ETV Bharat / sports

ರಾಜಕೀಯ ಕಾರಣಗಳಿಂದ ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಸರಣಿ ರದ್ದಾಗುವ ಸಾಧ್ಯತೆ

author img

By

Published : Nov 14, 2020, 5:47 PM IST

ಮಾಜಿ ನ್ಯಾಯಾಧೀಶರಾಗಿರುವ ಯಾಕೂಬ್ ಅವರನ್ನು ಅಕ್ಟೋಬರ್ 30ರಂದು ಕ್ರಿಕೆಟ್ ಮಂಡಳಿಯ ಮಧ್ಯಂತರ ಅಧ್ಯಕ್ಷರಾಗಿ ಕ್ರೀಡಾ ಸಚಿವ ನಾಥಿ ಮೆಥೆತ್ವಾ ನೇಮಕ ಮಾಡಿದ್ದರು. ಆದರೆ ಕ್ರಿಕೆಟ್​ ಮಂಡಳಿ ಸರ್ಕಾರ ನೇಮಿಸಿರುವ ಮಧ್ಯಂತರ ಅಧ್ಯಕ್ಷರ ಅಧಿಕಾರಕ್ಕೆ ಒಪ್ಪಿಗೆ ಸೂಚಿಸಿಲ್ಲ ಎಂದು ತಿಳಿದು ಬಂದಿದೆ.

ಇಂಗ್ಲೆಂಡ್-ದಕ್ಷಿಣ ಆಫ್ರಿಕಾ
ಇಂಗ್ಲೆಂಡ್-ದಕ್ಷಿಣ ಆಫ್ರಿಕಾ

ಜೋಹನ್​ ಬರ್ಗ್ಸ್​: ಅವ್ಯವಸ್ಥೆಯಿಂದಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ ಅಲ್ಲಿನ ಕ್ರೀಡಾ ಸಚಿವ ನಾಥಿ ಮೆಥೆತ್ವಾ ಅವರ ಕೋಪವನ್ನು ಎದರಿಸುತ್ತಿರುವುದರಿಂದ ನವೆಂಬರ್​ ಕೊನೆಯಲ್ಲಿ ಆರಂಭವಾಗಬೇಕಿದ್ದ ಇಂಗ್ಲೆಂಡ್​ ವಿರುದ್ಧದ ವೈಟ್ ​ಬಾಲ್​ ಸರಣಿ ರದ್ದಾಗುವ ಅಪಾಯಕ್ಕೆ ಸಿಲುಕಿದೆ.

"ಇಂಗ್ಲೆಂಡ್ ಆಲೋಚನೆ ಏನಾಗಿದೆ ಎಂದು ನನಗೆ ತಿಳಿದಿಲ್ಲ. ಆದರೆ ಇಂದು ಸಂಜೆಯೊಳಗೆ ಕ್ರಿಕೆಟ್​ ಮಂಡಳಿಯ ಸದಸ್ಯರ ಕೌನ್ಸಿಲ್​ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ ಇಂಗ್ಲೆಂಡ್​ ತಂಡ ಬಹುಶಃ ನಿರಾಶೆಗೊಳ್ಳಬೇಕಾಗುತ್ತದೆ. ಇದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ" ಎಂದು ಮಂಡಳಿಯ ಮಧ್ಯಂತರ ಅಧ್ಯಕ್ಷ ಝಾಕ್ ಯಾಕೂಬ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಾಜಿ ನ್ಯಾಯಾಧೀಶರಾಗಿರುವ ಯಾಕೂಬ್ ಅವರನ್ನು ಅಕ್ಟೋಬರ್ 30ರಂದು ಕ್ರಿಕೆಟ್ ಮಂಡಳಿಯ ಮಧ್ಯಂತರ ಅಧ್ಯಕ್ಷರಾಗಿ ಕ್ರೀಡಾ ಸಚಿವ ನಾಥಿ ಮೆಥೆತ್ವಾ ನೇಮಕ ಮಾಡಿದ್ದರು. ಆದರೆ ಕ್ರಿಕೆಟ್​ ಮಂಡಳಿ ಸರ್ಕಾರ ನೇಮಿಸಿರುವ ಮಧ್ಯಂತರ ಅಧ್ಯಕ್ಷರ ಅಧಿಕಾರಕ್ಕೆ ಒಪ್ಪಿಗೆ ಸೂಚಿಸಿಲ್ಲ ಎಂದು ತಿಳಿದು ಬಂದಿದೆ.

ದಕ್ಷಿಣ ಆಫ್ರಿಕಾ ನವೆಂಬರ್ 27ರಿಂದ ಆರಂಭವಾಗಲಿರುವ ಆರು ವೈಟ್ ಬಾಲ್ ಅಂತಾರಾಷ್ಟ್ರೀಯ ಪಂದ್ಯಗಳಿಗಾಗಿ ಆಡಲು ಇಂಗ್ಲೆಂಡ್​ ತಂಡ ಸೋಮವಾರ ಆಗಮಿಸಲಿದೆ. ಆದರೆ ಕ್ರಿಕೆಟ್​ ಮಂಡಳಿ ಮತ್ತು ಹೊಸ ಅಧ್ಯಕ್ಷರ ನಡುವೆ ಹೊಂದಾಣಿಕೆಯಾಗದಿದ್ದರೆ, ಈ ಟೂರ್ನಿ ರದ್ದಾಗಲಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.