ಅಹ್ಮದಾಬಾದ್: ನಂಬಲಾಸಾಧ್ಯವಾದ ಬೌಲಿಂಗ್ ದಾಳಿ ಮತ್ತು ವಿಶ್ವಾಸಾರ್ಹ ಬ್ಯಾಟ್ಸ್ಮನ್ಗಳನ್ನು ಹೊಂದಿರುವ ಭಾರತ ಅಸಾಧಾರಣ ತಂಡವಾಗಿದೆ. ಆದರೆ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡಿರುವ ಇಂಗ್ಲೆಂಡ್ ತಂಡ ಡೇ ಅಂಡ್ ನೈಟ್ ಟೆಸ್ಟ್‌ನಲ್ಲಿ ಅತಿಥೇಯ ತಂಡದ ವಿರುದ್ಧ ಗೆಲುವು ಸಾಧಿಸಲಿದೆ ಎಂದು ಯುವ ಬ್ಯಾಟ್ಸ್ಮನ್ ಜ್ಯಾಕ್ ಕ್ರಾಲೆ ಅಭಿಪ್ರಾಯಪಟ್ಟಿದ್ದಾರೆ.
4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ತಂಡಗಳ ತಲಾ ಒಂದೊಂದು ಪಂದ್ಯ ಗೆದ್ದು 1-1 ರಲ್ಲಿ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿವೆ. ಇದೀಗ ಬುಧವಾರದಿಂದ ಮೊಟೆರಾಟದಲ್ಲಿ ಆರಂಭವಾಗಲಿರುವ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಸರಣಿ ಮುನ್ನಡೆಗಾಗಿ ಸೆಣಸಾಡಲಿವೆ.
ಬ್ರಿಟಿಷ್ ಮಾಧ್ಯಮದ ಜೊತೆ ಮಾತನಾಡುವ ವೇಳೆ ಚಲನೆಯುಳ್ಳ ಚೆಂಡಿನಲ್ಲಿ ಇಂಗ್ಲೆಂಡ್ ತಂಡ ನೆಚ್ಚಿನ ತಂಡವಾಗಲಿಯದೆಯೇ ಎಂದು ಕೇಳಿದ್ದಕ್ಕೆ ಉತ್ತರಿಸಿರುವ ಕ್ರಾಲೆ, ನಾವು ಯಾವ ರೀತಿ ಆಡಬೇಕೆಂಬುದು ನಮ್ಮ ಕೈಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
ನಾವು ಚೆಂಡು ಹೆಚ್ಚು ಚಲನೆ ಕಾಣುವ ಪರಿಸ್ಥಿತಿಯಲ್ಲಿ ಆಡಿ ಬೆಳೆದಿದ್ದೇವೆ. ಸೀಮಿಂಗ್ ಪರಿಸ್ಥಿತಿಗಳಲ್ಲಿ ತಡವಾಗಿ ಚೆಂಡನ್ನು ಆಡಲು ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ ನಾವು ಭಾರತೀಯರಿಗಿಂತ ಹೆಚ್ಚು ಆ ರೀತಿಯ ಮೈದಾನದಲ್ಲಿ ಆಡಲು ಪ್ರವೀಣರಾಗಿದ್ದೇವೆ ಎಂದು ನೀವು ಹೇಳಬಹುದು ಎಂದು ಕ್ರಾಲೆ ಹೇಳಿದ್ದಾರೆ.
ಆದರೂ ಭಾರತ ತಂಡದಲ್ಲಿ ಸ್ಪಿನ್ ಬೌಲಿಂಗ್ಗೆ ಆಡುವ ಅತ್ಯುತ್ತಮ ಆಟಗಾರರಿದ್ದಾರೆ. ಜೊತೆಗೆ ಅದ್ಭುತ ವೇಗದ ಬೌಲಿಂಗ್ ದಾಳಿ ಹಾಗೂ ಕೌಶಲ್ಯವುಳ್ಳ ಬ್ಯಾಟ್ಸ್ಮನ್ಗಳಿದ್ದಾರೆ. ಆದರೆ ಇದು ಅವರಿಗೆ ತುಂಬಾ ಅನುಕೂಲಕಾರಿಯೇನಲ್ಲ. ಆದರೆ ಬುಮ್ರಾ -ಇಶಾಂತ್ ಶರ್ಮಾ ರಂತಹ ಬೌಲರ್ಗಳನ್ನು ಹೊಂದಿರುವುದರಿಂದ ಅವರದು ಸಮರ್ಥ ತಂಡ ಎಂದು ಒಪ್ಪಿಕೊಂಡಿದ್ದಾರೆ.
ಆದರೆ ಪಿಂಕ್ ಬಾಲ್ ರೆಡ್ ಬಾಲ್ಗಿಂತ ಹೆಚ್ಚು ಸ್ವಿಂಗ್ ಹೊಂದಿರುತ್ತದೆ. ನಾವು ವೇಗಿಗಳಿಂದ ಈ ಪಂದ್ಯದಲ್ಲಿ ಹೆಚ್ಚಿನದನ್ನು ನಿರೀಕ್ಷಿಸಬಹುದಾಗಿದೆ. ಅವರು ಕಳೆದ ಎರಡು ಟೆಸ್ಟ್ ಪಂದ್ಯಗಳಿಗಿಂತಲೂ ಮೂರನೇ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸುತ್ತಾರೆ ಎಂದು ನಾನು ಭಾವಿಸಿದ್ದೇನೆ. ಆದರೂ ಸ್ಪಿನ್ನರ್ಗಳನ್ನು ಕಡೆಗಣಿಸುವಂತಿಲ್ಲ. ಅವರೂ ಕೂಡ ಪಂದ್ಯದಲ್ಲಿ ಬಹುದೊಡ್ಡ ಪಾತ್ರವನ್ನು ನಿರ್ವಹಿಸಲಿದ್ದಾರೆ. ಆದರೆ ಸೀಮರ್ಸ್ ಬ್ಯಾಟ್ಸ್ಮನ್ಗಳಿಗೆ ಕಠಿಣವಾಗುತ್ತಾರೆ ಎಂದು ನನ್ನ ಭಾವನೆ ಎಂದಿದ್ದಾರೆ.
ಚೆನ್ನೈನಲ್ಲಿ ಡ್ರೆಸ್ಸಿಂಗ್ ರೂಮ್ನಲ್ಲಿ ಮಾರ್ಬಲ್ ಪ್ಲೋರ್ ಮೇಲೆ ಬಿದ್ದು ಗಾಯಗೊಂಡಿದ್ದ ಕ್ರಾಲೆ ಮಣಿಕಟ್ಟಿಗೆ ಗಾಯ ಮಾಡಿಕೊಂಡಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿದ್ದು, ಮೂರನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
ಇದನ್ನು ಓದಿ:ಕೊಹ್ಲಿ ಎದುರು ಆಡಿದ್ದೆ, ಇದೀಗ ಅವರ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅದೃಷ್ಟ ಸಿಕ್ಕಿದೆ: ತೆವಾಟಿಯಾ