ETV Bharat / sports

ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್​ ಲೆಜೆಂಡ್​ ಇಯಾನ್ ಬೆಲ್​

author img

By

Published : Sep 5, 2020, 11:02 PM IST

2004ರಲ್ಲಿ ಇಂಗ್ಲೆಂಡ್​ ಪರ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಇಯಾನ್​ ಬೆಲ್​ ಒಟ್ಟಾರೆ 118 ಟೆಸ್ಟ್​, 161 ಏಕದಿನ ಪಂದ್ಯ ಹಾಗೂ 8 ಟಿ20 ಪಂದ್ಯಗಳನ್ನಾಡಿದ್ದಾರೆ. 5 ಆ್ಯಶಸ್ ಟೆಸ್ಟ್​ ಸರಣಿ ಗೆದ್ದ ತಂಡದ ಭಾಗವಾಗಿರುವ ಅವರು ಟೆಸ್ಟ್​ನಲ್ಲಿ 22 ಶತಕ, 46 ಅರ್ಧಶತಕದ ಸಹಿತ 7727 ರನ್​, ಏಕದಿನ ಕ್ರಿಕೆಟ್​ನಲ್ಲಿ 4 ಶತಕ 35 ಅರ್ಧಶತಕದ ಸಹಿತ 5416 ರನ್​ ಗಳಿಸಿದ್ದಾರೆ.

ಇಯಾನ್ ಬೆಲ್​
ಇಯಾನ್ ಬೆಲ್​

ಲಂಡನ್​: ಇಂಗ್ಲೆಂಡ್​ ಕ್ರಿಕೆಟ್​ ಕಂಡಂತಹ ಶ್ರೇಷ್ಠ ಬ್ಯಾಟ್ಸ್​ಮನ್​ ಇಯಾನ್​ ಬೆಲ್​ ತಮ್ಮ ಕ್ರಿಕೆಟ್​ ವೃತ್ತಿ ಬದುಕಿಗೆ ವಿದಾಯ ಹೇಳುವುದಾಗಿ ಟ್ವೀಟ್​ ಮೂಲಕ ಘೋಷಿಸಿದ್ದಾರೆ.

ನಾಳೆಯಿಂದ ಆರಂಭವಾಗಲಿರುವ ಕೌಂಟಿ ಪಂದ್ಯದಲ್ಲಿ ವಾರ್​ವಿಕ್​ಶೈರ್​ ತಂಡದ ಪರ ಆಡುವುದೇ ತಮ್ಮ ಕೊನೆಯ ರೆಡ್​ ಬಾಲ್​ ಕ್ರಿಕೆಟ್​ ಹಾಗೂ ಮುಂದಿನ ನಾನು ನನ್ನ ಕೊನೆಯ ಟಿ20 ಪಂದ್ಯವನ್ನಾಡಲಿದ್ದೇನೆ ಎಂದು 38 ವರ್ಷದ ಇಯಾನ್​ ಬೆಲ್​ ತಿಳಿಸಿದ್ದಾರೆ.

2020-21ರ ಆವೃತ್ತಿಗೆ ವಾರ್​ವಿಕ್​ಶೈರ್​ ಪರ ಆಡುವುದಾಗಿ ಸಹಿ ಮಾಡಿದ್ದರು ನಿವೃತ್ತಿ ಘೋಷಣೆ ಮಾಡಿದ್ದಾರೆ. ತಂಡಕ್ಕೆ ತಮ್ಮಿಂದ ಯಾವುದೇ ರೀತಿಯ ನೆರವಾಗುತ್ತಿಲ್ಲ ಎಂದಿರುವ ಅವರು ಇನ್ನು ಕೆಲವು ತಿಂಗಳಿರುವಾಗಲೇ ನಿವೃತ್ತಿ ಘೋಷಿಸಿದ್ದಾರೆ. ಆದರೆ ಅವರಿಗೆ ಈ ಆವೃತ್ತಿ ಮುಗಿಯುತ್ತಿದ್ದಂತೆ ಟಿಮ್​ ಆ್ಯಂಬ್ರೋಸ್​ ಮತ್ತು ಜೀತನ್​ ಪಟೇಲ್​ ಜೊತೆಗೆ ಭರ್ಜರಿಯಾಗಿ ಬೀಳ್ಕೊಡುಗೆ ನೀಡಲು ವಾರ್​ವಿಕ್​ಶೈರ್​ ಕ್ರಿಕೆಟ್​ ಕ್ಲಬ್​ ನಿರ್ಧರಿಸಿತ್ತು. ಆದರೆ ಬೆಲ್​ ಎಲ್ಲರಿಗೂ ಶಾಕ್​ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.