ಸೌತಾಂಪ್ಟನ್: ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ತಂಡದ ವೇಗದ ಬೌಲರ್ ಜೆಮ್ಸ್ ಆಂಡರ್ಸನ್ ಹೊಸ ದಾಖಲೆ ನಿರ್ಮಿಸಿದ್ದಾರೆ.
38 ವರ್ಷದ ವೇಗದ ಬೌಲರ್ ಪಾಕ್ ಬ್ಯಾಟ್ಸ್ಮನ್ ಅಜರ್ ಅಲಿ ವಿಕೆಟ್ ಪಡೆದುಕೊಳ್ಳುತ್ತಿದ್ದಂತೆ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ 600 ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎಂಬ ದಾಖಲೆಗೆ ಪಾತ್ರರಾದರು. ಇದಕ್ಕೂ ಮೊದಲು ಅನಿಲ್ ಕುಂಬ್ಳೆ ಸೇರಿದಂತೆ ಮೂವರು ಸ್ಪಿನ್ನರ್ಗಳು ಈ ದಾಖಲೆ ನಿರ್ಮಿಸಿದ್ದಾರೆ.
-
A historic wicket 🙌 #ENGvPAKpic.twitter.com/W29iMRY06O
— ICC (@ICC) August 25, 2020 " class="align-text-top noRightClick twitterSection" data="
">A historic wicket 🙌 #ENGvPAKpic.twitter.com/W29iMRY06O
— ICC (@ICC) August 25, 2020A historic wicket 🙌 #ENGvPAKpic.twitter.com/W29iMRY06O
— ICC (@ICC) August 25, 2020
2003ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಡೆಬ್ಯು ಮಾಡಿರುವ ವೇಗಿ ಆಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದುಕೊಂಡಿರುವ ಪೈಕಿ ಇದೀಗ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪಾಕ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೂ ಮೊದಲು 593 ವಿಕೆಟ್ ಪಡೆದುಕೊಂಡಿದ್ದ ಈ ವೇಗಿ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 5ವಿಕೆಟ್ ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ ಎರಡು ವಿಕೆಟ್ ಪಡೆದುಕೊಂಡು ಈ ಸಾಧನೆ ಮಾಡಿದ್ದಾರೆ.
ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಂಡ್ ಈಗಾಗಲೇ ಟೆಸ್ಟ್ ಕ್ರಿಕೆಟ್ನಲ್ಲಿ 500ವಿಕೆಟ್ ಪಡೆದುಕೊಂಡಿರುವ ಸಾಧನೆ ಮಾಡಿದ್ದಾರೆ.
ಟೆಸ್ಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದುಕೊಂಡ ಪ್ಲೇಯರ್ಸ್
- ಮುತ್ತಯ್ಯ ಮುರಳೀದರ್(ಶ್ರೀಲಂಕಾ) 800 ವಿಕೆಟ್, 133 ಟೆಸ್ಟ್ (ಸ್ಪಿನ್ನರ್)
- ಶೇನ್ ವಾರ್ನ್(ಆಸ್ಟ್ರೇಲಿಯಾ) 708 ವಿಕೆಟ್ 145 ಪಂದ್ಯ (ಸ್ಪಿನ್ನರ್)
- ಅನಿಲ್ ಕುಂಬ್ಳೆ(ಭಾರತ) 619 ವಿಕೆಟ್ 132 ಪಂದ್ಯ (ಸ್ಪಿನ್ನರ್)
- ಜೆಮ್ಸ್ ಆಂಡರ್ಸನ್(ಇಂಗ್ಲೆಂಡ್) 600* ವಿಕೆಟ್ 156 ಪಂದ್ಯ (ವೇಗಿ)
- ಗ್ಲೇನ್ ಮೆಕ್ಗ್ರಾತ್(ಆಸ್ಟ್ರೇಲಿಯಾ) 563 ವಿಕೆಟ್ 124 ಪಂದ್ಯ ( ಮಧ್ಯಮ ವೇಗಿ)