೊಂದಕ್ಕೆ ಪ್ರತಿಕ್ರಿಯಿಸಿದ್ದ ಸಂಜಯ್ ಮಂಜ್ರೇಕರ್, '50 ಓವರ್ಗಳ ಪಂದ್ಯದಲ್ಲಿ ಚೂರು ಚೂರಾಗಿರುವ ಆಟಗಾರನ ದೊಡ್ಡ ಅಭಿಮಾನಿ ನಾನಲ್ಲ, ಜಡೇಜಾ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬೌಲರ್, ಆದರೆ ಅವರು 50 ಓವರ್ಗಳ ಪಂದ್ಯದಲ್ಲಿ ಆತ ಉತ್ತಮ ಬ್ಯಾಟ್ಸ್ ಮನ್ ಹಾಗೂ ಸ್ಪೀನ್ ಬೌಲರ್ ಅಲ್ಲ' ಎಂದು ಹೇಳಿಕೆ ನೀಡಿದ್ದರು.
-
Still i have played twice the number of matches you have played and i m still playing. Learn to respect ppl who have achieved.i have heard enough of your verbal diarrhoea.@sanjaymanjrekar
— Ravindrasinh jadeja (@imjadeja) July 3, 2019 " class="align-text-top noRightClick twitterSection" data="
">Still i have played twice the number of matches you have played and i m still playing. Learn to respect ppl who have achieved.i have heard enough of your verbal diarrhoea.@sanjaymanjrekar
— Ravindrasinh jadeja (@imjadeja) July 3, 2019Still i have played twice the number of matches you have played and i m still playing. Learn to respect ppl who have achieved.i have heard enough of your verbal diarrhoea.@sanjaymanjrekar
— Ravindrasinh jadeja (@imjadeja) July 3, 2019
ಮಂಜ್ರೇಕರ್ ಹೇಳಿಕೆಯಿಂದ ಸಿಟ್ಟಿಗೆದ್ದಿರುವ ಜಡೇಜಾ"ನಾನು ನೀವು ಆಡಿರುವ ಎರಡರಷ್ಟು ಪಂದ್ಯಗಳನ್ನಾಡಿದ್ದೇನೆ, ಇಂದು ಆಡುತ್ತಿದ್ದೇನೆ. ಮೊದಲು ಸಾಧನೆ ಮಾಡಿದ ವ್ಯಕ್ತಿಗಳನ್ನು ಗೌರವದಿಂದ ಕಾಣುವುದನ್ನು ಕಲಿತುಕೊಳ್ಳಿ, ನಿಮ್ಮ ಮಾತಿ ಅತಿಸಾರವನ್ನು ಕೇಳಿ ಸಾಕಾಗಿದೆ" ಎಂದು ಟ್ವಿಟರ್ನಲ್ಲಿ ಮಂಜ್ರೇಕರ್ರನ್ನು ತರಾಟೆ ತೆಗೆದುಕೊಂಡಿದ್ದಾರೆ.
ಮಂಜೇಕ್ರರ್ ಇದಕ್ಕೂ ಮೊದಲು ಧೋನಿ,ಭುವನೇಶ್ವರ್ ಹಾಗೂ ಪೊಲಾರ್ಡ್ರ ಪ್ರದರ್ಶನ ಕುರಿತು ಟ್ವೀಟ್ ಮಾಡಿ ಟ್ರೋಲ್ಗೆ ಗುರಿಯಾಗಿದ್ದರು. ಅಲ್ಲದೆ ಪೊಲ್ಲಾರ್ಡ್ ಮಂಜ್ರೇಕರ್ಗೆ ಟ್ವೀಟ್ ಮೂಲಕವೇ ಉತ್ತರಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಜಡೇಜರನ್ನು ಟೀಕಿಸಿ ಅವರಿಂದಲೇ ತಕ್ಕ ಶಾಸ್ತಿ ಮಾಡಿಸಿಕೊಂಡಿದ್ದಾರೆ.