ಪೋರ್ಟ್ ಎಲಿಜಬತ್: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 53 ರನ್ಗಳಿಂದ ಸೋಲುಕಾಣುವ ಮೂಲಕ ತವರಿನಲ್ಲೇ ಭಾರಿ ಮುಖಭಂಗ ಅನುಭವಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ತಂಡ ಬೆನ್ಸ್ಟೋಕ್ಸ್(120) ಹಾಗೂ ಒಲ್ಲಿ ಪೋಪ್(135*) ಅವರ ಭರ್ಜರಿ ಶತಕದ ನೆರವಿನಿಂದ 152 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 499 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತು.
ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ನಲ್ಲಿ, ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ನ ಯುವ ಸ್ಪಿನ್ನರ್ ಡೊಮೆನಿಕ್ ಬೆಸ್(5) ಹಾಗೂ ಬ್ರಾಡ್(3) ಬೌಲಿಂಗ್ ದಾಳಿಗೆ ಸಿಲುಕಿ 209ರನ್ ಗಳಿಗೆ ಆಲ್ಔಟ್ ಆಗಿ ಪಾಲೋಆನ್ಗೆ ತುತ್ತಾಗಿತ್ತು. 63 ರನ್ಗಳಿಸಿದ ಕ್ವಿಂಟನ್ ಡಿ ಕಾಕ್ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.
-
150th away Test win for England 👏 #SAvENG pic.twitter.com/xbHOxFhbjl
— ICC (@ICC) January 20, 2020 " class="align-text-top noRightClick twitterSection" data="
">150th away Test win for England 👏 #SAvENG pic.twitter.com/xbHOxFhbjl
— ICC (@ICC) January 20, 2020150th away Test win for England 👏 #SAvENG pic.twitter.com/xbHOxFhbjl
— ICC (@ICC) January 20, 2020
290 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ 4ನೇ ದಿನವೇ 102 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನ ದಾರಿ ಹಿಡಿದಿತ್ತು. ಆ ಮೊತ್ತಕ್ಕೆ 135 ರನ್ ಸೇರಿಸಿ ತನ್ನಲ್ಲೇ ವಿಕೆಟ್ ಕಳೆದುಕೊಂಡಿತು. ಕೇಶವ್ ಮಹಾರಾಜ 71 ರನ್ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ಪರ ಎರಡೂ ಇನ್ನಿಂಗ್ಸ್ನಿಂದ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು.
ಜೋ ರೂಟ್ 4 ವಿಕೆಟ್, ಮಾರ್ಕ್ ವುಡ್ 3 ವಿಕೆಟ್, ಬ್ರಾಡ್ ಹಾಗೂ ಡೊಮೆನಿಕ್ ಬೆಸ್ ತಲಾ ಒಂದು ವಿಕೆಟ್ ಪಡೆದು ಇಂಗ್ಲೆಂಡ್ಗೆ ಜಯ ತಂದುಕೊಟ್ಟರು.
ಈ ಜಯದೊಂದಿಗೆ ಇಂಗ್ಲೆಂಡ್ ತಂಡ 4 ಪಂದ್ಯಗಳ ಸರಣಿಯನ್ನು 2-1ರಲ್ಲಿ ಮುನ್ನಡೆ ಸಾಧಿಸಿತು. ಆಕರ್ಷಕ ಶತಕ ಹಾಗೂ 6 ಕ್ಯಾಚ್ ಪಡೆದ ಒಲ್ಲಿ ಪೋಪ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.