ಮ್ಯಾಂಚೆಸ್ಟರ್: ವಿಶ್ವಕಪ್ ಎತ್ತಿ ಹಿಡಿಯುವ ನಿರೀಕ್ಷೆಯಲ್ಲಿರುವ ಇಂಗ್ಲೆಂಡ್ ತಂಡ ಇಂದು ಕ್ರಿಕೆಟ್ ಶಿಶು ಅಫ್ಘಾನಿಸ್ತಾನದ ವಿರುದ್ಧ ಕಣಕ್ಕಿಳಿಯುತ್ತಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.
ಇಂಗ್ಲೆಂಡ್ ತಂಡ ಗಾಯಗೊಂಡಿರುವ ಜಾಸನ್ ರಾಯ್ ಬದಲಿಗೆ ಜೇಮ್ಸ್ ವಿನ್ಸ್ರನ್ನು, ಪ್ಲಂಕೇಟ್ ಬದಲಿಗೆ ಮೊಯಿನ್ ಅಲಿಯನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಇತ್ತ ಅಫ್ಘನ್, ಝಾಜೈ ಬದಲಿಗೆ ನಜೀಬುಲ್ಲಾ ಜಾಡ್ರನ್, ಆಫ್ಟಾಬ್ ಆಲಂ ಬದಲಿಗೆ ದವ್ಲಾತ್ ಜಾಡ್ರನ್, ಹಮೀದ್ ಬದಲಿಗೆ ಮುಜೀಬ್ರನ್ನು ಆಯ್ಕೆ ಮಾಡಿಕೊಂಡಿದೆ.
ಅಫ್ಘಾನಿಸ್ತಾನ:
ನೂರ್ ಅಲಿ ಜಾಡ್ರನ್, ರಹಮತ್ ಷಾ, ಹಶ್ಮಾತುಲ್ಲಾ ಶಾಹಿದ್ದಿ, ಅಸ್ಗರ್ ಆಫ್ಘಾನ್, ಗುಲ್ಬಾದಿನ್ ನ ಯಿಬ್ (ಕ್ಯಾ), ಮೊಹಮ್ಮದ್ ನಬಿ, ಇಕ್ರಮ್ ಅಲಿ ಖಿಲ್ (ವಿ.ಕೀ), ನಜೀಬುಲ್ಲಾ ಜಾಡ್ರನ್, ರಶೀದ್ ಖಾನ್, ದವ್ಲಾತ್ಜಾಡ್ರನ್, ಮುಜೀಬ್ ಉರ್ ರಹಮಾನ್
ಇಂಗ್ಲೆಂಡ್:
ಇಯಾನ್ ಮಾರ್ಗನ್(ನಾಯಕ), ಜೇಮ್ಸ್ ವಿನ್ಸ್, ಜಾನಿ ಬೈರ್ಸ್ಟೋವ್, ಜೋ ರೂಟ್, ಬೆನ್ ಸ್ಟೋಕ್ಸ್, ಜಾಸ್ ಬಟ್ಲರ್, ಕ್ರಿಸ್ ವೋಕ್ಸ್, ಮೊಯಿನ್ ಅಲಿ, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್