ETV Bharat / sports

ಕೋವಿಡ್​ ಭೀತಿ: ದ.ಆಫ್ರಿಕಾ-ಇಂಗ್ಲೆಂಡ್ ನಡುವಿನ ಏಕದಿನ ಕ್ರಿಕೆಟ್​​ ಸರಣಿ ರದ್ದು

ಈ ಸರಣಿ ಐಸಿಸಿ ಕ್ರಿಕೆಟ್​ ಪುರುಷರ ಸೂಪರ್​ ಲೀಗ್​ನ ಭಾಗವಾಗಿದ್ದರಿಂದ ಭವಿಷ್ಯದಲ್ಲಿ ಮತ್ತೆ ಎರಡು ಮಂಡಳಿಗಳು ಯಾವಾಗ ಸರಣಿ ಆಯೋಜಿಸಬೇಕೆಂದು ನಿರ್ಧರಿಸಲಿವೆ.

ದಕ್ಷಿಣ ಆಫ್ಫ್ರಿಕಾ ಇಂಗ್ಲೆಂಡ್ ಏಕದಿನ ಸರಣಿ
ದಕ್ಷಿಣ ಆಫ್ಫ್ರಿಕಾ ಇಂಗ್ಲೆಂಡ್ ಏಕದಿನ ಸರಣಿ
author img

By

Published : Dec 7, 2020, 7:59 PM IST

ಕೇಪ್​ ಟೌನ್​: ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯನ್ನು ರದ್ದುಗೊಳಿಸಲಾಗಿದೆ ಎಂದು ಇಸಿಬಿ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.

ಎರಡೂ ತಂಡದ ಆಟಗಾರರು ಮತ್ತು ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸೋಮವಾರ ಕ್ರಿಕೆಟ್​ ಮಂಡಳಿಗಳು ಹೇಳಿಕೆ ಬಿಡುಗಡೆ ಮಾಡಿವೆ.

ಈ ಸರಣಿ ಐಸಿಸಿ ಕ್ರಿಕೆಟ್​ ಪುರುಷರ ಸೂಪರ್​ ಲೀಗ್​ನ ಭಾಗವಾಗಿದ್ದರಿಂದ ಭವಿಷ್ಯದಲ್ಲಿ ಮತ್ತೆ ಎರಡು ಮಂಡಳಿಗಳು ಯಾವಾಗ ಸರಣಿ ಆಯೋಜಿಸಬೇಕೆಂದು ನಿರ್ಧರಿಸಲಿವೆ.

  • 🚨 JUST IN: The #SAvENG ODI series has been postponed.

    The decision was taken jointly by the two boards to ensure the mental and physical health and welfare of players from both teams.

    A decision will be made between the boards as to when the series will now take place. pic.twitter.com/tiGKEkNL0b

    — ICC (@ICC) December 7, 2020 " class="align-text-top noRightClick twitterSection" data=" ">

ಇದನ್ನೂ ಓದಿ: ವೇಗವಾಗಿ ಸ್ಟಂಪ್ ಮಾಡಲು ನಾನು ಧೋನಿಯಲ್ಲ: ಟಿ-20 ಪಂದ್ಯದ ವೇಳೆ ಎಂಎಸ್​ಡಿ ನೆನಪಿಸಿಕೊಂಡ ಮ್ಯಾಥ್ಯೂ​

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಸ್ಎ ಕಾರ್ಯಕಾರಿ ಸಿಇಒ ಕುಗಾಂಡ್ರಿ ಗೋವೆಂದರ್, "ಈ ಸರಣಿ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಸಿಎಸ್​ಎ ಅಥವಾ ಇಸಿಬಿ ಇದನ್ನು ಲಘುವಾಗಿ ತೆಗೆದುಕೊಳ್ಳಲದೆ ಈ ಪ್ರವಾಸವನ್ನು ಮುಂದೂಡುವ ನಿರ್ಧಾರ ತೆಗೆದುಕೊಂಡಿರುವುದು ಸಮಂಜಸ ಮತ್ತು ಜವಾಬ್ದಾರಿಯುತವಾಗಿದೆ" ಎಂದಿದ್ದಾರೆ.

ಈ ಸಂದರ್ಭದಲ್ಲಿ ನಮ್ಮ ಜೊತೆ ಸಕಾರಾತ್ಮಕ ಸಂಬಂಧವನ್ನು ಮುಂದುವರೆಸಿದ ಇಸಿಬಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಭವಿಷ್ಯದಲ್ಲಿ ಇಂಗ್ಲೆಂಡ್​ ತಂಡಕ್ಕೆ ಆತಿಥ್ಯ ನೀಡಲು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಈಗಾಗಲೇ ನಡೆದಿರುವ ಟಿ-20 ಸರಣಿಯನ್ನು ಇಂಗ್ಲೆಂಡ್ ತಂಡ 3-0 ಅಂತರದಲ್ಲಿ ಗೆದ್ದುಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.