ಲಂಡನ್ : ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 2021ರ ಬೇಸಿಗೆ ವೇಳಾಪಟ್ಟಿ ಪ್ರಕಟಿಸಿದೆ. ಮೊದಲ ಟಾಪ್ ರ್ಯಾಂಕ್ ತಂಡವಾದ ನ್ಯೂಜಿಲ್ಯಾಂಡ್ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಸೋಮವಾರ ನಾಲ್ಕು ರಾಷ್ಟ್ರಗಳೊಂದಿಗಿನ ಪಂದ್ಯಗಳ ವೇಳಾಪಟ್ಟಿಯನ್ನು ಇಸಿಬಿ ಪ್ರಕಟಿಸಿದೆ. ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ವಿರುದ್ಧ ಜೂನ್ 2ರಿಂದ 6ವರೆಗೆ ಲಾರ್ಡ್ಸ್ನಲ್ಲಿ ಮೊದಲ ಟೆಸ್ಟ್ ಮತ್ತು ಎಡ್ಗ್ಬಸ್ಟನ್ನಲ್ಲಿ ಜೂನ್ 10ರಿಂದ 2ನೇ ಟೆಸ್ಟ್ ಪಂದ್ಯ ನಡೆಯಲಿದೆ.
ಈ ಸರಣಿ ಮುಗಿಯುತ್ತಿದ್ದಂತೆ ಶ್ರೀಲಂಕಾ ತಂಡದ ವಿರುದ್ಧ ಸೀಮಿತ ಓವರ್ಗಳ ಸರಣಿಗೆ ಆತಿಥ್ಯ ನೀಡಲಿದೆ. ದ್ವೀಪ ರಾಷ್ಟ್ರದ ವಿರುದ್ಧ ಆಂಗ್ಲರ ತಂಡ 3 ಪಂದ್ಯಗಳ ಏಕದಿನ ಸರಣಿ ಮತ್ತು 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ.
ಜೂನ್ 23, 24 ಮತ್ತು 26ರಂದು ಟಿ20 ಪಂದ್ಯಗಳು ನಡೆಯಲಿವೆ. ನಂತರ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಜುಲೈ 6ರಿಂದ 20ರವರೆಗೆ ಪಾಕಿಸ್ತಾನದ ವಿರುದ್ಧ ತಲಾ ಮೂರು ಟಿ20 ಮತ್ತು 3 ಏಕದಿನ ಸರಣಿಯನ್ನಾಡಲಿದೆ. ಇದರ ಬೆನ್ನಲ್ಲೇ ಭಾರತದ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.
ಇದನ್ನು ಓದಿ: ನಾನು ಆಡುವ ಬಗ್ಗೆ ಮ್ಯಾನೇಜ್ಮೆಂಟ್ ನಿರ್ಧರಿಸಲಿದೆ : ವೃದ್ಧಿಮಾನ್ ಸಹಾ